Asianet Suvarna News Asianet Suvarna News

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್‌ಗಳು ಪತ್ತೆ; ಸ್ಫೋಟಕ ಇರುವ ಶಂಕೆ

ಶಿವಮೊಗ್ಗ ರೈಲ್ವೆ ನಿಲ್ದಾಣ ಮುಂಭಾಗದ ಆಟೋ ಸ್ಟ್ಯಾಂಡ್ ಬಳಿ ಎರಡು ಅನುಮಾನಾಸ್ಪದವಾಗಿ ಬಾಕ್ಸ್ ಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಇಂದು ಅನುಮಾನಾಸ್ಪದವಾಗಿ ಎರಡು ಬಾಕ್ಸ್‌ಗಳು ಬಿಟ್ಟುಹೋಗಿರುವ ಅಪರಿಚಿತರು. ಬಾಕ್ಸ್‌ಗಳನ್ನು ಯಾರೂ ತೆಗೆಯಲು ಮುಂದೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ಆಟೋ ಚಾಲಕ ಸೈಯದ್ ಕಾಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2 suspicious boxes found near Shimoga railway station today rav
Author
First Published Nov 5, 2023, 2:11 PM IST

ಶಿವಮೊಗ್ಗ (ನ.5): ಶಿವಮೊಗ್ಗ ರೈಲ್ವೆ ನಿಲ್ದಾಣ ಮುಂಭಾಗದ ಆಟೋ ಸ್ಟ್ಯಾಂಡ್ ಬಳಿ ಎರಡು ಅನುಮಾನಾಸ್ಪದವಾಗಿ ಬಾಕ್ಸ್ ಗಳು ಪತ್ತೆಯಾಗಿರುವ ಘಟನೆ ನಡೆದಿದೆ.

ಇಂದು ಅನುಮಾನಾಸ್ಪದವಾಗಿ ಎರಡು ಬಾಕ್ಸ್‌ಗಳು ಬಿಟ್ಟುಹೋಗಿರುವ ಅಪರಿಚಿತರು. ಬಾಕ್ಸ್‌ಗಳನ್ನು ಯಾರೂ ತೆಗೆಯಲು ಮುಂದೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ಆಟೋ ಚಾಲಕ ಸೈಯದ್ ಕಾಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬ್ರ್ಯಾಂಡೆಡ್ ಕಂಪನಿ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ; ಲಕ್ಷಾಂತರ ರೂ. ಬಟ್ಟೆ ಪೊಲೀಸರ ವಶಕ್ಕೆ

ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು. ಬಾಕ್ಸ್‌ಗಳಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ಅನುಮಾನ ಸ್ಪದ  ಬಾಕ್ಸ್ ಗಳು ಪತ್ತೆಯಾದ ಸ್ಥಳದ ಸುತ್ತಮುತ್ತ  ಬಂದೋಬಸ್ತ್ ಮಾಡಿದ ಪೊಲೀಸರು. ಶಿವಮೊಗ್ಗ ಉಪ ವಿಭಾಗ ಎರಡು ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಪೊಲೀಸ್ರಿಂದ ಪರಿಶೀಲನೆ.

ಆಟೋ ಚಾಲಕ ಸೈಯದ್ ಕಾಕಾ ಹೇಳೋದೇನು?

ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಈ ಬಾಕ್ಸ್ ಗಳನ್ನ ವ್ಯಾನ್ ಗಳು ನಿಲ್ಲಿಸಿಕೊಂಡ ಜಾಗದಲ್ಲಿ ನೋಡಿದ್ದೆ. ನಂತರ ಬೆಳಗಿನ 11:00 ವರೆಗೂ ಯಾರೂ ಈ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗದ ಹಿನ್ನೆಲೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಅದಾದ ಬಳಿಕ ಪೊಲೀಸರು ಬಂದು ಈ ಬಾಕ್ಸ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಎಲೆಕ್ಟ್ರಾನಿಕ್ಸ್ ಕೇಬಲ್‌ಗಳು ಇದೆ ಎಂದು ಹೇಳಲಾಗಿದೆ ಎಂದಿದ್ದಾರೆ. 

ಜಿಲ್ಲಾ ಪೊಲೀಸರ ಸೂಚನೆಯ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಬಾಕ್ಸ್‌ ಇರುವ ಸುತ್ತ ಮರಳು ತುಂಬಿದ ಚೀಲಗಳನ್ನಿಟ್ಟ ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಬ್ಬಂದಿ, ಪೊಲೀಸರು. ಮಹಾನಗರ ಪಾಲಿಕೆಯ ಎರಡು ವಾಹನಗಳಲ್ಲಿ ಬಂದ ಮರಳು ತುಂಬಿದ ಚೀಲಗಳು ತರಿಸಿದ ಪೊಲೀಸರು.

ಶಿವಮೊಗ್ಗದ ಡೈನಾಮಿಕ್‌ ಲೇಡಿ ಕೆಎಎಸ್‌ ಆಫೀಸರ್‌ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!

ಬಾಕ್ಸ್ ಬೆನ್ನು ಹತ್ತಿದ ಪೊಲೀಸರು:

ಬೆಳಗಿನ ಜಾವ ಶಿವಮೊಗ್ಗ ರೈಲು ನಿಲ್ದಾಣದ ಬಳಿ ನಿಂತಿದ್ದ ಟೂರಿಸ್ಟ್ ಕಾರುಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು. ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಬಾಕ್ಸ್ ಗಳ ಬಳಿ ಕಾರುಗಳು ನಿಂತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕರನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು. ರೈಲ್ವೆ ನಿಲ್ದಾಣದ ಆಟೋ ಚಾಲಕರಿಂದಲೂ ಮಾಹಿತಿ ಕಲೆ ಹಾಕಿದ ಪೊಲೀಸರು. ಶಿವಮೊಗ್ಗ ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆ

Follow Us:
Download App:
  • android
  • ios