ಬಹ್ರೇಚ್ (ನ. 16)  ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ 23  ವರ್ಷದ ಯುವಕನನ್ನು ಹಿಗ್ಗಾ ಮುಗ್ಗಾ ಥಳಿಸಲಾಗಿದೆ. ಗಂಭೀರ ಗಾಯಗೊಂಡಾತ ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟಿದ್ದಾನೆ.

ಭಾನುವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.ಜಿಲ್ಲೆಯ ಖೈರಿ ಡಿಕೋಲಿ ಗ್ರಾಮದಲ್ಲಿ  ನಡೆದ ಪ್ರಕರಣ ಅನೇಕ ಪ್ರಶ್ನೆಗಳನ್ನು ಎತ್ತಿದೆ.

ಸುಹೇಲ್ ಎಂಬ ಯುವಕ ತನ್ನ  ಚಿಕ್ಕಪ್ಪನ ಮನೆಯ ಮುಂದೆ ಮೂತ್ರ ವಿಸರ್ಜಿಸುತ್ತಿದ್ದ. ಅವರ ನೆರೆಹೊರೆಯವರಾದ ರಾಮ್ ಮೂರತ್, ಆತ್ಮರಾಮ್, ರಾಂಪಾಲ್, ಸನೆಹಿ ಮತ್ತು ಮಂಜೀತ್ ಇದನ್ನು ಪ್ರಶ್ನೆ ಮಾಡಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.

ಪ್ರಿಯತಮನೇ ಸ್ನೇಹಿತನೊಂದಿಗೆ ಬಂದು ರೇಪ್ ಮಾಡಿ ಸುಟ್ಟು ಹಾಕಿದ

ಗಂಭೀರ ಗಾಯಗೊಂಡ ಸುಹೇಲ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಚಿಕ್ಕಪ್ಪ ಚಿಂತಾರಾಮ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ.
ರಾಮ್ ಮೂರತ್, ಸಾನೆಹಿ ಮತ್ತು ಮಂಜೀತ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ  ಎಂದು ತಿಳಿಸಿದ್ದಾರೆ.