ಮಧ್ಯರಾತ್ರಿ ಯುವತಿಯರನ್ನು ರೇಟ್ ಕೇಳಿದ ಹಿಗ್ಗಾ ಮುಗ್ಗ ಬೈದ ಹುಡುಗಿಯರು..! ವಿಡಿಯೋ ವೈರಲ್

ನವದೆಹಲಿ(ಜು.21): ದೆಹಲಿಯ ಹೌಜ್ ಖಾಸ್ ಗ್ರಾಮ ಪ್ರದೇಶದಲ್ಲಿ ಬೀದಿಗಳಲ್ಲಿ ಇಬ್ಬರಿಗೆ ಕಿರುಕುಳ ನೀಡಿದ ಯುವಕರ ಗುಂಪಿನ ವಿಡಿಯೋ ವೈರಲ್ ಆಗಿದೆ. ಇಬ್ಬರು ಈಶಾನ್ಯ ಯುವತಿಯರು ಎದುರಿಸುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಅಗಿದೆ.

ವೈರಲ್ ವೀಡಿಯೊದಲ್ಲಿ, ಇಬ್ಬರು ಯುವತಿಯರು ವೇಶ್ಯೆಯರು ಎಂದು ತಿಳಿದು ನಿಮ್ಮ ರೇಟ್ ಏನು ಎಂದು ಕೇಳಿದ ಮಧ್ಯವಯಸ್ಕ ಯುವಕರ ಗುಂಪನ್ನು ಬೈಯುವುದನ್ನು ಕೇಳಬಹುದು.

ನಪುಂಸಕ ಎಂದು ಕರೆದ ಡಾಕ್ಟರ್ ಅತ್ತಿಗೆ ಹತ್ಯೆ ಮಾಡಿದ ಮೈದುನ!

ವೀಡಿಯೊದಲ್ಲಿ ಹುಡುಗಿಯರು ತಮ್ಮ ಅವಸ್ಥೆ ಏಮಾಯ್ತು ಎಂದು ವಿವರಿಸಿದ್ದಾರೆ. ಅದೇ ರಾತ್ರಿ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಅವರು ರೆಸ್ಟೋರೆಂಟ್‌ಗೆ ಹೋಗುವಾಗ ಅವರು ಹೋಗುತ್ತಿರುವ ಸ್ಥಳದ ಪದೇ ಪದೇ ಕೇಳಿದಾಗ ಅವರು ಮತ್ತೊಂದು ತಾರತಮ್ಯದ ಘಟನೆ ಎದುರಿಸಿದ್ದಾಗಿ ವಿವರಿಸಿದ್ದಾರೆ. ಪೋಲೀಸ್ ಯುವತಿಯರು ಡ್ಯಾನ್ಸರ್ಸ್‌ಗಳಾ ಎಂದು ಕೇಳಿದ್ದಾರೆ ಎಂದು ವೀಡಿಯೊದಲ್ಲಿರುವ ಮಹಿಳೆಯರು ಆರೋಪಿಸಿದ್ದಾರೆ.

ರಾತ್ರಿ 10 ಗಂಟೆಗೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸಿದರೂ ಅವರು ಎದುರಿಸಿದ ಅವಮಾನಗಳನ್ನು ವಿಡಿಯೋ ಮೂಲಕ ಪ್ರಸ್ತಾಪಿಸಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗ ಈ ವಿಷಯವನ್ನು ಅರಿತುಕೊಂಡು ಪೊಲೀಸರಿಗೆ ನೋಟಿಸ್ ನೀಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದೆ. ಆಯೋಗದ ಅಧ್ಯಕ್ಷ ಸ್ವಾತಿ ಮಾಲಿವಾಲ್ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.