Asianet Suvarna News Asianet Suvarna News

ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ಬೈಕ್‌ನಲ್ಲಿ ಯುವಕರಿಬ್ಬರ ಸಾಹಸಕ್ಕೆ 31 ವರ್ಷದ ಮಹಿಳೆ ಸಾವು!

ಸಾಮಾಜಿಕ ಜಾಲತಾಣಕ್ಕೆ ರೀಲ್ಸ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಅತಿರೇಖದ ರೀಲ್ಸ್‌ನಿಂದ ಹಲವು ಅವಘಡಗಳು ಸಂಭವಿಸಿದೆ. ಇದೀಗ ಯುವಕರಿಬ್ಬರು ರೀಲ್ಸ್‌ಗಾಗಿ ಬೈಕ್‌ನಲ್ಲಿ ಸಾಹಸ ಮಾಡಿದ್ದಾರೆ. ಇದರ ಪರಿಣಾಮ 31 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
 

31 year lady died in accident after youths shot Instagram reels in bike stunt Pune ckm
Author
First Published Mar 8, 2023, 7:44 PM IST | Last Updated Mar 8, 2023, 7:44 PM IST

ಪುಣೆ(ಮಾ.07): ಅತಿರೇಖದ ರೀಲ್ಸ್‌ನಿಂದ ಈಗಾಗಲೇ ಹಲವು ದುರಂತಗಳು ನಡೆದಿದೆ. ರೀಲ್ಸ್‌ಗಾಗಿ ನಿಯಮ ಮೀರಿ ವರ್ತಿಸಿದ ಘಟನೆಗಳೂ ವರದಿಯಾಗಿದೆ. ಇಷ್ಟಾದರೂ ಹುಚ್ಚಾಟದ ಮೂಲಕ ರೀಲ್ಸ್ ಮಾಡುವವರ ಸಂಖ್ಯೆ ಕಡಿಮೆ ಏನೂ ಇಲ್ಲ. ಇದೀಗ ಯುವಕರಿಬ್ಬರು ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಮೂಲಕ ಸಾಹಸ ಮಾಡಿದ್ದಾರೆ. ಇನ್‌‌ಸ್ಟಾಗ್ರಾಂ ರೀಲ್ಸ್‌ಗಾಗಿ ಈ ಸಾಹಸ ಮಾಡಿದ್ದಾರೆ. ಆದರೆ ಬೈಕ್ ಮೂಲಕ ಸಾಹಸ ಮಾಡುತ್ತಿರುವ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 31 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅತೀ ವೇಗವಾಗಿ ಬೈಕ್ ಡಿಕ್ಕಿ ಹೊಡೆದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಮಹಿಳೆ ಮೃತಪಟ್ಟಿದ್ದಾರೆ. ಈ ಘಟನೆ ಪುಣೆಯ ಮೊಹಮ್ಮದ್ ವಾಡಿಯಲ್ಲಿ ನಡೆದಿದೆ.

ಆಯನ್ ಶೇಕ್ ಹಾಗೂ ಜಾಯದ್ ಜಾವೇದ್ ಇಬ್ಬರು ಬೈಕ್‌ನಲ್ಲಿ ಹುಚ್ಚಾಟವಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುತ್ತಾ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ಆದರೆ ಅತೀ ವೇಗದಿಂದ ಸಾಗುತ್ತಿದ್ದ ಬೈಕ್‌ನಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದ ಆಯನ್ ಶೇಕ್ ಹಾಗೂ ಜಾಯದ್ ಇಬ್ಬರ ಗಮನ ರೀಲ್ಸ್ ಮೇಲೆ ನೆಟ್ಟಿದೆ. ಇದರ ಪರಿಣಾಮ ಬೈಕ್ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. 

ಯುವಕರ ಸೋಶಿಯಲ್ ಮೀಡಿಯಾ ಸ್ಟಂಟ್‌ಗೆ ಮದುವೆ ಪತ್ರಿಕೆ ಹಂಚುತ್ತಿದ್ದ ಯೋಧ ಬಲಿ!

ಅಪಘಾತದ ತೀವ್ರತೆಗೆ ಮಹಿಳೆ ಮಾರುದ್ದ ದೂರ ಹೋಗಿ ಬಿದ್ದಿದ್ದಾರೆ. ಬೈಕ್ ಹಾಗೂ ರಸ್ತೆ ಬಡಿದು ಬಿದ್ದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತ ಆಯನ್ ಶೇಕ್ ಹಾಗೂ ಜಾಯೆದ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದರು. ಮಾರ್ಚ್ 6 ರ ಸಂಜೆ 5.30ಕ್ಕೆ ಈ ಆಪಘಾತ ಸಂಭವಿಸಿತ್ತು. ತಕ್ಷಣವೇ ಮಹಿಳೆ ಆಸ್ಪತ್ರೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. 

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಣೆಯ ಹಲವು ರಸ್ತೆಗಳಲ್ಲಿ ಈ ರೀತಿಯ ಸ್ಟಂಟ್ ಹಾಗೂ ಹುಚ್ಚಾಟಗಳು ಹೆಚ್ಚಾಗುತ್ತಿದೆ. ರೀಲ್ಸ್‌ಗಾಗಿ ಬೈಕ್ ಮೂಲಕ ಸ್ಟಂಟ್ ಪ್ರದರ್ಶನ ಸೇರಿದಂತೆ ಹಲವು ಸಾಹಸ ಮಾಡುತ್ತಿದ್ದಾರೆ. ಇದೀಗ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾಹಸ ಪ್ರದರ್ಶನಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಯುವಕನ ಡೇಂಜರಸ್ ಬೈಕ್ ಸ್ಟಂಟ್: Before After ವಿಡಿಯೋ ಶೇರ್ ಮಾಡಿದ ಪೊಲೀಸರು

ನಗರ ಹಾಗೂ ಹೆದ್ದಾರಿಗಳಲ್ಲಿ ಈ ರೀತಿಯ ಸ್ಟಂಟ್ ಪ್ರದರ್ಶನಗಳು ಹೆಚ್ಚಾಗುತ್ತಿದೆ. ಈ ಕುರಿತು ಪೊಲೀಸರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಪ್ರಕರಣ ಸಂಖ್ಯೆ ಕಡಿಮೆಯಾಗಿಲ್ಲ. ಇದೀಗ ಯುವಕರಿಬ್ಬರ ಸಾಹಸಕ್ಕೆ ಅಮಾಯಕ ಮಹಿಳೆ ಮೃತಪಟ್ಟಿರುವುದು ದುರಂತ. ಇಂತಹ ಘಟನೆ ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

Latest Videos
Follow Us:
Download App:
  • android
  • ios