ಮಾಜಿ ಗೆಳೆಯತಿಯನ್ನೇ ಮದುವೆಯಾಗಲು ಪ್ಲಾನ್, ಅಶ್ಲೀಲ ಫೋಟೋ ಬಹಿರಂಗಪಡಿಸಿದ ಗೆಳೆಯ!

ಮಾಜಿ ಗೆಳೆತಿಯನ್ನು ಮದುವೆಯಾಗಲು ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಮಾಜಿ ಗೆಳೆತಿಯ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾನೆ. ಆದರ ಈತನ ಮಾಸ್ಟರ್ ಪ್ಲಾನ್ ವರ್ಕೌಟ್ ಆಗಿಲ್ಲ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

24 yearlold delhi man arrest by police after posting ex girlfriend Obscene photo to marriage ckm

ದೆಹಲಿ(ಜೂ.15): ಮಾಜಿ ಗೆಳತಿಯನ್ನು ಮದುವೆಯಾಗುವ ಮನಸ್ಸಾಗಿದೆ. ಆದರೆ ಗೆಳತಿ ಆಗಲೇ ಮಾಜಿಯಾಗಿದ್ದಾಳೆ. ಈತನ ಮುಖ ನೋಡಲು ಆಕೆ ಇಷ್ಟಪಡುತ್ತಿಲ್ಲ. ಇದರ ನಡುವೆ ಗೆಳೆಯ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಮಾಜಿ ಗೆಳೆತಿಯ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡಿದ್ದಾನೆ. ಈ ಕುರಿತು ದೂರು ಪಡೆದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಯುವಕ ಅವಿನಾಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ದೆಹಲಿಯ ಸಾಕೇತ್ ನಗರದಲ್ಲಿ ನಡೆದಿದೆ.

ಸಾಕೆತ್ ನಗರ ನಿವಾಸಿ 24 ವರ್ಷದ  ಅವಿನಾಶ್ ಕುಮಾರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅವಿನಾಶ್ ಕುಮಾರ್ ಹಾಗೂ ಈತ ಮಾಜಿ ಗೆಳತಿ ಒಂದೇ ಕಾಲೇಜಿನಲ್ಲಿ ಓದಿದ್ದಾರೆ. ಈ ವೇಳೆ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದರೆ ಇವರ ಮದುವೆಗೆ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಹೀಗಾಗಿ ಈಕೆ ಮನೆಯವವರ ವಿರೋಧ ಕಟ್ಟಿಕೊಂಡು ಮದುವೆಯಾಗಲು ಯುವತಿ ನಿರಾಕರಿಸಿದ್ದಾಳೆ. ಹೀಗಾಗಿ ಇವರ ಸಂಬಂಧ ಮುರಿದು ಬಿತ್ತು. ಆದರೆ ಅವಿನಾಶ್ ಕುಮಾರ್ ಮಾತ್ರ ಈಕೆಯನ್ನೇ ಮದುವೆಯಾಲು ಮನಸ್ಸು ಮಾಡಿದ್ದಾನೆ. 

 

ಪ್ರೇಯಸಿಯನ್ನು ಕೊಂದು ವಾಟರ್‌ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಪಾತಕಿ!

ಮದುವೆಯಾಗಲು ನಡೆಸಿದ ಈತನ ಪ್ರಯತ್ನ ವಿಫಲವಾಗಿದೆ. ಆಕ್ರೋಶಗೊಂಡ ಅವಿನಾಶ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಈಕೆಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಈಕೆಯ ಅಶ್ಲೀಲ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಜೊತೆಗೆ ಈಕೆಯ ಮೊಬೈಲ್ ನಂಬರ್ ಕೂಡ ಬಹಿರಂಗಪಡಿಸಿದ್ದಾನೆ. ಇದರಿಂದ ಯುವತಿಗೆ ಕರೆಗಳು ಬರಲು ಆರಂಭಿಸಿದೆ. ಗಾಬರಿಗೊಂಡ ಯುವತಿ ಪರಿಶೀಲಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಕೆಲ ಅಶ್ಲೀಲ ಫೋಟೋಗಳು ಹರಿದಾಡುತ್ತಿದೆ. ಗಾಬರಿಗೊಂಡ ಯುವತಿ ಪೊಲೀಸರ ನೆರವು ಕೇಳಿದ್ದಾಳೆ.

ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಯುವತಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಇತ್ತ ಕಾರ್ಯಪ್ರವೃತ್ತರಾದ ಪೊಲೀಸರು ಅವಿನಾಶ್ ಕುಮಾರ್ ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಹಲವು ಮಾಹಿತಿ ಬಹಿರಂಗಪಡಿಸಿದ್ದಾನೆ. ಮದುವೆಯಾಗಲು ಯುವತಿ ಹಾಗೂ ಆಕೆಯ ಮನೆಯವರು ಒಪ್ಪಿಲ್ಲ. ಹೀಗಾಗಿ ಅಶ್ಲೀಲ ಫೋಟೋ ಬಹಿರಂಗಪಡಿಸಿದ್ದೇನೆ. ಇದರಿಂದ ಆಕೆಗೆ ಬೇರೆ ಮದುವೆಯಾಗಲು ಸಾಧ್ಯವಿಲ್ಲ. ಹೀಗಾಗಿ ತನ್ನನ್ನೇ ಮದುವೆಯಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ.

Latest Videos
Follow Us:
Download App:
  • android
  • ios