Asianet Suvarna News Asianet Suvarna News

ಸಲಿಂಗಕಾಮಿ ಸಂಗಾತಿಯಿಂದ ಚಾಕು ಇರಿತ, ನಡುರಸ್ತೆಯಲ್ಲೇ ವಿದ್ಯಾರ್ಥಿ ಸಾವು

ಸಲಿಂಗಕಾಮಿ ಸಂಗಾತಿ, ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಪುಣೆಯಲ್ಲಿ ನಡೆದಿದೆ. ವಘೋಲಿ ಪ್ರದೇಶದ ಬಕೋರಿ ರಸ್ತೆಯಲ್ಲಿ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

21 year old BBA student stabbed to death by gay partner in Maharashtras Pune Vin
Author
First Published Dec 1, 2023, 12:02 PM IST

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 21 ವರ್ಷದ ಬಿಬಿಎ ವಿದ್ಯಾರ್ಥಿಯನ್ನು ಸಲಿಂಗಕಾಮಿ ಸಂಗಾತಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ಪುಣೆ ನಗರದ ವಾಘೋಲಿ ಪ್ರದೇಶದಲ್ಲಿ 21 ವರ್ಷದ ಯುವಕನನ್ನು ಆತನ ಸಲಿಂಗಕಾಮಿ ಸಂಗಾತಿ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಕೋರ್ಸ್ ಓದುತ್ತಿದ್ದು, ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮನೆಯಿಂದ ಹೊರಬಂದಿದ್ದ ವೇಳೆ ಸಲಿಂಗ ಕಾಮಿ ಸಂಗಾತಿ ಚಾಕುವಿನಿಂದ ಇರಿದಿದ್ದಾಗಿ ಲೋನಿಕಂಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ, ಶಾಸ್ತ್ರಬದ್ಧವಾಗಿ ನಡೆದ ಮದ್ವೆಯಲ್ಲಿ ಮನೆ ಮಂದಿಯೂ ಭಾಗಿ!

ವಘೋಲಿ ಪ್ರದೇಶದ ಬಕೋರಿ ರಸ್ತೆಯಲ್ಲಿ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಾಳಿಕೋರನು ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ವ್ಯಕ್ತಿಯೊಬ್ಬರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗಮಧ್ಯೆ, ಗಾಯಾಳು ಈ ವ್ಯಕ್ತಿಗೆ ದಾಳಿಕೋರನ ಹೆಸರನ್ನು ತಿಳಿಸಿದನು. ಪ್ರೇಮ ಪ್ರಕರಣದ ಹಿನ್ನಲೆಯಲ್ಲಿ ಆತ ತನಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಸಹ ಮಾಹಿತಿ ನೀಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವ್ಯಕ್ತಿ ಮೃತಪಟ್ಟನು.

ಪ್ರಾಥಮಿಕ ತನಿಖೆಯೊಂದಿಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

ಅರೆ..ಇದ್ಹೇಗಾಯ್ತು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಸಲಿಂಗ ದಂಪತಿ !

Follow Us:
Download App:
  • android
  • ios