Asianet Suvarna News Asianet Suvarna News

2014 ಚೆನ್ನೈ ಬ್ಲಾಸ್ಟ್ ಪ್ರಮುಖ ಆರೋಪಿ ಬಂಧನ,  ಅಲ್‌-ಉಮಾ ಜತೆ ನಂಟು

* ಚೆನ್ನೈ ಎಂಜಿಆರ್ ರೈಲ್ವೆ ನಿಲ್ದಾಣದ ಬಾಂಬ್ ಸ್ಫೋಟ ಪ್ರಕರಣ
* ಚೆನ್ನೈ ಪೊಲೀಸರ ಬಲೆಗೆ ಬಿದ್ದ ಪ್ರಮುಖ ಆರೋಪಿ
* ದರೋಡೆ ಪ್ರಕರಣ ಒಂದರ ವಿಚಾರಣೆ ಮಾಡುವ ವೇಳೆ ಮಾಹಿತಿ ಬಹಿರಂಗ

2014  Chennai blast terror suspect arrested mah
Author
Bengaluru, First Published May 22, 2021, 8:43 PM IST

ಚೆನ್ನೈ(ಮೇ 22)  ಚೆನ್ನೈ ಎಂಜಿಆರ್ ರೈಲ್ವೆ ನಿಲ್ದಾಣದಲ್ಲಿ  (2014)  ನಡೆದಿದ್ದ ಬಾಂಬ್ ಬ್ಲಾಸ್ಟ್ ಗೆ  ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.  ಸ್ಫೋಟದಲ್ಲಿ ಮಹಿಳಾ ಇಂಜಿನಿಯರ್ ಹತರಾಗಿದ್ದರು

38 ರಫೀಕ್ ಎಂಬಾತನನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ.  ನಿಷೇಧಿತ ಸಂಘಟನೆ ಅಲ್ ಉಮಾ ಪರವಾಗಿ ಈ ರಫೀಕ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.  ದರೋಡೆ ಪ್ರಕರಣವೊಂದರ ಮಾಹಿತಿ ಕಲೆಹಾಕಿದಾಗ ಬಾಂಬ್ ಬ್ಲಾಸ್ಟ್ ವಿಚಾರವೂ ಬಹಿರಂಗವಾಗಿದೆ. ಎನ್ ಐಎ ಕೂಡ ಈ ಆರೋಪಿಯ ಹುಡುಕಾಟ ನಡೆಸುತ್ತಿತ್ತು.

ದೆಹಲಿ ಸ್ಫೋಟದ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಚೆನ್ನೈ ಪೊಲೀಸರು ಎನ್‌ಐಎಗೆ ಮಾಹಿತಿ ನೀಡಿದ್ದು ಆರೋಪಿಯನ್ನು ವಶಕ್ಕೆ ನೀಡಲಿದ್ದಾರೆ.   ಮೊದಲು ನಕಲಿ ನೋಟು ಚಲಾವಣೆ ಮಾಡುತ್ತಿದ್ದ ರಫೀಕ್ ನಂತರ ಒಂದಾದ ಮೇಲೆ ಒಂದು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಮಾಲ್ಡಾ ಜಿಲ್ಲೆಯ ಅನೇಕ ದೇಶದ್ರೋಹಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದಿದ್ದಾರೆ.

ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದ ರಫೀಕ್ ಅಲ್ಲಿಂದ ನಕಲಿ  ನೋಟುಗಳನ್ನು ತಂದು ಇಲ್ಲಿ ಚಲಾವಣೆ ಮಾಡುತ್ತಿದ್ದ. ಇತ್ತೀಚೆಗೆ ರಫೀಕ್ ತನ್ನ ಸಹಚರನೊಂದಿಗೆ ಸೇರಿ ಚಿನ್ನದ ವ್ಯಾಪಾರಿಯೊಬ್ಬರನ್ನು ದರೋಡೆ ಮಾಡಿದ್ದ.

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ ಪೊಲೀಸರಿಗೆ ಹಲವು ಅನುಮಾನಗಳು ಕಾಡಿವೆ. ಜತೆಗೆ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿಯನ್ನು ಕಲೆಹಾಕಿದ್ದು ಬಾಂಬ್ ಬ್ಲಾಸ್ಟ್ ಜತೆ ನಂಟು ಇರುವುದು ಗೊತ್ತಾಗಿದೆ.    

Follow Us:
Download App:
  • android
  • ios