ಮಟ್ಕಾ ಬುಕ್ಕಿಗೆ ಬ್ಲಾಕ್‌ಮೇಲ್‌ ಮೂವರು ನಕಲಿ CBI ಅಧಿಕಾರಿಗಳ ಬಂಧನ

ಮಾಜಿ ಮಟ್ಕಾ ಬುಕ್ಕಿಯೊಬ್ಬನಿಂದ ಹಣ ವಸೂಲಿ ಮಾಡಲು ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ.

3 fake CBI officer arrested in Kalburgi akb

ಕಲಬುರಗಿ: ಮಾಜಿ ಮಟ್ಕಾ ಬುಕ್ಕಿಯೊಬ್ಬನಿಂದ ಹಣ ವಸೂಲಿ ಮಾಡಲು ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ. ಗಾಣಗಾಪೂರದ ಬಸವರಾಜ್, ಗುಡೂರ್ ತಾಂಡಾದ ಕೃಷ್ಣ, ಜ್ಞಾನೇಶ್ ಅನ್ನುವವರೇ ಬಂಧಿತ ನಕಲಿ ಸಿಬಿಐ ಅಧಿಕಾರಿಗಳು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪೂರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೂವರು ನಕಲಿ ಸಿಬಿಐ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. 

ಕಲ್ಬುರ್ಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನ ಚೌಡಾಪುರ ಪಟ್ಟಣದ ಯಲ್ಲಪ್ಪ ಎನ್ನುವ ವ್ಯಕ್ತಿಗೆ ಪೊಲೀಸ್ ವೇಷ ಧರಿಸಿ ಬಂದು ಈ ಖದೀಮರು ಆತನನ್ನು ತಮ್ಮ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ. ನೀನು ಮಾಡುವ ಮಟಕಾ ದಂದೆ ಬಗ್ಗೆ ನಮಗೆ ಮಾಹಿತಿ ಇದೆ. ನಾವು ಸಿಬಿಐ ಅಧಿಕಾರಿಗಳು, ನಮಗೆ 11 ಲಕ್ಷ ರೂಪಾಯಿ ಕೊಟ್ಟರೆ ಬಿಡ್ತೆವೆ ಇಲ್ಲದಿದ್ರೆ ಒದ್ದು ಒಳಗೆ ಹಾಕಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. 

ಸೇಡು ತೀರಿಸಿಜೊಳ್ಳಲು ಹೋಗಿದ್ದ ಪೊಲೀಸಪ್ಪನೇ ಆರೋಪಿಯಾದ ಕಥೆ

ಇದರಿಂದ ಹೆದರಿದ ಯಂಕಪ್ಪ, ಒಂದು ಲಕ್ಷ ರೂಪಾಯಿ ಹಣ ತಂದು ಕೊಡುವುದಾಗಿ ಹೇಳಿ ಅವರಿಂದ ಬಿಡಿಸಿಕೊಂಡು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಕನಕಪುರ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದು ಇವರು ಸಿಬಿಐ ಅಧಿಕಾರಿಗಳಲ್ಲ ಬದಲಾಗಿ ಹಣ ಲಪಟಾಯಿಸಲು ಇದು ಇವರು ಮಾಡಿದ ಉಪಾಯ ಎನ್ನುವುದು ಬಯಲಾಗುತ್ತದೆ. ಈ ಗ್ಯಾಂಗ್‌ನ ಇನ್ನೊಬ್ಬ ಆರೋಪಿ ಖಾಜಪ್ಪ ಎನ್ನುವವನು ಪರಾರಿಯಾಗಿದ್ದು ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಬಳ್ಳಾರಿಯಲ್ಲಿ ಮಟ್ಕಾ ಬುಕ್ಕಿಗಳ ಗಡಿಪಾರು: ಬೆಚ್ಚಿಬಿದ್ದ ರೌಡಿಶೀಟರ್‌ಗಳು..!

Latest Videos
Follow Us:
Download App:
  • android
  • ios