Asianet Suvarna News Asianet Suvarna News

Bengaluru Suicide Cases: ಪತ್ನಿಯ ಬೇಡಿಕೆ ಪೂರೈಸಲಾಗದೇ ಪತಿ ಆತ್ಮಹತ್ಯೆ

*   ಪತ್ನಿಯ ಐಷಾರಾಮಿ ಜೀವನದ ಬೇಡಿಕೆಗಳ ಈಡೇರಿಸಲಾಗದೆ ಪತ್ನಿ ನೇಣಿಗೆ ಶರಣು
*   ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
*   ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
 

31 Year Old Man Committed Suicide in Bengaluru grg
Author
Bengaluru, First Published Jan 26, 2022, 4:47 AM IST

ಬೆಂಗಳೂರು(ಜ.26):  ಪತ್ನಿಯ ಐಷಾರಾಮಿ ಜೀವನದ ಬೇಡಿಕೆ(Luxury Life) ಈಡೇರಿಸಲಾಗದೇ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ ಮಂಜುನಾಥನಗರದ ನಿವಾಸಿ ಚಾಂದ್‌ಪಾಷಾ(31) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ ಪತ್ನಿ ಉಸ್ನಾ ಮನೆಯ ಬೆಡ್‌ ರೂಮ್‌ನಲ್ಲಿ ಮಲಗಿದ್ದರು. ಚಾಂದ್‌ಪಾಷಾ ಹಾಲ್‌ನಲ್ಲಿ ಮಲಗಿದ್ದರು. ಉಸ್ನಾ ಬೆಳಗ್ಗೆ ಎದ್ದು ನೋಡಿದಾಗ ಚಾಂದಾಪಾಷ್‌ ಹಾಲ್‌ನಲ್ಲಿ ನೇಣು ಬಿಗಿದುಕೊಂಡಿರುವುದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಚಾಂದ್‌ಪಾಷಾ ಕೌಟುಂಬಿಕ ಕಲಹದಿಂದ(Family Strife) ಬೇಸತ್ತು ಮೊದಲ ಪತ್ನಿಯಿಂದ ದೂರುವಾಗಿದ್ದ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಉಸ್ನಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ(Marriage). ಉಸ್ನಾಗೂ ಇದು ಎರಡನೇ ಮದುವೆಯಾಗಿತ್ತು. ಉಸ್ನಾಗೆ ಐಷಾರಾಮಿ ಜೀವನಕ್ಕೆ ಮಾರುಹೋಗಿದ್ದಳು. ಚಿನ್ನಾಭರಣ(Gold) ಧರಿಸಬೇಕು. ದುಬಾರಿ ಬ್ರ್ಯಾಂಡೆಡ್‌ ಬಟ್ಟೆ ಧರಿಸಬೇಕು. ಒಳ್ಳೆಯ ಮನೆ ಮಾಡಬೇಕು ಎಂಬ ಕನಸು ಕಂಡಿದ್ದಳು. ಪತಿಯ ಬಳಿಯೂ ತನ್ನ ಕನಸುಗಳ ಬಗ್ಗೆ ಪದೇ ಪದೇ ಹೇಳುತ್ತಿದ್ದಳು ಎನ್ನಲಾಗಿದೆ.

Woman Shot Dead: ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ!

ಮೆಕ್ಯಾನಿಕ್‌ ಆಗಿರುವ ಚಾಂದ್‌ಪಾಷಾ ದುಡಿಮೆ ಬಹಳ ಕಡಿಮೆ ಇತ್ತು. ಹೀಗಾಗಿ ಪತ್ನಿ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ನಿತ್ಯ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ದಂಪತಿ ಜಗಳ ನೋಡಲಾಗದೆ ಚಾಂದ್‌ಪಾಷಾ ತಾಯಿ ಯಲಹಂಕದ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ರಾತ್ರಿ ಚಾಂದ್‌ಪಾಷಾ ದಂಪತಿ ನಡುವೆ ಸಣ್ಣ ಗಲಾಟೆಯಾಗಿದೆ. ಈ ವೇಳೆ ಪತ್ನಿ ಉಸ್ನಾ ಬೆಡ್‌ ರೂಮ್‌ಗೆ ಹೋಗಿ ಮಲಗಿದ್ದಾಳೆ. ಚಾಂದ್‌ ಪಾಷಾ ಹಾಲ್‌ನಲ್ಲಿ ಮಲಗಿದ್ದಾನೆ. ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಬೆತ್ತಲೆ ಗ್ಯಾಂಗ್‌ಗೆ ಮತ್ತೊಂದು ಬಲಿ?: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ

