Asianet Suvarna News Asianet Suvarna News

ಶಂಕರ್ ಬಿದರಿ ಇ-ಮೇಲ್ ಹ್ಯಾಕ್ : ಗ್ಯಾಂಗ್ ಅರೆಸ್ಟ್

ನಿವೃತ್ತ ಪೊಲೀಸ್ ಮಾಹಾ ನಿರ್ದೇಶಕರಾದ ಶಂಕರ್ ಬಿದರಿ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ. ಹ್ಯಾಕ್ ವಂಚಿಸುತ್ತಿದ್ದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

3 Arrested For  Former DGP of Karnataka Shakar bidari e mail Hack case snr
Author
Bengaluru, First Published Mar 10, 2021, 12:13 PM IST

ಬೆಂಗಳೂರು (ಮಾ.10):  ನಿವೃತ್ತ ಪೊಲೀಸ್ ಮಾಹಾ ನಿರ್ದೇಶಕರಾದ ಶಂಕರ್ ಬಿದರಿ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್ ಇದೀಗ ಅರೆಸ್ಟ್ ಆಗಿದೆ. 

ಶಂಕರ್ ಬಿದರಿ ಅವರ  ಇ ಮೇಲ್ ಮೂಲಕ ಹ್ಯಾಕ್ ಮಾಡಿ ಹಣ ಹಾಕುವಂತೆ ಸಂದೇಶ ಕಳಿಸುತ್ತಿದ್ದ ಗ್ಯಾಂಗ್‌ನ ಮೂವರನ್ನು ಬಂಧಿಸಲಾಗಿದೆ. 

ತುರ್ತಾಗಿ ಹಣ ನೀಡಬೇಕು. ಒಂದು ದಿನದಲ್ಲಿ ವಾಪಸ್ ನೀಡುತ್ತೇನೆ  ಎಂದು ಮೇಲ್ ಮಾಡಿ   ಹಣ ಲಪಾಟಾಯಿಸುತ್ತಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಿವೃತ್ತ ಮಹಾ ನಿರ್ದೇಶಕ ಶಂಕರ್ ಬಿದರಿ ಆಪ್ತರು ದೂರು ದಾಖಲಿಸಿದ್ದರು. ಇದನ್ನ ನಂಬಿ 25 ಸಾವಿರ ಹಣ ಹಾಕಿ ಮೋಸಕ್ಕೆ ಒಳಗಾಗಿದ್ದರು.

ಶಂಕರ ಬಿದರಿ ಮೇಲ್‌ ಐಡಿ ಹ್ಯಾಕ್‌ ಮಾಡಿ ವಂಚನೆ ..

ಈ ಸಂಬಂಧ   ಆಗ್ನೇಯ ವಿಭಾಗ ಸಿಇಎನ್ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ನಾಗಾಲ್ಯಾಂಡ್ ಮೂಲದ ಥಿಯಾ,ಸೆರೋಪಾ,ಇಸ್ಟರ್ ಕೊನ್ಯಾಕ್ ಎಂದು ಗುರುತಿಸಲಾಗಿದೆ.

ಇವರು ಈ ಹಿಂದೆಯೂ ಇದೇ ರೀತಿಯ ಅನೇಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಲವು ಬ್ಯಾಂಕುಗಳಲ್ಲಿ ನಕಲಿ ಖಾತೆಗಳನ್ನು ತೆರೆದಿರುವ ಮಾಹಿತಿ ಹೊರಬಿದ್ದಿದೆ. 

4 ವರ್ಷಗಳ ಹಿಂದೆ ಬೆಂಗಳೂರಲ್ಲಿ ಬಂದು  ಈ ಮೂವರು ನೆಲೆಸಿದ್ದು,  ಇಸ್ಟರ್ ಕೊನ್ಯಾಕ್ ಬ್ಯೂಟಿ ಪಾರ್ಲರ್ ಹಾಗೂ ಸೇಲ್ಸ್ ಗರ್ಲ್ ಆಗಿ ಕೆಲಸ  ಮಾಡಿಕೊಂಡಿದ್ದಳು.  ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೇಮ್ಸ್ ಮತ್ತು ಪೀಟರ್ ಸಂಪರ್ಕ ಮಾಡಿ ಶಾಮೀಲಾಗಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾಳೆ.

ಹಣ ವರ್ಗಾಯಿಸಲು ನಾಗಾಲ್ಯಾಂಡ್ ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಿ,  ಅವರ ಆಧಾರ್ ಕಾರ್ಡ್,ಬಾಡಿಗೆ ಕರಾರು ಪತ್ರ ಬಳಸಿ ಬ್ಯಾಂಕ್ ಖಾತೆ ಓಪನ್ ಮಾಡಿ ನವೆಂಬರ್ ನಿಂದ ಇಲ್ಲಿಯವರೆಗೆ 60 ಬ್ಯಾಂಕ್ ಖಾತೆ ತೆರೆಸಿದ್ದಳು .  ಈ ಎಲ್ಲಾ ಮಾಹಿತಿಯನ್ನು ಜೇಮ್ಸ್ ಮತ್ತು ಪೀಟರ್ ಗೆ ನೀಡುತ್ತಿದ್ದಳು. 

ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್,14 ಪಾನ್ ಕಾರ್ಡ್, 6ಆಧಾರ್ ಕಾರ್ಡ್,2 ಎಟಿಎಂ ಕಾರ್ಡ್ ವಶಕ್ಕೆ ಪಡೆದಿದ್ದು,  20 ಬ್ಯಾಂಕ್ ಖಾತೆಗಳಿಂದ 2 ಲಕ್ಷ ಹಣ  ಸೀಜ್ ಮಾಡಲಾಗಿದೆ. 

Follow Us:
Download App:
  • android
  • ios