ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮದ ಬಸನಗವಡ ಮಾಲಿಪಾಟೀಲ್ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ದೇವಮ್ಮ ಹಾಗೂ ಆರೋಪಿ ದುರುಗಮ್ಮ ಅವರ ನಡುವೆ ವಿನಾಕಾರಣಕ್ಕೆ ಜಗಳ ಶುರುವಾಗಿದ್ದು, ಇದರಿಂದ ಮನನೊಂದ ದೇವಮ್ಮ ಜಮೀನಿನಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ದೇವದುರ್ಗ(ಫೆ.18): ಕ್ಷುಲ್ಲಕ ಕಾರಣಕ್ಕೆ ಮಹಿಳೆಯರು ಜಗಳವಾಡಿದ್ದು, ಇದರಿಂದ ಮನನೊಂದು ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊನ್ನಟಗಿಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದ ನಿವಾಸಿ ದೇವಮ್ಮ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮದ ಬಸನಗವಡ ಮಾಲಿಪಾಟೀಲ್ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ದೇವಮ್ಮ ಹಾಗೂ ಆರೋಪಿ ದುರುಗಮ್ಮ ಅವರ ನಡುವೆ ವಿನಾಕಾರಣಕ್ಕೆ ಜಗಳ ಶುರುವಾಗಿದ್ದು, ಇದರಿಂದ ಮನನೊಂದ ದೇವಮ್ಮ ಜಮೀನಿನಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಕಂತೂರು ಸಕ್ಕರೆ ಕಾರ್ಖಾನೆ ಸುರಿದ ಬೆಂಕಿಯ ಬೂದಿಯಲ್ಲಿ ಸುಟ್ಟುಹೋದ ರೈತ, ನೋವು ತಾಳಲಾರದೇ ಆತ್ಮಹತ್ಯೆ!

ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾವಿಯಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಗೆ ಸಾಗಿಸಿದರು. ಘಟನೆಗೆ ಸಂಬಂಧಿಸಿದಂತೆ ಮೃತ ದೇವಮ್ಮಳೊಂದಿಗೆ ಜಗಳವಾಡಿದ ಆರೋಪಿ ದುರುಗಮ್ಮ ಹಾಗೂ ಆಕೆಯ ಪತಿ ಸಿದ್ದಪ್ಪರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.