ಚೆನ್ನೈ(ಜು. 13) ಪೊಲೀಸರು ತನ್ನ ಬೈಕ್ ಸೀಜ್ ಮಾಡಿದ್ದಾರೆ ಎಂದು ಕಂಗಾಲಾದ ವ್ಯಕ್ತಿ ಮನೆಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ನೋಡಿದ್ದಾನೆ. 

ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದವನ ಬೈಕ್ ಅನ್ನು ಪೊಲೀಸರು ಸೀಜ್ ಮಾಡಿದ್ದರು. ಬೆಂಕಿ ಹಚ್ಚಿಕೊಳ್ಳಲು ಯತ್ನ ಮಾಡಿದ್ದವ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮಿಳುನಾಡಿನ ಅಂಬುರ್ ನಲ್ಲಿ ಘಟನೆ ನಡೆದಿದೆ.   ಅಣ್ಣಾ ನಗರದಲ್ಲಿ ವಾಸವಿರುವ 27  ವರ್ಷದ  ಮುಗಿಳನ್ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ  ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ.  ತಮಿಳುನಾಡಿದನಲ್ಲಿ ಈ ವೇಳೆ ಆತನ ಬೈಕ್ ಅನ್ನು ಪೊಲೀಸರು ಸಂಡೇ ಲಾಕ್ ಡೌನ್ ಇದ್ದ ಕಾರಣಕ್ಕೆ ತಡೆದಿದ್ದಾರೆ.

ತನ್ನ ಚಿತೆ ತಾನೇ ಸಿದ್ಧ ಮಾಡಿಕೊಂಡು ಅಂತ್ಯಕ್ರಿಯೆ ಮಾಡಿಕೊಂಡ

ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಮುಗಿಳನ್ ಸರಿಯಾದ ಉತ್ತರ ನೀಡಿಲ್ಲ. ಇದಾದ ಮೇಲೆ ಪೊಲೀಸರು ಆತನ ಬೈಕ್ ಸೀಜ್ ಮಾಡಿದ್ದಾರೆ. ಬೈಕ್ ಬಿಟ್ಟು ಬಿಡುವಂತೆ ಪೊಲೀಸರ ದುಂಬಾಲು ಬಿದ್ದಿದ್ದಾನೆ.  ಆದರೆ ಪೊಲೀಸರು ವಾಹನ ಬಿಟ್ಟಿಲ್ಲ.

ಅಲ್ಲಿಂದ ಮನೆಗೆ ಬಂದವ ಸೀಮೆಎಣ್ಣೆ ಕ್ಯಾನ್ ತೆಗೆದುಕೊಂಡು ರಸ್ತೆಗೆ ಬಂದಿದ್ದಾನೆ. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು  ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ.  ಹತ್ತಿರದಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಆತನ ರಕ್ಷಣೆ ಮಾಡಿದ್ದಾರೆ. ಗಂಭೀರ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಸೀಜ್ ಮಾಡುವ ವೇಳೆ ಇದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.