Asianet Suvarna News Asianet Suvarna News

ಹಾಸನ: ಪ್ರೀತಿಸುವಂತೆ ಕಿರುಕುಳ, ಯುವಕನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮೃತ ಸಂಗೀತಾ ಬಿ.ಕಾಂ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಳು. ನಿಡಗೋಡು ಗ್ರಾಮ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದನಂತೆ. ನನಗೆ ಮದುವೆ ಮಾಡಿಕೊಡುವಂತೆ ಯುವತಿ ಪೋಷಕರ ಬಳಿ ಶಿವು ಕೇಳಿದ್ದನಂತೆ. ಮದುವೆ ಮಾಡಿಕೊಡಲು ಸಂಗೀತ ಪೋಷಕರು ನಿರಾಕರಿಸಿದ್ದರಂತೆ. ಆದರೂ ಸಂಗೀತಾಳನ್ನು ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದನು. 

21 Years Young Woman Committed Suicide in Hassan grg
Author
First Published Jan 13, 2024, 12:59 PM IST

ಹಾಸನ(ಜ.13): ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಿಡಗೋಡು ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಸಂಗೀತಾ (21) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವತಿಯಾಗಿದ್ದಾಳೆ. 

ಮೃತ ಸಂಗೀತಾ ಬಿ.ಕಾಂ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಳು. ನಿಡಗೋಡು ಗ್ರಾಮ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದನಂತೆ. ನನಗೆ ಮದುವೆ ಮಾಡಿಕೊಡುವಂತೆ ಯುವತಿ ಪೋಷಕರ ಬಳಿ ಶಿವು ಕೇಳಿದ್ದನಂತೆ. ಮದುವೆ ಮಾಡಿಕೊಡಲು ಸಂಗೀತ ಪೋಷಕರು ನಿರಾಕರಿಸಿದ್ದರಂತೆ. ಆದರೂ ಸಂಗೀತಾಳನ್ನು ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದನು. 

Shivamogga ಅರಳುವ ಮುನ್ನವೇ ಕಮರಿದ ಮಲೆನಾಡಿನ ಹೂವು: 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು!

ಸಂಗೀತಾ ಕುಟುಂಬ ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಬಳಿಗೂ   ಶಿವು ಬಂದಿದ್ದ, ಸಂಗೀತಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಫೋನ್ ಏಕೆ ರಿಸೀವ್ ಮಾಡಲ್ಲ ಎಂದು ತಲೆಗೆ ಹೊಡೆದಿದ್ದನು. ನನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಶಿವು ಬೆದರಿಕೆ ಹಾಕಿ ತೆರಳಿದ್ದನು. ಇದರಿಂದ ಮನನೊಂದ ಸಂಗೀತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. 

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಂಗೀತ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಆರೋಪಿ ಶಿವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios