Asianet Suvarna News Asianet Suvarna News

Kalaburagi: ಶಾಲಾ‌ ಮಕ್ಕಳಿದ್ದ‌ ಗೂಡ್ಸ್ ವಾಹನ ಪಲ್ಟಿ: 22 ಮಕ್ಕಳಿಗೆ ಗಾಯ

ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ 22 ಮಕ್ಕಳು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಮಡಕಿ ತಾಂಡಾ ಬಳಿ ಸಂಭವಿಸಿದೆ.  22 ಶಾಲಾ ಮಕ್ಕಳಿದ್ದ ಗೂಡ್ಸ್ ವಾಹನ ರಸ್ತೆಯಿಂದ ಉರುಳಿ ಬಿದ್ದಿದ್ದು, ಮಕ್ಕಳು ಗಾಯಗೊಂಡಿದ್ದಾರೆ. 

22 Childrens Injured In Goods Vehicle Overturns At Kalaburagi gvd
Author
First Published Jan 9, 2023, 11:59 PM IST

ಕಲಬುರಗಿ (ಜ.09): ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ 22 ಮಕ್ಕಳು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಮಡಕಿ ತಾಂಡಾ ಬಳಿ ಸಂಭವಿಸಿದೆ.  22 ಶಾಲಾ ಮಕ್ಕಳಿದ್ದ ಗೂಡ್ಸ್ ವಾಹನ ರಸ್ತೆಯಿಂದ ಉರುಳಿ ಬಿದ್ದಿದ್ದು, ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಚಿಕಿತ್ಸೆಗೆ ಕಲಬುರಗಿಯ ಜಿಮ್ಸ್, ಬಸವೇಶ್ವರ ಹಾಗೂ ಎ.ಎಸ್.ಎಮ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸುದ್ದಿ ಅರಿಯುತ್ತಲೆ ಆಸ್ಪತ್ರೆಗೆ ದೌಡಾಯಿಸಿದ ಶಾಸಕ‌ ಬಸವರಾಜ ಮತ್ತಿಮೂಡ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಮಕ್ಕಳ ಅರೋಗ್ಯ ವಿಚಾರಿಸಿ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯವಿದಲ್ಲಿ ಅದಕ್ಕೂ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರಿಗೆ ಮತ್ತು ಸ್ಥಳದಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮಡಕಿ ತಾಂಡಾದ ನಿವಾಸಿಯಾಗಿರುವ 9ನೇ ಮತ್ತು 10ನೇ ತರಗತಿ ಮಕ್ಕಳು ಶಾಲೆ ಮುಗಿಸಿಕೊಂಡು ಮಹಾಗಾಂವದಿಂದ ತಾಂಡಾಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಿಂದ ಉರುಳಿದೆ.

ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ

ಗೂಡ್ಸ್‌ನಲ್ಲಿದ್ದ 22 ಮಕ್ಕಳನ್ನು ಕಲಬುರಗಿಗೆ ಹೆಚ್ಚಿನ ಚಿಕಿತ್ಸೆಗೆ ತರಲಾಗಿದ್ದು, ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಉಳಿದಂತೆ ಎ.ಎಸ್.ಎಮ್ ಆಸ್ಪತ್ರೆಯಲ್ಲಿ 9, ಜಿಮ್ಸ್ ಮತ್ತು ಬಸವೇಶ್ವರ ಆಸ್ಪತ್ರೆಯಲ್ಲಿ ತಲಾ 5 ಮಕ್ಕಳು‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸರ್ವ ಶಿಕ್ಷಣದ ಅಭಿಯಾನದ ಜಿಲ್ಲಾ ಉಪ ಸಮನ್ವಯಾಧಿಕಾರಿ ಚಂದ್ರಶೇಖರ ಪಾಟೀಲ, ಕಲಬುರಗಿ ದಕ್ಷಿಣ ಬಿ.ಇ.ಓ. ವೀರಣ್ಣ ಬೊಮ್ಮನಳ್ಳಿ ಅವರು ಆಸ್ಪತ್ರೆ ಬಳಿ ಇದ್ದು, ಮಕ್ಕಳ ಚಿಕಿತ್ಸೆಯ‌ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios