Asianet Suvarna News Asianet Suvarna News

ಯುವಕನ ಶಿರಚ್ಛೇದ ಮಾಡಿ, ತಲೆ ಮೆರವಣಿಗೆ ಮಾಡಿದ ಪಾಪಿ: ರಸ್ತೆಬದಿಯಲ್ಲಿ ಎಸೆದು ಪರಾರಿ

ಈ ಹತ್ಯೆ ಪ್ರಕರಣವನ್ನು ದೃಢಪಡಿಸಿದ ಜಾಲೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮೇಶ್ವರಲಾಲ್ ಮೇಘವಾಲ್,  ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಮಾರಕಾಸ್ತ್ರವಾದ ಕೊಡಲಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು. 

23 year old man beheaded in rajasthan s jalore ash
Author
First Published May 20, 2023, 6:28 PM IST | Last Updated May 20, 2023, 6:28 PM IST

ಬಾರ್ಮರ್ (ಮೇ 20, 2023): ರಾಜಸ್ಥಾನದ ಜಾಲೋರ್ ಜಿಲ್ಲೆಯ ಪದರ್ಡಿ ಗ್ರಾಮದಲ್ಲಿ 23 ವರ್ಷದ ವ್ಯಕ್ತಿಯೊಬ್ಬನನ್ನು ಆತನ ನೆರೆಹೊರೆಯವರು ಶಿರಚ್ಛೇದ ಮಾಡಿದ್ದಾರೆ. ಅಲ್ಲದೆ, ಕತ್ತರಿಸಿದ ತಲೆಯನ್ನು ಕೆಲವು ನಿಮಿಷಗಳ ಕಾಲ ಹೊತ್ತುಕೊಂಡು ಮೆರವಣಿಗೆ ಮಾಡಿದ್ದು, ನಂತರ ರಸ್ತೆಬದಿಯಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. 

ಬುಧವಾರ ಸಂಜೆ ಗ್ರಾಮಸ್ಥರು ಭೀಕರ ಹತ್ಯೆಯನ್ನು ಪ್ರತಿಭಟಿಸಿದ ನಂತರ ಶಂಕ್ಲಾರಾಮ್ ಭೀಲ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರವೇ ಶವಪರೀಕ್ಷೆಗಾಗಿ ಸ್ಥಳದಿಂದ ಶವವನ್ನು ತೆಗೆದುಕೊಂಡು ಹೋಗಲು ಪೊಲೀಸರಿಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿದುಬಂದಿದೆ. ಇನ್ನು, ಈ ಹತ್ಯೆ ಪ್ರಕರಣವನ್ನು ದೃಢಪಡಿಸಿದ ಜಾಲೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮೇಶ್ವರಲಾಲ್ ಮೇಘವಾಲ್,  ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಮಾರಕಾಸ್ತ್ರವಾದ ಕೊಡಲಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು. 

ಇದನ್ನು ಓದಿ: ಪಿಕ್ನಿಕ್‌ಗೆ ಹೋಗಿದ್ದೋರು ಮಸಣ ಸೇರಿದ್ರು: ಸಮುದ್ರದಲ್ಲಿ ಮುಳುಗಿ ಒಂದೇ ಕುಟುಂಬದ 6 ಜನರ ದಾರುಣ ಸಾವು

ಈ ಮಧ್ಯೆ, ಈ ಕೊಲೆಯ ಉದ್ದೇಶದ ಬಗ್ಗೆ ಮಾತನಾಡಲು ಪೊಲೀಸರು ನಿರಾಕರಿಸಿದ್ದು, ಈ ಬಗ್ಗೆ ತನಿಖೆಯ ನಂತರವಷ್ಟೇ ವಿವರಿಸೋದಾಗಿ ಹೇಳಿದ್ದಾರೆ. ಇಬ್ಬರ ನಡುವಿನ ವೈಯಕ್ತಿಕ ಪೈಪೋಟಿಯೇ ಈ ಕೊಲೆಗೆ ಪ್ರಚೋದನೆ ಎಂದು ಅಧಿಕಾರಿಯೊಬ್ಬರು ಹೇಳಿದರೂ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ. ಅಲ್ಲದೆ, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಹೇಳಿದ್ದಾರೆ.

ಇನ್ನೊಂದೆಡೆ, ಕೊಲೆ ನಡೆದ ಈ ಪ್ರದೇಶದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಸಹ ವಿಧಿಸಲಾಗಿದೆ ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಇಂಟರ್ನೆಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಹಾಗೂ ಸಂತ್ರಸ್ತ ಕಿಶೋರ್ ಸಿಂಗ್ ಒಂದೇ ಗ್ರಾಮದವರು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಗಳ ಅತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ ಮಾಡಿದ ಪೊಲೀಸರು; ಬೇಸತ್ತ ದಲಿತ ರೈತನ ಆತ್ಮಹತ್ಯೆ

ಬುಧವಾರ ಸಂಜೆ 6.30ರ ಸುಮಾರಿಗೆ ಕಿಶೋರ್ ಸಿಂಗ್ ವಾಕಿಂಗ್ ಹೊರಟಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಂಕ್ಲಾರಾಮ್ ಭೀಲ್ ಹಿಂದಿನಿಂದ ಬಂದು ಕಿಶೋರ್‌ ಸಿಂಗ್ ಬಳಿಗೆ ಬಂದು ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಕಿಶೋರ್‌ ಸಿಂಗ್ ಸತ್ತ ನಂತರ, ಆರೋಪಿ ಕತ್ತರಿಸಿದ ತಲೆಯೊಂದಿಗೆ ಸುಮಾರು 150 ಮೀಟರ್ ದೂರ ನಡೆದಿದ್ದು, ಬಳಿಕ ಅದನ್ನು ಎಸೆದಿದ್ದಾನೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಅಯ್ಯೋ ಪಾಪ.. ಮಹಿಳಾ ಐಎಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ: ಐಆರ್‌ಎಸ್‌ ಅಧಿಕಾರಿ ಬಂಧನ

Latest Videos
Follow Us:
Download App:
  • android
  • ios