ದಾವಣಗೆರೆ: 20 ಲಕ್ಷ ಮೌಲ್ಯದ 102 ಕೆಜಿ ಬೆಳ್ಳಿ ಜಪ್ತಿ, ಇಬ್ಬರ ಬಂಧನ

*   ಸೇಲಂನ ಸೆಲ್ವಂ ಮತ್ತು ಬಾಲಾಜಿ ಬಂಧನ
*   ಬಂಧಿತ ಬಳಿ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇರಲಿಲ್ಲ  
*   ಸಾಕಷ್ಟು ಪರಿಶ್ರಮ ವಹಿಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು 

20 Lakhs Worth 102 kg of Silver Seized in Davanagere grg

ದಾವಣಗೆರೆ(ಜು.05): ತಮಿಳುನಾಡಿನ ಸೇಲಂನಿಂದ ಅನಧಿಕೃತವಾಗಿ 20 ಲಕ್ಷ ಮೌಲ್ಯದ 102 ಕೆಜಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು. 

ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ಅವರು, ದಾವಣಗೆರೆಗೆ ಜು. 3 ರಂದು ಬಂದಿದ್ದ ಸೇಲಂನ ಸೆಲ್ವಂ ಮತ್ತು ಬಾಲಾಜಿ ಎಂಬಿಬ್ಬರನ್ನು ಬಂಧಿಸಲಾಗಿದೆ. ಇಬ್ಬರ ಬಳಿಯೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇರಲಿಲ್ಲ  ಮಾರಾಟ ಮಾಡಲು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾವ ಕಾರಣದಿಂದ ಇಷ್ಟೊಂದು ಪ್ರಮಾಣದ ಬೆಳ್ಳಿ ತಂದಿದ್ದರು, ಕದ್ದಂತಹವುದು ಏನಾದರೂ ಇರಬಹುದೇ ಎಂಬ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಳೆಯ ಬೆಳ್ಳಿ ಖರೀದಿಸಿ ಪಾಲಿಷ್ ಮಾಡಿ ಮಾರಾಟಕ್ಕೇನಾದರೂ ತಂದಿರಬಹುದೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ

ಕಳ್ಳತನ ಮಾಡಿಕೊಂಡು ಬಂದು ಕಡಿಮೆ ದರಕ್ಕೆ ಮಾರಾಟಕ್ಕೆ ಯತ್ನಿಸಿರುವ ಪ್ರಕರಣಗಳು ಹಲವು ಕಡೆ ನಡೆದಿವೆ. ದಾವಣಗೆರೆಯ ಚಿನ್ನ ಬೆಳ್ಳಿ ಮಾರಾಟಗಾರರ ಸಭೆ ನಡೆಸಿ ಬಿಲ್ ಇಲ್ಲದೇ ಇರುವ ಚಿನ್ನ ಬೆಳ್ಳಿ ಆಭರಣ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ಯಾವುದೇ ಬಿಲ್ ಇಲ್ಲದಿರುವ ಆಭರಣಗಳ ಖರೀದಿ ಮಾಡುವುದರಿಂದ ಕಳ್ಳರು ಸುಲಭವಾಗಿ ಕದ್ದ ಮಾಲು ಮಾರಾಟ ಮಾಡಬಹುದಾಗಿದೆ. ಹಾಗಾಗಿ ಬಿಲ್ ಇಲ್ಲದೆ ಖರೀದಿ ಮಾಡದಂತೆ ಹಲವಾರು ಸಭೆಯಲ್ಲಿ ತಿಳಿಸಲಾಗಿದೆ ಎಂದರು.

ಚಿನ್ನ ಬೆಳ್ಳಿ ವ್ಯಾಪಾರಸ್ಥರು ಬುಲಿಯನ್ ಖಾತೆಯ ಮೂಲಕವೇ ಖರೀದಿ ಮಾಡಬೇಕು. ಅನಧಿಕೃತವಾಗಿ ಖರೀದಿ ಮಾಡುವಂತಿಲ್ಲ ಎಂದು ತಿಳಿಸಿದರು. ಸಾಕಷ್ಟು ಪರಿಶ್ರಮ ವಹಿಸಿ ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಪ್ರಶಂಸನೀಯ ಕಾರ್ಯಕ್ಕೆ ನಗದು ಬಹುಮಾನ ಸಹ ನೀಡಲಾಗುತ್ತದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಆರ್. ಬಸರಗಿ, ದಾವಣಗೆರೆ ನಗರ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ್ , ಕೆ.ಎನ್. ಗಜೇಂದ್ರಪ್ಪ, ಧನಂಜಯ ಇತರರು ಇದ್ದರು.
 

Latest Videos
Follow Us:
Download App:
  • android
  • ios