*  11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ 23 ವರ್ಷದ ಯುವಕ* ಹಾಸನ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ* ಆರೋಪಿ ಕೀರ್ತಿ ಸಾಗರ್ ಬಂಧನ* ಬಾಲಕಿಯ ಪಕ್ಕದ ಮನೆಯವನಾಗಿದ್ದ ಕೀರ್ತಿಸಾಗರ್

ಹಾಸನ(ಫೆ. 14) ಏನೂ ಅರಿಯದ ಕಂದಮ್ಮನ ಮೇಲೆ ಈ ಪಾಪಿ ಕ್ರೌರ್ಯ (Sexual Harassment) ಮೆರೆದಿದ್ದಾನೆ. 11 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಿದ (Rape) 23 ವರ್ಷದ ಕಿರಾತಕ ಆಕೆಯನ್ನು ಗ್ರಾಮದ ಟ್ಯಾಂಕ್ ವೊಂದರಲ್ಲಿ ಎಸೆದಿದ್ದ.

ಹಾಸನ (Hassan) ತಾಲೂಕಿನಿಂದ ಘಟನೆ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮನೆ ಬಳಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ ಪಕ್ಕದ ಮನೆಯ ಕೀರ್ತಿ ಸಾಗರ್ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು!

ಈತನ ದಾಳಿಯಿಂದ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಯಾರಿಗೂ ಗೊತ್ತಾಗಬಾರದು ಎಂದು ಟ್ಯಾಂಕ್ ವೊಂದಕ್ಕೆ ಎಸೆದಿದ್ದಾನೆ. ಆದರೆ ಅಲ್ಲಿ ಸಮೀಪ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರು ಆಕಸ್ಮಿಕವಾಗಿ ಇದನ್ನು ಗಮನಿಸಿ ಬಾಲಕಿಯ ರಕ್ಷಣೆ ಮಾಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಕೆ ಆಟವಾಡುತ್ತಿದ್ದಾಗ ಗಿಫ್ಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದೆ ಎಂದು ತನ್ನ ತಪ್ಪನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೆಲಸ ನೀಡುವ ನೆಪದಲ್ಲಿ ಅತ್ಯಾಚಾರ: ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ ರಾಜಸ್ಥಾನಕ್ಕೆ ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ (Rape) ಆಕೆಯನ್ನು ಹೋಟೆಲ್‌ (Hotel) ಮೇಲಿನಿಂದ ಕೆಳಗೆ ನೂಕಿದ್ದರು.

ಸಂದರ್ಶನದ ನೆಪದಲ್ಲಿ ದಿಲ್ಲಿಯಿಂದ ಆಕೆಯನ್ನು ಚುರುವಿನ ಹೋಟೆಲ್‌ಗೆ ದುರುಳರು ಕರೆಸಿಕೊಂಡಿದ್ದಾರೆ. ಮೇಲ್ಛಾವಣಿ ಮೇಲೆ ಆಕೆಯ ಕಾಲು-ಕೈಗೆ ಹಗ್ಗ ಕಟ್ಟಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಮೇಲಿನಿಂದ ನೂಕಿದ್ದರು ಆಕೆ ಬಚಾವಾಗಿದ್ದಳು.

25 ವರ್ಷದ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಮಾಡಿದ ಆರೋಪದಡಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಾದ ದೇವೇಂದ್ರ ಸಿಂಗ್‌, ವಿಕ್ರಂ ಸಿಂಗ್‌, ಭವಾನಿ ಸಿಂಗ್‌ ಮತ್ತು ಸುನೀಲ್‌ ರಜಪೂತ್‌ರನ್ನು ವಶಕ್ಕೆ (Arrest) ಪಡೆಯಲಾಗಿತ್ತು. 

ಹೆತ್ತ ತಾಯಿ ಮೇಲೆ ಎರಗಿದ್ದ:  ಹೆತ್ತ ತಾಯಿಯನ್ನೇ ಅತ್ಯಾಚಾರ ನಡೆಸಿದ ಪೈಶಾಚಿಕ ಪ್ರಕರಣವೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿತ್ತು. ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು (Police) ಬಂಧಿಸಿದ್ದರು. ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ತಾಯಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ 33 ವರ್ಷದ ವ್ಯಕ್ತಿ ಆರೋಪಿ. ಜ .12 ರ ತಡ ರಾತ್ರಿ ಘಟನೆ ನಡೆದಿದೆ. ತಡ ರಾತ್ರಿ ಹಾಗೂ ಮರುದಿನ ಬೆಳಗ್ಗೆ ಎರಡು ಬಾರಿ, ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಾಣಿಯಂತೆ ವರ್ತಿಸಿದ್ದ.