Asianet Suvarna News

ನಪುಂಸಕ ಎಂದು ಕರೆದ ಡಾಕ್ಟರ್ ಅತ್ತಿಗೆ ಹತ್ಯೆ ಮಾಡಿದ ಮೈದುನ!

* ಉತ್ತರ ಪ್ರದೇಶದ ಖ್ಯಾತ ವೈದ್ಯೆಯ ಕೊಲೆ ಮಾಡಿದ ಮೈದುನ
* ನಪುಂಸಕ ಎಂದು ಕರೆದಿದ್ದಕ್ಕೆ ಕೋಪ
* ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ

Brother-in-law murders woman doctor in cold blood for calling him impotent Varanasi mah
Author
Bengaluru, First Published Jul 21, 2021, 5:31 PM IST
  • Facebook
  • Twitter
  • Whatsapp

ವಾರಣಾಸಿ( ಜು. 21)  ಇದೊಂದು ಭಯಾನಕ ಘಟನೆ. ಉತ್ತರ ಪ್ರದೇಶದ ಪ್ರಖ್ಯಾತ ಮಹಿಳಾ ವೈದ್ಯೆಯೊಬ್ಬರು ತಮ್ಮ ಮೈದುನನಿಂದಲೇ ಹತ್ಯೆಯಾಗಿದ್ದಾರೆ.  ಬುಧವಾರ ಬೆಳಿಗ್ಗೆ ಸಹಾಯವಾಣಿ ‘ಡಯಲ್ 112’ ಕ್ಕೆ ಕರೆ ಒಂದು ಬಂದಿದೆ. ಹಮೂರ್‌ಗಂಜ್ ಪ್ರದೇಶದಲ್ಲಿ ಕೊಲೆಯಾದ ಮಾಹಿತಿ ಸಿಕ್ಕಿದೆ.

ಪೊಲೀಸರು ಅಲ್ಲಿಗೆ ಹೋಗಿ ನೋಡಿದಾಗ ಕ್ಯಾನ್ಸರ್ ತಜ್ಞೆ ಸಪ್ನಾ ದತ್ತಾ ಕೊಲೆಯಾಗಿ ಬಿದ್ದಿದ್ದರು.  ಮಾಜಿ ಎಂಎಲ್‌ಎ ರಜನೀಕಾಂತ್ ದತ್ತಾ ಅವರ ಸೊಸೆಯ ಹತ್ಯೆಯಾಗಿತ್ತು.

ರಕ್ಕಸನಾದ ವರ; ತನ್ನ ಮದುವೆ ದಿನ ಅತ್ತಿಗೆ ಮೇಲೆ ಅತ್ಯಾಚಾರ

ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ಮೈದುನ ಅನಿಲ್ ದತ್ತಾನೇ ಹತ್ಯೆ ಮಾಡಿರುವ ವಿಚಾರ ಗೊತ್ತಾಗಿದೆ. ಆತನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸುತ್ತಿಗೆ ಮತ್ತು ಕತ್ತರಿಯನ್ನು ಬಳಸಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ನಪುಂಸಕ ಎಂದು ಹೀಯಾಳಿಸಿದ್ದೆ ಕೊಲೆಗೆ ಕಾರಣ; ಅನಿಲ್ ಮಾತನಾಡಿರುವ ವಿಡಿಯೋ ಕ್ಲಿಪ್ ಒಂದು ಲಭ್ಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪೋಷಕರನ್ನು ಭೇಟಿ ಮಾಡಲು ಹೊರಟಾಗ ಅತ್ತಿಗೆ ನನ್ನನ್ನು ಹೀಯಾಳಿಸಿದಳು. ನಪುಂಸಕ ಎಂದು ಜರಿದಳು. ಇದೇ ಕಾರಣಕ್ಕೆ ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ.

 

Follow Us:
Download App:
  • android
  • ios