ಉನ್ನಾವೊ[ಜ.29]: ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಯರ ಸೌಂದರ್ಯವನ್ನು ವಿರೂಪಗೊಳಿಸಲು ಅವರ ಮೇಲೆ ಭಗ್ನ ಪ್ರೇಮಿಗಳು ಆ್ಯಸಿಡ್‌ ದಾಳಿ ಮಾಡಿದ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ, ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಯುವಕನ ಬಗ್ಗೆ ಬೇಸತ್ತಿದ್ದ ಯುವತಿಯೊಬ್ಬಳು, ಯುವಕನ ಮೇಲೆ ದಾಳಿ ನಡೆಸಿದ ಘಟನೆಯೊಂದು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದಿದೆ.

ತಾಯಿ, 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ

ರೋಹಿತ್‌ ಎಂಬಾತ, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ಸಂಬಂಧ ಪದೇ ಪದೇ ಆಕೆಯನ್ನು ಕಾಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಮಂಗಳವಾರ ರೋಹಿತ್‌ ಮೇಲೆ ಆ್ಯಸಿಡ್‌ ಎರಚಿದ್ದಾಳೆ. ಯುವಕನ ಮೇಲೆ ಆ್ಯಸಿಡ್ ಎರಚಿದ ಸುದ್ದಿ ಲಭಿಸುತ್ತಿದ್ದಂತೆಯೇ ಗ್ರಾಮಸ್ಥರೆಲ್ಲಾ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು,ತೀವ್ರ ಸುಟ್ಟಗಾಯಕ್ಕೆ ತುತ್ತಾಗಿದ್ದ ರೋಹಿತ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಗಂಭೀರ ಸುಟ್ಟ ಗಾಯಗಳಿಗೆ ತುತ್ತಾಗಿದ್ದ ಯುವಕನನ್ನು ತಪಾಸಣೆ ಮಾಡಿದ ವೈದ್ಯರು ಾತನನ್ನು ಲಕ್ನೋ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ...!