ಬೆಂಗಳೂರು(Bengaluru):  ವೈಯಕ್ತಿಕ ಕಾರಣಕ್ಕೆ ಬೇಸರಗೊಂಡು ಮಲ್ಲೇಶ್ವರ ರೈಲ್ವೆ ಹಳಿಗಳ ಬಳಿ ರೈಲಿಗೆ ಸಿಲುಕಿ 24 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಈ ಘಟನೆಗೆ ಸಾಮಾಜಿಕ ಜಾಲತಾಣದ ‘ಬೆತ್ತಲೆ ಗ್ಯಾಂಗ್‌ ಬ್ಲ್ಯಾಕ್‌ಮೇಲ್‌’ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಎಂಜಿನಿಯರಿಂಗ್‌ ಮುಗಿಸಿದ್ದ ಯುವಕ, ತನ್ನ ಕುಟುಂಬದ ಜತೆ ಮಲ್ಲೇಶ್ವರದಲ್ಲಿ ನೆಲೆಸಿದ್ದ. ಎರಡು ದಿನಗಳ ಹಿಂದೆ ರೈಲಿಗೆ ಸಿಲುಕಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಮೃತನ ಮೊಬೈಲ್‌ ಅನ್ನು ಪೊಲೀಸರು ಪರಿಶೀಲಿಸಿದಾಗ ಅಪರಿಚಿತರು ಬ್ಲ್ಯಾಕ್‌ಮೇಲ್‌ ಮಾಡಿರುವ ಸಂದೇಶಗಳು ಪತ್ತೆಯಾಗಿವೆ ಎಂದು ಮೂಲಗಳು ಹೇಳಿವೆ.

Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ

ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತ ಯುವಕನನ್ನು ಬ್ಲ್ಯಾಕ್‌ಮೇಲ್‌ ಮಾಡಿರುವುದು ಗೊತ್ತಾಗಿದೆ. ಮರ್ಯಾದೆಗೆ ಅಂಜಿ ಅಥವಾ ಬೆದರಿಕೆಗೆ ಹೆದರಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಜೀವ ಅಮೂಲ್ಯವಾದ್ದದ್ದು ಎಂದು ರೈಲ್ವೆ ಪೊಲೀಸ್‌ ವಿಭಾಗದ ಎಡಿಜಿಪಿ ಎಸ್‌.ಭಾಸ್ಕರ್‌ ರಾವ್‌(Bhaskar Rao) ಟ್ವಿಟರ್‌ನಲ್ಲಿ ವಿನಂತಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ‘ಬೆತ್ತಲೆ ಗ್ಯಾಂಗ್‌’ನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಕೆಂಗೇರಿ ಸಮೀಪ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಬ್ಬ ಯುವಕ ಕಿಡಿಗೇಡಿಗಳ ಬೆದರಿಕೆಗೆ ಬಲಿಯಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಸುಂದರ ಯುವತಿಯರ ಸೋಗಿನಲ್ಲಿ ತಮ್ಮ ಬಲೆಗೆ ಬೀಳಿಸಿಕೊಂಡು ಬಳಿಕ ಅವರನ್ನು ಮೋಹಕ ಮಾತುಗಳಿಂದ ಪ್ರೇರೇಪಿಸಿ ನಗ್ನರಾಗಿಸಿ ವಿಡಿಯೋ ಮಾಡಿಕೊಳ್ಳುತ್ತಾರೆ. ಆನಂತರ ಆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌(Blackmail) ಮೂಲಕ ಕೆಲವು ದುಷ್ಕರ್ಮಿಗಳು ಹಣ ಸುಲಿಗೆ ಮಾಡುತ್ತಿದ್ದಾರೆ. ಈ ರೀತಿಯ ಸೈಬರ್‌ ದುರುಳರ ಹಾವಳಿ ಹೆಚ್ಚಾಗಿದ್ದು, ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
 

Follow Us:
Download App:
  • android
  • ios