ರಾಜೇಶ್ ಕುಮಾರ್ ಅವರು ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಅಡ್ಡಂಕಿ ಮಂಡಲದವರಾಗಿದ್ದು, ಅಮೆರಿಕದ ಸ್ಟಾರ್ಟ್‌ಅಪ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮಗನನ್ನು ಕಾಪಾಡಲು ಹೋಗಿ ಬೀಚ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಫ್ಲೋರಿಡಾ (ಜುಲೈ 4, 2023): ಆಂಧ್ರಪ್ರದೇಶದ 42 ವರ್ಷದ ಅಮೆರಿಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ ಪೊಟ್ಟಿ ವೆಂಕಟ ರಾಜೇಶ್ ಕುಮಾರ್ ಫ್ಲೋರಿಡಾದ ಬೀಚ್‌ನಲ್ಲಿ ತನ್ನ ಮಗನನ್ನು ರಕ್ಷಿಸುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸೋಮವಾರ ತಿಳಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಗಿನ ಜಾವ 4.30ರ ಸುಮಾರಿಗೆ ಪೊಟ್ಟಿ ವೆಂಕಟ ರಾಜೇಶ್ ಕುಮಾರ್ ನಿಧನರಾಗಿದ್ದಾರೆ ಎಂದು ಅವರ ಕಿರಿಯ ಸಹೋದರ ಪಿ. ವಿಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ರಾಜೇಶ್ ಕುಮಾರ್ ಅವರು ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಅಡ್ಡಂಕಿ ಮಂಡಲದವರಾಗಿದ್ದು, ಅಮೆರಿಕದ ಸ್ಟಾರ್ಟ್‌ಅಪ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇನ್ನು, ಮೃತ ವ್ಯಕ್ತಿಯ ಸಂಬಂಧಿಕರು ಕಷ್ಟಕರ ಸಮಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ರಾಜೇಶ್‌ ಕುಮಾರ್ ಅವರ ಮೃತದೇಹವನ್ನು ಮರಳಿ ತರಲು ಸಹಾಯ ಮಾಡಲು ಮತ್ತು ಅವರ ದುಃಖಿತ ಕುಟುಂಬ ಸದಸ್ಯರಿಗೆ ಬೆಂಬಲವನ್ನು ನೀಡುವಂತೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಕುಟುಂಬಸ್ಥರ ವಾಪಸಾತಿಗೆ ಅನುಕೂಲವಾಗುವಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮೃತ ಟೆಕ್ಕಿಯ ಪಾಸ್‌ಪೋರ್ಟ್ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಕೇರಳ ಮೂಲದ ವ್ಯಕ್ತಿ: 40 ವರ್ಷ ಶಿಕ್ಷೆ ವಿಧಿಸಿದ ಬ್ರಿಟನ್ ಕೋರ್ಟ್‌

ಮೃತ ಟೆಕ್ಕಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಫ್ಲೋರಿಡಾದ ಬ್ರಿಡ್ಜ್‌ 7 ವಾಟರ್ ಸಮುದಾಯದಲ್ಲಿ ವಾಸಿಸುತ್ತಿದ್ದರು ಎಂದೂ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಜುಲೈ 4 ರಂದು ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ದೀರ್ಘ ರಜಾದಿನವನ್ನು ಆಚರಿಸುತ್ತದೆ. ಇದೇ ರೀತಿ, ರಾಜೇಶ್‌ ಕುಮಾರ್‌ ತಮ್ಮ ಕುಟುಂಬದೊಂದಿಗೆ ಹೊರಗೆ ಹೋಗಲು ನಿರ್ಧರಿಸಿದರು ಎಂದು ಅವರ ಸಹೋದರ ವಿಜಯ್ ಕುಮಾರ್‌ ಟೆಕ್ಕಿಯ ಸಾವಿಗೆ ಕಾರಣವಾದ ಘಟನೆಗಳ ಸರಪಳಿಯನ್ನು ವಿವರಿಸಿದರು.

ರಾಜೇಶ್ ಕುಮಾರ್‌ ಮತ್ತು ಅವರ ಕುಟುಂಬ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಬೀಚ್‌ಗೆ ತೆರಳಿದ್ದರು. ಮಕ್ಕಳು ಮುಂದೆ ಸಮುದ್ರಕ್ಕೆ ಹೋಗಿರುವುದನ್ನು ಗಮನಿಸಿದ ಅವರು ಅವರ ಹಿಂದೆ ಓಡಿ ತನ್ನ ಮಗನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದೊಡ್ಡ ಅಲೆ ಹಿಂಬಾಲಿಸಿ ರಾಜೇಶನನ್ನೂ ಒಳಗೆ ಎಳೆದುಕೊಂಡಿತು ಎಂದು ಆತನ ಸಹೋದರ ತಿಳಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ

ರಾಜೇಶ್ ಕುಮಾರ್‌ ಅವರನ್ನು ದಡಕ್ಕೆ ಕರೆತರುವ ವೇಳೆಗೆ, ವಿಜಯ್ ಅವರ ಸಹೋದರ ಪ್ರಜ್ಞಾಹೀನರಾಗಿದ್ದರು ಮತ್ತು ತಕ್ಷಣ ಅವರ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ವಾಸಕೋಶಕ್ಕೆ ನೀರು ನುಗ್ಗಿದ್ದರಿಂದ ತಂದೆಯ ಜೊತೆಗೆ ಮಗ ಕೂಡ ಪ್ರಜ್ಞೆ ತಪ್ಪಿ ಬಿದ್ದಿದ್ದ ಎಂದೂ ವಿಜಯ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ, ರಾಜೇಶ್ ಕುಮಾರ್‌ ಅವರ ಮಗ ಚಿಕಿತ್ಸೆಗೆ ಪ್ರತಿಕ್ರಿಯಿಸಿದ ಮತ್ತು ಪ್ರಸ್ತುತ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಸಾಫ್ಟ್‌ವೇರ್ ಎಂಜಿನಿಯರ್‌ ಮೃತಪಟ್ಟಿದ್ದಾರೆ. ಮಗನಿಗೆ ಪ್ರಜ್ಞೆ ಬಂದಿದ್ದು, ಮಾತನಾಡಲು ಸಮರ್ಥನಾಗಿದ್ದಾನೆ ಎಂದೂ ವಿಜಯ್ ಕುಮಾರ್‌ ಹೇಳಿದರು.

ಇದನ್ನೂ ಓದಿ: ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್‌ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ

ಯುಎಸ್‌ನಲ್ಲಿರುವ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ (ತಾನಾ) ತನ್ನ ಸಹೋದರನ ಪಾರ್ಥಿವ ಶರೀರವನ್ನು ಮನೆಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಅಲ್ಲದೆ, ಆಂಧ್ರಪ್ರದೇಶದ ಅನಿವಾಸಿ ತೆಲುಗು ಸೊಸೈಟಿ (APNRTS) ಅನ್ನು ಸಹಾಯ ಮತ್ತು ಬೆಂಬಲಕ್ಕಾಗಿ ಸ್ಥಳೀಯವಾಗಿ ಸಂಪರ್ಕಿಸಲಾಗಿದೆ.

ಇದನ್ನೂ ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!