Asianet Suvarna News Asianet Suvarna News

ಶಿರಸಿ: ಮದುವೆಯಾಗದ್ದಕ್ಕೆ ನೊಂದು ಯುವಕ ಆತ್ಮಹತ್ಯೆ

ತನ್ನ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಕುಟುಂಬಸ್ಥರು ಆತನನ್ನು ಚಿಕಿತ್ಸೆಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
 

25 Year Old Young Man Committed Self Death at Sirsi in Uttara Kannada grg
Author
First Published Jun 26, 2024, 5:45 AM IST

ಶಿರಸಿ(ಜೂ.26):  ಮದುವೆಯಾಗಿಲ್ಲ ಎಂದು ಮಾನಸಿಕವಾಗಿ ನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಕಸ್ತೂರಬಾನಗರದ ಇಬ್ರಾಹಿಂ ಬಾಷಾಸಾಬ ಮಲ್ಲಕ್ಕನವರ(25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗುವ ವಿಚಾರ ಮಾಡುತ್ತಿದ್ದ. ಆದರೆ ಆಕೆಗೆ ತನ್ನ ಗಂಡನಿಂದ ವಿಚ್ಛೇದನ ಸಿಗದೇ ತನ್ನ ಮದುವೆ ವಿಳಂಬವಾಗುತ್ತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ. ಇದರಿಂದ ಕೊರಗಿ ಜೂ. 24ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಕುಟುಂಬಸ್ಥರು ಆತನನ್ನು ಚಿಕಿತ್ಸೆಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಮೊಬೈಲ್‌ನಲ್ಲಿ ಏನು ಡೌನ್‌ಲೋಡ್ ಮಾಡಿದ್ದೀಯಾ? ತಂದೆ ಬೈದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಮಗಳು 

ಈತನ ತಾಯಿ ಸಾಹೀರಬಾನು ಬಾಷಾಸಾಬ ಮಲ್ಲಕ್ಕನವರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios