ಪಿರಿಯಾಪಟ್ಟಣ (ನ.16): ರಂದು ತಾಲೂಕಿನ ಕೆಲ್ಲೂರು ಹಾರಂಗಿ ನಾಲೆಯ ಏರಿ ಮೇಲೆ ಹೊತ್ತಿ ಉರಿಯುತ್ತಿದ್ದ ಯುವತಿ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 

ಪ್ರಕರಣದ ಮುಖ್ಯ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಕರಳಪುರ ಗ್ರಾಮದ ಸಿದ್ಧರಾಜು ಹಾಗೂ ಕಾರು ಚಾಲಕ ಪ್ರಸನ್ನಕುಮಾರ್ ಎಂಬುವರು ಬಂಧಿತರು.  ನಂಜನಗೂಡು ಹುಲ್ಲಹಳ್ಳಿಯ ಯುವತಿಯೇ ಕೊಲೆಯಾದವಳು.

ಅರ್ಧಂಬರ್ಧ ಸುಟ್ಟು ಹೊಗೆಯಾಡುತ್ತಿರುವ ಮಹಿಳೆ ಶವ ಪತ್ತೆ .

ಆರೋಪಿ ಸಿದ್ಧರಾಜು ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದರಿಂದ ಮದುವೆ ಗುವಂತೆ ಸಿದ್ಧರಾಜುನನ್ನು ಯುವತಿ ಒತ್ತಡ ಹೇರಿದ್ದಳು. 

ಈ ಹಿನ್ನೆಲೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ.  

ಯುವತಿ ತಂದೆ ಕೊಟ್ಟ ಮಿಸ್ಸಿಂಗ್ ಕಂಪ್ಲೇಂಟ್ ಆಧರಿಸಿ  ಆರೋಪಿಗಳನ್ನು ಬಂಧಿಸಿದ್ದು,  ಆಕೆ ಧರಿಸಿದ್ದ ಗೆಜ್ಜೆಯಿಂದ ಶವದ ಗುರುತು ಪತ್ತೆ ಮಾಡಲಾಗಿದೆ.