Asianet Suvarna News Asianet Suvarna News

ಮಂಡ್ಯ: ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ, ಕಾರಣ?

ಗ್ರಾಮದ ಪದ್ಮರಾಜ್ ಪತ್ನಿ ಸುಲೋಚನ ಮೃತ ಗೃಹಿಣಿ. ಕೆನ್ನಾಳು ಗ್ರಾಮದ ಪದ್ಮರಾಜ್, ಪತ್ನಿ ಸುಲೋಚನ ಎಂಬುವರು ಮನೆ ನಿರ್ಮಾಣಕ್ಕಾಗಿ ಖಾಸಗಿ ಸಂಘ-ಸಂಸ್ಥೆ ಸೇರಿದಂತೆ ಲಕ್ಷಾಂತ ರು. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. 

32 Year Old Married Woman Committed Suicide at Pandavapura in Mandya grg
Author
First Published Dec 27, 2023, 11:00 AM IST

ಪಾಂಡವಪುರ(ಡಿ.27):  ಸಾಲಭಾದೆಯಿಂದ ಗೃಹಿಣಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಪದ್ಮರಾಜ್ ಪತ್ನಿ ಸುಲೋಚನ (32) ಮೃತ ಗೃಹಿಣಿ. ಕೆನ್ನಾಳು ಗ್ರಾಮದ ಪದ್ಮರಾಜ್, ಪತ್ನಿ ಸುಲೋಚನ ಎಂಬುವರು ಮನೆ ನಿರ್ಮಾಣಕ್ಕಾಗಿ ಖಾಸಗಿ ಸಂಘ-ಸಂಸ್ಥೆ ಸೇರಿದಂತೆ ಲಕ್ಷಾಂತ ರು. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. 

ಸಾಲ ತೀರಿಸುವುದಕ್ಕಾಗಿಯೇ ಮೃತ ಗೃಹಿಣಿ ಸುಲೋಚನ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಹಿಂಸೆ ಹೆಚ್ಚಾಗಿ ಸಾಲ ತೀರಿಸುವಂತೆ ಮನೆಗಳ ಮುಂದೆ ಬಂದು ಸಾಲಗಾರರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಸುಲೋಚನ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ತಾಯಿ ಪುಟ್ಟಲಕ್ಷ್ಮಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಬೆಂಗಳೂರು: ಅಪಾರ್ಟ್ಮೆಂಟ್‌ ಟೆರೆಸ್ಸಿಂದ ಜಿಗಿದು ಜಿಮ್‌ ತರಬೇತುದಾರ ಆತ್ಮಹತ್ಯೆ

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹವನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತರಿಗೆ ಪತಿ ಪದ್ಮರಾಜ್, ಮಕ್ಕಳಾದ ಲಲಿತ, ನಂದನ್‌ಗೌಡ, ಜನನಿ ಇದ್ದಾರೆ. ಗ್ರಾಮದ ಹೊರವಲಯದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios