*   ಕೋರಮಂಗಲದಲ್ಲಿ ಅಕ್ರಮ ಡ್ಯಾನ್ಸರ್‌ ಬಾರ್‌: ಮೂವರ ಸೆರೆ*  ಕಾನೂನು ಬಾಹಿರವಾಗಿ ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದ ಆರೋಪಿಗಳು*   ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲು 

ಬೆಂಗಳೂರು(ಫೆ.20):  ಅಕ್ರಮವಾಗಿ ನಡೆಯುತ್ತಿದ್ದ ಡ್ಯಾನ್ಸರ್‌ ಬಾರ್‌ವೊಂದರ(Dance Bar) ಮೇಲೆ ದಾಳಿ(Raid) ನಡೆಸಿದ ಸಿಸಿಬಿ ಪೊಲೀಸರು(CCB Police), 28 ಮಹಿಳೆಯರನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದಾರೆ.

ಕೋರಮಂಗಲದ 6ನೇ ಹಂತದ 80 ಅಡಿ ರಸ್ತೆಯ ಸಿಕ್ಸಿದೇಸಿ ಪಬ್‌ ಮತ್ತು ರೆಸ್ಟೋರೆಂಟ್‌ನ ಕ್ಯಾಶಿಯರ್‌ಗಳಾದ ಸುಹಾಸ್‌, ನವೀನ್‌ ಹಾಗೂ ಮೇಲ್ವಿಚಾರಕ ವಿಜಯ್‌ ಪೂಜಾರಿ ಬಂಧಿತರಾಗಿದ್ದು(Arrest), ದಾಳಿ ವೇಳೆ ತಪ್ಪಿಸಿಕೊಂಡಿರುವ ಬಾರ್‌ ಪರವಾನಿಗೆದಾರ ಎಂ.ಬಸವರಾಜ್‌, ವಿಕಾಸ್‌ ಹೆಗಡೆ ಹಾಗೂ ಅಶ್ವಿನ್‌ ಶೆಟ್ಟಿ ಪತ್ತೆಗೆ ತನಿಖೆ ನಡೆದಿದೆ. ಹಲವು ದಿನಗಳಿಂದ ಕಾನೂನು ಬಾಹಿರವಾಗಿ ಆರೋಪಿಗಳು(Accused) ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

Mumbai Dance Bar: ರಹಸ್ಯ ಮಳಿಗೆಯಲ್ಲಿದ್ದ 17 ಮಹಿಳೆಯರ ರಕ್ಷಣೆ

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಪರವಾನಿಗೆ ಪಡೆದಿದ್ದ ಬಸವರಾಜು ಅವರಿಂದ ಬಾಡಿಗೆ ಪಡೆದ ವಿಕಾಸ್‌ ಹೆಗಡೆ ಹಾಗೂ ಅಶ್ವಿನ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹೆಸರಿನಲ್ಲಿ ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದರು. ಇದಕ್ಕಾಗಿ ವಿವಿಧ ರಾಜ್ಯಗಳಿಂದ ಉದ್ಯೋಗಾದಾಸೆ ತೋರಿಸಿ ಮಹಿಳೆಯರನ್ನು ಆರೋಪಿಗಳು ಕರೆದಿದ್ದರು. ಈ ದಾಳಿ ವೇಳೆ 28 ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿ ವೇಳೆ ಬಾರ್‌ನಲ್ಲಿದ್ದ ಕ್ಯಾಷಿಯರ್‌ಗಳು ಹಾಗೂ ಮೇಲ್ವಿಚಾರಕನನ್ನು ಬಂಧಿಸಲಾಯಿತು. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪಾ ಮೇಲೆ ದಾಳಿ: ವಿದೇಶಿ ಮಹಿಳೆಯರ ರಕ್ಷಣೆ

