ಮಂಗಳೂರಿನ ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣ ಮೂವರು ಆರೋಪಿಗಳ ಬಂಧನ!
ಕೇರಳ ಮೂಲದ ಅನ್ಯಕೋಮಿನ ಜೋಡಿಯನ್ನು ತಡೆದು ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು (ಡಿ.23): ಕೇರಳ ಮೂಲದ ಅನ್ಯಕೋಮಿನ ಜೋಡಿಯನ್ನು ತಡೆದು ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಬಂಟ್ವಾಳ ನಿವಾಸಿ ಸಂದೇಶ್ (28) ಬಂಧನ. ಬಳಿಕ ಘಟನಾ ಸ್ಥಳದಲ್ಲಿದ್ದ ಅತನ ಸಹಚರರಾದ ಪ್ರಶಾಂತ್ (31) ಮತ್ತು ರೋನಿತ್ (31) ಕೂಡ ವಶಕ್ಕೆ ಪಡೆದ ಪೊಲೀಸರು.
ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್!
ಮಂಗಳೂರಿನ ಹಂಪನಕಟ್ಟೆ ಬಳಿ ನಡೆದಿದ್ದ ಪ್ರಕರಣ. ನಿನ್ನೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದ.ಕ ಜಿಲ್ಲಾ ಪ್ರವಾಸದಲ್ಲಿ ಇದ್ದಾಗಲೇ ನಡೆದಿದ್ದ ನೈತಿಕ ಪೊಲೀಸ್‌ಗಿರಿ! ಆ್ಯಂಟಿ ಕಮ್ಯುನಲ್ ವಿಂಗ್ ಇದ್ರೂ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ. ಆರೋಪಿ ಸಂದೇಶ್ ಕೇರಳ ಮೂಲದ ಅನ್ಯಕೋಮಿನ ಯುವಕ-ಯುವತಿಯನ್ನು ತಡೆಹಿಡಿದು ನಿಲ್ಲಿಸಿದ್ದ ಪ್ರಮುಖ ಆರೋಪಿ ಸಂದೇಶ. ಯುವಕ ಬೇರೆ ಸಮುದಾಯಕ್ಕೆ ಸೇರಿದವನಾ ಎಂದು ಪರಿಶೀಲಿಸುವ ನೆಪದಲ್ಲಿ ಐಡಿ ಕಾರ್ಡ್ ಕೇಳಿದ್ದ ಆರೋಪಿ. ಬಳಿಕ ಇಬ್ಬರು ಆಟೋ ರಿಕ್ಷಾದಲ್ಲಿ ತೆರಳಲು ಯತ್ನಿಸಿದಾಗ ಮತ್ತೆ ತಡೆದು ನಿಲ್ಲಿಸಲು ಯತ್ನಿಸಿರುವ ಆರೋಪಿ, ಈ ವೇಳೆ ಆಟೋ ಚಾಲಕನಿಗೂ ಗದರಿಸಿದ್ದ ಸಂದೇಶ್. ಬಳಿಕ ಆಟೋ ಚಾಲಕ ಅ ಜೋಡಿಯನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು.
ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ಯದ್ವಾತದ್ವಾ ಹಲ್ಲೆ !
ಘಟನೆ ಸಂಬಂಧ ಆಟೋ ಚಾಲಕನ ದೂರಿನ ಮೇರೆಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು. ಸದ್ಯ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಿದ್ದಾರೆ.