Asianet Suvarna News Asianet Suvarna News

ಮುಳುಗಡೆಯಾಗುತ್ತಿದ್ದ  24 ಮೀನುಗಾರರ ರಕ್ಷಣೆ,  ಚಾರ್ಮಾಡಿಯಲ್ಲಿ ಪಾದಯಾತ್ರಿಗಳಿಗೆ ಟಿಟಿ ಡಿಕ್ಕಿ

ಮುರುಡೇಶ್ವರ ಸಮುದ್ರದಲ್ಲಿ ಮೀನುಗಾರಿಕಾ ಟ್ರಾಲ್ ಬೋಬೋಟ್ ಮುಳುಗಡೆ/ ಟ್ರಾಲ್ ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರ ರಕ್ಷಣೆ/ ಹೊನ್ನಾವರದ ಮಾದೇವ ನಾರಾಯಣ ಕರ್ಕಿ ಎಂಬವರಿಗೆ ಸೇರಿದ್ದ ಮಹಾಸತಿ ಬೋಟ್/ ನಿನ್ನೆ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಹಾಸತಿ/ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟವರಿಗೆ ವಾಹನ ಡಿಕ್ಕಿ

24 fishermen rescued near Karwar Uttara Kannada mah
Author
Bengaluru, First Published Mar 7, 2021, 9:42 PM IST

ಉತ್ತರ ಕನ್ನಡ/ ಚಿಕ್ಕಮಗಳೂರು(ಮಾ. 07) ಮುರುಡೇಶ್ವರ ಸಮುದ್ರದಲ್ಲಿ ಮೀನುಗಾರಿಕಾ ಟ್ರಾಲ್ ಬೋಟ್ ಮುಳುಗಡೆಯಾಗಿದ್ದು  ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರ ರಕ್ಷಣೆ ಮಾಡಿದ್ದಾರೆ. 

ಹೊನ್ನಾವರದ ಮಾದೇವ ನಾರಾಯಣ ಕರ್ಕಿ ಎಂಬವರಿಗೆ ಸೇರಿದ್ದ ಮಹಾಸತಿ ಬೋಟ್  ಮುಳುಗಡೆಯಾಗಿದೆ. ಶನಿವಾರ ರಾತ್ರಿ ಮೀನುಗಾರಿಕೆಗೆ ತೆರಳಲಾಗಿತ್ತು. ರಾತ್ರಿ ಸಮುದ್ರದಲ್ಲಿ ಭಾರೀ ಗಾಳಿ ಹಾಗೂ ಅಲೆಗೆ ಬೋಟ್ ಸಿಕ್ಕಿದೆ. ಅಲೆಗಳ ಹೊಡೆತಕ್ಕೆ ಬೋಟ್ ಅಡಿಭಾಗದ ಫೈಬರ್  ನೀರು ಒಳಕ್ಕೆ ನುಗ್ಗಿದೆ.

ಉಡುಪಿ ಪೇಜಾವರ ಮಠದಲ್ಲಿ ಅಗ್ನಿ ಅವಘಡ.. ಶಾರ್ಟ್ ಸರ್ಕ್ಯೂಟ್‌ನಿಂದ  ಬೆಂಕಿ

ಬೋಟ್ ಹಾಗೂ ಮೀನು ಹಿಡಿಯೋ ಬಲೆಯನ್ನು ಸಮುದ್ರದಲ್ಲೇ ಮೀನುಗಾರು   ಹೊರಬಂದಿದ್ದಾರೆ. ಇತರ ಮೀನುಗಾರರ ಸಹಾಯದಿಂದ ಬೋಟ್ ನಲ್ಲಿ ಇದ್ದವರ ರಕ್ಷಣೆ ಮಾಡಲಾಗಿದೆ.

ಟಿಟಿ ಡಿಕ್ಕಿ; ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದವರಿಗೆ ಟಿಟಿ ವಾಹನ ಡಿಕ್ಕಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಡಿಕ್ಕಿಯಾಗಿದ್ದು  12 ಪಾದಯಾತ್ರಿಗಳು ಗಾಯಗೊಂಡಿದ್ದಾರೆ ಪಾದಾಚಾರಿಗಳಿಗೆ ಡಿಕ್ಕಿಯಾಗಿ ತಡೆಗೋಡೆಗೆ  ವಾಹನ ಬಡಿದಿದೆ.

ಹಾಸನ ಜಿಲ್ಲೆ ಹಗರೆ ಮೂಲದ ಭಕ್ತರು ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಹೊರಟಿದ್ದರು.  ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. 

 

 

Follow Us:
Download App:
  • android
  • ios