Asianet Suvarna News Asianet Suvarna News

Bengaluru Crime : ಎಫ್‌ಡಿಎ ಹುದ್ದೆ ಕೊಡಿಸುವುದಾಗಿ 25 ಲಕ್ಷರೂ. ವಂಚಿಸಿದ ದಂಪತಿ

  • ಎಫ್‌ಡಿಎ ಹುದ್ದೆ ತೋರಿಸಿ .25 ಲಕ್ಷ ವಂಚಿಸಿದ ದಂಪತಿ 
  • 2014ರಿಂದ 2022ರವರೆಗೆ ವಿವಿಧ ಹಂತದಲ್ಲಿ ಹಣ ಪಡೆದ ದಂಪತಿ
  • ಮೂವರ ವಿರುದ್ಧ ದೂರು ದಾಖಲು
25 lakhs cheating to a man for FDA job fir against couple rav
Author
First Published Oct 17, 2022, 9:08 AM IST

ಬೆಂಗಳೂರು (ಅ.17) : ಸರ್ಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ .25 ಲಕ್ಷ ಪಡೆದು ವಂಚಿಸಿದ ದಂಪತಿ ಸೇರಿ ಮೂವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಿಜಯಪುರ ಮೂಲದ ಪಂಡಿತ್‌ ಪರಮಾನಂದ ಚೌಧರಿ (35) ಎಂಬುವವರು ನೀಡಿದ ದೂರಿನ ಮೇರೆಗೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ಚಂದ್ರಕಲಾ ಬಾಯಿ, ಆಕೆಯ ಪತಿ ಗಂಗಾಧರ್‌ ನಾಯಕ್‌ ಹಾಗೂ ಕಲಬುರಗಿ ಮೂಲದ ಶಶಿಕಾಂತ್‌ ಗಾನಟೆ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸ್ವೀಟ್ ತರಿಸಲು ಹೋಗಿ 28000ರೂ. ಕಳೆದುಕೊಂಡ ಯುವತಿ!

ಪಂಡಿತ್‌ ಪರಮಾನಂದ ಚೌಧರಿಗೆ ಸ್ನೇಹಿತ ನಾಗಪ್ಪ ಎಂಬಾತನ ಮುಖಾಂತರ ಮೂವರು ಆರೋಪಿಗಳು ಪರಿಚಯವಾಗಿದ್ದಾರೆ. ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. 2014ರಿಂದ 2022ರ ವರೆಗೆ ವಿವಿಧ ಹಂತಗಳಲ್ಲಿ ಪಂಡಿತ್‌ ಅವರಿಂದ .25 ಲಕ್ಷವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ.

ಬಳಿಕ ತಿಂಗಳು ಕಳೆದರೂ ಕೆಲಸ ಕೊಡಿಸದೇ ಇದ್ದಾಗ ಹಣ ವಾಪಾಸ್‌ ನೀಡುವಂತೆ ಪಂಡಿತ್‌ ಕೇಳಿದ್ದಾರೆ. ಈ ನಡುವೆ 2015ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕ ಮಾಡಿರುವ ಆದೇಶ ಪತ್ರವನ್ನು ಪಂಡಿತ್‌ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಪಂಡಿತ್‌ ಆ ನೇಮಕಾತಿ ಪತ್ರ ಹಿಡಿದು ಸಂಬಂಧಪಟ್ಟಇಲಾಖೆಗೆ ತೆರಳಿ ವಿಚಾರಿಸಿದಾಗ, ಇದು ನಕಲಿ ಆದೇಶಪತ್ರ ಎಂಬುದು ಗೊತ್ತಾಗಿದೆ.

ಈ ವೇಳೆ ಹಣ ವಾಪಾಸ್‌ ನೀಡುವಂತೆ ಪಂಡಿತ್‌ ಅರೋಪಿಗಳನ್ನು ಕೇಳಿದ್ದಾರೆ. ಆದರೆ, ಆರೋಪಿಗಳು ಹಣ ವಾಪಸ್‌ ನೀಡದೇ ವಿವಿಧ ಕಾರಣ ನೀಡಿ ಕಾಲ ದೂಡಿದ್ದಾರೆ. ಇತ್ತ ಕೆಲಸವೂ ಇಲ್ಲದೆ ಹಣವನ್ನೂ ಕಳೆದುಕೊಂಡ ಪಂಡಿತ್‌ ಇದೀಗ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ಯಲಹಂಕದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರಕ್ತಚಂದನ ವಶ:

ಯಲಹಂಕ: ಅರಣ್ಯ ಸಂಚಾರಿ ದಳದವರು ರಕ್ತಚಂದನ ಮರದ ತುಂಡುಗಳ ಅಕ್ರಮ ಸಾಗಾಣಿಕೆ ಯತ್ನದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿ, 13 ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ಅರಣ್ಯ ಸಂಚಾರಿ ದಳದ ಅರಣ್ಯ ಅಧಿಕಾರಿಗಳು ಹಾಗೂ ಜಂಟಿ ಅಪರಾಧ ನಿಯಂತ್ರಣಾ ಕೋಶ(ಜಾಗೃತ) ದಳದ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ. ಸರಕು ಸಾಗಣೆ ವಾಹನವನ್ನೂ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ನಾಲ್ಕು ನಾಲ್ಕು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ

ಪ್ರಕರಣವನ್ನು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಜಯ್‌ ರಂಜನ್‌ ಸಿಂಗ್‌, ಉಪಅರಣ್ಯ ಅಧಿಕಾರಿ ಬಿ.ಬಾಸ್ಕರ್‌, ಅಪರಾಧ ನಿಯಂತ್ರಣಾ ಕೋಶ(ಜಾಗೃತ) ದಳದ ಎಚ್‌.ಆರ್‌.ಚಿದಾನಂದ, ಟಿ.ಸಿದ್ದರಾಜು ಹಾಗೂ ಅಮೃತ್‌ ಎ.ದೇಸಾಯಿ ಕಾರ್ಯಾಚರಣೆ ತಂಡದಲ್ಲಿದ್ದರು.

Follow Us:
Download App:
  • android
  • ios