ಕಿರಣ್‌ ಹಾಗೂ ಆತನ ತಾಯಿ ಸೇರಿದಂತೆ ಇಬ್ಬರು ಸಹೋದರಿಯರು ಕಿರುಕುಳ ನೀಡಿದ್ದರಿಂದ ಮಾನಸಿಕವಾಗಿ ಮನವೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರಣ್‌, ಭಾಗ್ಯಮ್ಮ ಹಾಗೂ ಇಬ್ಬರು ಸಹೋದರಿಯರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ ತಂದೆ ಲಕ್ಷ್ಮೀನರಸಯ್ಯ. 

ದಾಬಸ್‌ಪೇಟೆ(ಸೆ.03): ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ಯಾಮಗೊಂಡ್ಲು ಹೋಬಳಿಯ ವಾದಗುಂಟೆ ಗ್ರಾಮದ ಬಳಿಯ ರೈಲ್ವೆ ಟ್ರ್ಯಾಕ್‌ ಬಳಿ ನಡೆದಿದೆ.

ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯ ತಿರುಮಲ್ಲೇಗೌಡನಪಾಳ್ಯದ ನಿವಾಸಿ ಕಿರಣ್‌ ಅವರ ಪತ್ನಿ ಭವ (27) ಮೃತ ದುರ್ದೈವಿ. ಭವ್ಯ ಕಳೆದ ಒಂದು ತಿಂಗಳಿಂದ ತಂದೆ ಲಕ್ಷ್ಮೀನರಸಯ್ಯ ಅವರ ಮನೆಯಲ್ಲಿ ನೆಲೆಸಿದ್ದಳು. ಸೆ.2ರಂದು ಶನಿವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಬಂದು ವಾದಕುಂಟೆ ಗ್ರಾಮದ ಬಳಿ ರೈಲ್ವೆ ಟ್ರ್ಯಾಕ್‌ ಬಳಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲಿಸಿ ಮೃತ ದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru ಅಪ್ಪ ಇಂಜಿನಿಯರ್‌, ಅಮ್ಮ ಟೀಚರ್‌: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು

ವರದಕ್ಷಿಣೆ ಕಿರುಕುಳ:

ಲಕ್ಕಪ್ಪನಹಳ್ಳಿ ನಿವಾಸಿ ಲಕ್ಷ್ಮೀನರಸಯ್ಯ-ನಂಜಮ್ಮ ದಂಪತಿ ಪುತ್ರಿ ಭವ್ಯಾಳನ್ನು ತಿರುಮಲ್ಲೇಗೌಡನಪಾಳ್ಯದ ನಿವಾಸಿ ಹನುಮಂತರಾಯಪ್ಪ - ಭಾಗ್ಯಮ್ಮ ಪುತ್ರ ಕಿರಣ್‌ಗೆ ಕಳೆದ 2022 ಜೂನ್‌ 19ರಂದು 25 ಲಕ್ಷ ವೆಚ್ಚ ಮಾಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಮದುವೆಗೆ 250 ಗ್ರಾಂ ಚಿನ್ನ ನೀಡಲಾಗಿತ್ತು. ಮದುವೆಯಾದ ಒಂದು ತಿಂಗಳ ಬಳಿಕ ವರದಕ್ಷಿಣೆ ತರುವಂತೆ ಕಿರಣ್‌ ಹಾಗೂ ಆತನ ತಾಯಿ ಭಾಗ್ಯಮ್ಮ ಕಿರುಕುಳ ನೀಡುತ್ತಿದ್ದರು. ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿ ತಾಯಿ-ಮಗನಿಗೆ ಬುದ್ದಿಮಾತು ಹೇಳಿದ್ದರು.

ಪೊಲೀಸ್‌ ಠಾಣೆಯಲ್ಲಿ ದೂರು:

ಹೆಚ್ಚಿನ ವರದಕ್ಷಿಣೆ ತರುವಂತೆ ಹಾಗೂ ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ಕಿರಣ್‌, ಆತನ ತಾಯಿ ಭಾಗ್ಯಮ್ಮ ಸೇರಿದಂತೆ ಲಾವಣ್ಯ ಮತ್ತು ಭವ್ಯ ಎಂಬ ಇಬ್ಬರು ಸಹೋದರಿಯರು ಸೊಸೆ ಹಲ್ಲೆ ಮಾಡಿದ್ದರು. ಭವ್ಯ ಗ್ರಾಮಾಂತರ ಜಿಲ್ಲೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಆ.4ರಂದು ದೂರು ನೀಡಿದ್ದಳು. ಬಳಿಕ ತಂದೆ ಮನೆಯಲ್ಲಿ ನೆಲೆಸಿದ್ದಳು. ಕಿರಣ್‌ ಹಾಗೂ ಆತನ ತಾಯಿ ಸೇರಿದಂತೆ ಇಬ್ಬರು ಸಹೋದರಿಯರು ಕಿರುಕುಳ ನೀಡಿದ್ದರಿಂದ ಮಾನಸಿಕವಾಗಿ ಮನವೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರಣ್‌, ಭಾಗ್ಯಮ್ಮ ಹಾಗೂ ಇಬ್ಬರು ಸಹೋದರಿಯರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಂದೆ ಲಕ್ಷ್ಮೀನರಸಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.