ಬೆಂಗಳೂರು: ಅನೈತಿಕ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ಫೆ.05 ರಂದು ನಗರದ ಮೂರು ‘ಸ್ಪಾ’(Spa) ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು(CCB Police), ವಿದೇಶಿಯರು ಸೇರಿ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದರು.
ಉತ್ತರ ಭಾರತ(North India) ಮೂಲದ ದೇವೆಂದರ್‌, ಅಭಿಜಿತ್‌ ಬಂಧಿತರು. ನಗರದ ರಾಯಲ್‌ ಸ್ಪಾ ಆ್ಯಂಡ್‌ ಸಲೂನ್‌, ಅಸ್ತೇಟಿಕ್‌ ಯೂನಿಸೆಕ್ಸ್‌ ಸೆಲೂನ್‌ ಆ್ಯಂಡ್‌ ಸ್ಪಾ, ನಿಸರ್ಗ ಆಯುರ್ವೇದಿಕ್‌ ಕ್ಲಿನಿಕ್‌ಗಳ ಮೇಲೆ ಸಿಸಿಬಿ ದಾಳಿ(CCB Raid) ನಡೆಸಿದೆ. ಕೆಲಸದ ನೆಪದಲ್ಲಿ ಯುವತಿಯರನ್ನು(Girls) ಕರೆತಂದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದರು.

ವೇಶ್ಯಾವಾಟಿಕೆ ಜಾಲ ಬಟಾಬಯಲು, ದಂಧೆಯ ಕಿಂಗ್‌ಪಿನ್ ತೃತೀಯ ಲಿಂಗಿ!

ದಾಳಿ ವೇಳೆ ನೇಪಾಳ(Nepal) ಹಾಗೂ ಟರ್ಕಿ(Turkey) ದೇಶದ ಇಬ್ಬರು ಮಹಿಳೆಯರು(Woman), ನಾಗಾಲ್ಯಾಂಡ್‌ನ ಇಬ್ಬರು, ಅಸ್ಸಾಂನ ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿತ್ತು. ಈ ಸಂಬಂಧ 9 ಮಂದಿ ವಿರುದ್ಧ ಎಚ್‌ಎಸ್‌ಆರ್‌ ಲೇಔಚ್‌, ಅಶೋಕ ನಗರ ಹಾಗೂ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರು ಮಹಿಳೆಯರ ರಕ್ಷಣೆ

ಶಿವಮೊಗ್ಗ: ವೇಶ್ಯಾವಾಟಿಕೆ(Prostitution) ಅಡ್ಡೆ ಮೇಲೆ ಮಹಿಳಾ ಠಾಣೆಯ ಪೋಲಿಸರು ದಾಳಿ(Raid) ಮಾಡಿ ವೃದ್ಧ ಸೇರಿ ಇಬ್ಬರ ಬಂಧಿಸಿ ಮೂವರು ಮಹಿಳೆಯರನ್ನ(Woman) ರಕ್ಷಿಸಿದ ಘಟನೆ ನಗರದ ಹೊರವಲಯದಲ್ಲಿ ಜ.30 ರಂದು ನಡೆದಿತ್ತು. ಬಂಧಿತರನ್ನ(Arrest) ದುರ್ಗಿಗುಡಿ ಕೆ.ಎಚ್.ಶಂಕರ್ ಮತ್ತು ಭೋಜಪ್ಪ ಕ್ಯಾಂಪ್‌ನ ಮುನಿಯಪ್ಪ ಎಂದು ಗುರುತಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತೋಟದ ಮನೆ ಮೇಲೆ ಪೊಲೀಸರು(Police) ದಾಳಿ ಮಾಡಿದ್ದರು. ದಾಳಿ ವೇಳೆ ಬೆಂಗಳೂರಿನ(Bengaluru) 38 ವರ್ಷದ ಮಹಿಳೆ, ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರ ತಾಲೂಕಿನ 22 ವರ್ಷದ ಯುವತಿಯನ್ನ ರಕ್ಷಣೆ ಮಾಡಲಾಗಿತ್ತು.