ಕಣಬರ್ಗಿಯ ಗೋಕಾಕ ರಸ್ತೆಯ ನಿವಾಸಿ ಸಿದ್ದರಾಯ ಅಡಿವೆಪ್ಪ ಶಿಗೀಹಳ್ಳಿ  ಆತ್ಮಹತ್ಯೆಗೆ ಶರಣಾದ ಯುವಕ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು, ಭಾನುವಾರ ರಾತ್ರಿ ಪಾರ್ಟಿ ಮಾಡಲೆಂದು ಮನೆಯಲ್ಲಿ ₹10000 ಹಣ ಕೇಳಿದ್ದಾನೆ. ರೈತ ಕುಟುಂಬವಾಗಿದ್ದರಿಂದ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು ಮನೆಯವರು ಆತನಿಗೆ ತಿಳಿಸಿದ್ದಾರೆ. ಇಷ್ಟಕ್ಕೇ ಮನನೊಂದ ಆತ ನೇಣಿಗೆ ಶರಣಾಗಿದ್ದಾನೆ.

ಬೆಳಗಾವಿ(ಜ.02):  ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಮನೆಯಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕಣಬರ್ಗಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. 

Add Asianetnews Kannada as a Preferred SourcegooglePreferred

ಕಣಬರ್ಗಿಯ ಗೋಕಾಕ ರಸ್ತೆಯ ನಿವಾಸಿ ಸಿದ್ದರಾಯ ಅಡಿವೆಪ್ಪ ಶಿಗೀಹಳ್ಳಿ (25) ಆತ್ಮಹತ್ಯೆಗೆ ಶರಣಾದ ಯುವಕ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು, ಭಾನುವಾರ ರಾತ್ರಿ ಪಾರ್ಟಿ ಮಾಡಲೆಂದು ಮನೆಯಲ್ಲಿ ₹10000 ಹಣ ಕೇಳಿದ್ದಾನೆ. ರೈತ ಕುಟುಂಬವಾಗಿದ್ದರಿಂದ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು ಮನೆಯವರು ಆತನಿಗೆ ತಿಳಿಸಿದ್ದಾರೆ. ಇಷ್ಟಕ್ಕೇ ಮನನೊಂದ ಆತ ನೇಣಿಗೆ ಶರಣಾಗಿದ್ದಾನೆ.

ಹಾಸನ: ಹೃದಯ ವಿದ್ರಾವಕ ಘಟನೆ; ಮಕ್ಕಳಿಗೆ ವಿಷವುಣಿಸಿ ತಾಯಿನೂ ಆತ್ಮಹತ್ಯೆ!

ಜಮೀನಿಗೆ ಹೋಗಿ ಬರುವುದಾಗಿ ಹೇಳಿ ತರಾತುರಿಯಲ್ಲಿ ತೆರಳಿದ್ದಾನೆ. ಈತನ ವ್ಯತಿರಿಕ್ತ ನಡೆಯಿಂದ ಅನುಮಾನಗೊಂಡ ಕುಟುಂಬಸ್ಥರೂ ಹೊಲಕ್ಕೆ ತೆರಳಿದ್ದಾರೆ. ಅಷ್ಟರಲ್ಲಾಗಲೇ ಹೊಲದಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.