Bengaluru: ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ ಮಾಜಿ ಕಾನ್ಸ್‌ಟೇಬಲ್ ಬಂಧನ!

 ರೈಸ್ ಪುಲ್ಲಿಂಗ್ ದಂಧೆ  ಪ್ರಕರಣದಲ್ಲಿ ಸಿಎಆರ್ ನ ಮಾಜಿ ಕಾನ್ಸ್‌ಟೇಬಲ್ ನನ್ನು ಬಂಧಿಸಲಾಗಿದ್ದು, ಬಂಧಿತರಿಂದ ರೈಸ್ ಪುಲ್ಲಿಂಗ್ ಯಂತ್ರ, 28 ಲಕ್ಷ ನಗದು, ಮೂರು ಐಷಾರಾಮಿ ಕಾರುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Former police constable among three held in rice pulling scam gow

ಬೆಂಗಳೂರು (ಏ.17): ಈ ಹಿಂದೆ ಸಿಎಆರ್ ನಲ್ಲಿ ಕಾನ್ಸ್‌ಟೇಬಲ್ ಆಗಿದ್ದ ನಟೇಶ್ ಎಂಬಾತನನ್ನು  ರೈಸ್ ಪುಲ್ಲಿಂಗ್ ದಂಧೆ  ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೈಸ್ ಪುಲ್ಲಿಂಗ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಆರೋಪಡಿ  ಮಾಜಿ ಪೊಲೀಸ್ ಕಾನ್ಸ್‌ಟೇಬಲ್ ನಟೇಶ್ ನ ಬಂಧನವಾಗಿದೆ. ನಟೇಶ್ ಸೇರಿ ಜೊತೆಗೆ ಮೂವರನ್ನು ಕೂಡ ಬಂಧಿಸಲಾಗಿದೆ. ನಟೇಶ್ ಜೊತೆಗೆ ವೆಂಕಟೇಶ್ ಮತ್ತು ಸೋಮಶೇಖರ್ ಎಂಬಾತನನ್ನು ಬಂಧಿಸಲಾಗಿದೆ.

ಇವರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ರೈಸ್ ಪುಲ್ಲಿಂಗ್ ಮಿಷನ್ ನೀಡುವುದಾಗಿ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ ರೈಸ್ ಪುಲ್ಲಿಂಗ್ ಯಂತ್ರ, 28 ಲಕ್ಷ ನಗದು, ಮೂರು ಐಷಾರಾಮಿ ಕಾರುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 2007 ರಲ್ಲಿ ನಟೇಶ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ. ಬಳಿಕ ರೈಸ್ ಪುಲ್ಲಿಂಗ್ ದಂಧೆಗೆ ಸಿಲುಕಿ ಹಣ ಕಳೆದುಕೊಂಡಿದ್ದ. ಹಣ ಲಾಸ್ ಆದ ಬಳಿಕ ಕೆಲಸ ಬಿಟ್ಟು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಿದ್ದನು.  ನಂತರ ಆರೋಪಿಗಳ ಜೊತೆಗೂಡಿ ತಾನು ರೈಸ್ ಪುಲ್ಲಿಂಗ್ ದಂಧೆಗೆ ಇಳಿದಿದ್ದನು.

ತಡೆಯಲು ಬಂದ ಪೊಲೀಸ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಪರಾರಿ!
ಮೈಸೂರು ರಸ್ತೆಯ ಬಾಪೂಜಿ ನಗರದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬರುವಾಗ ತಡೆಯಲು ಮುಂದಾದ ಕರ್ತವ್ಯ ನಿರತ ಸಂಚಾರ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.

ಬರೋಬ್ಬರಿ 34 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದ ವೀರಪ್ಪನ್ ಸಹಚರ ಸಾವು

ಘಟನೆಯಲ್ಲಿ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ನ್ಯಾಮಗೌಡ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಸವಾರನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರ ಮೇಲೆ ಸಾಲು ‌ಸಾಲು ಆರೋಪ, ಕಮಿಷನರ್ ರೆಡ್ಡಿ 

ಮೈಸೂರು ರಸ್ತೆಯ ಬಾಪೂಜಿ ನಗರ ಜಂಕ್ಷನ್‌ನಲ್ಲಿ ಹೆಡ್‌ಕಾನ್‌ಸ್ಟೇಬಲ್‌ ನ್ಯಾಮಗೌಡ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸವಾರನೊಬ್ಬ ಹೆಲ್ಮೆಟ್‌ ಧರಿಸದೆ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ನ್ಯಾಮಗೌಡ ಕೈ ಅಡ್ಡಿ ಹಿಡಿದು ದ್ವಿಚಕ್ರ ವಾಹನ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಆದರೆ, ಸವಾರ ಏಕಾಏಕಿ ನ್ಯಾಮಗೌಡರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ನ್ಯಾಮಗೌಡ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಗಾಯಾಳು ನ್ಯಾಮಗೌಡರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios