Asianet Suvarna News Asianet Suvarna News

Momos ವಿಚಾರಕ್ಕೆ ದೆಹಲಿಯಲ್ಲಿ 40 ವರ್ಷದ ವ್ಯಕ್ತಿ ಹತ್ಯೆ; 18 ವರ್ಷದ ಆರೋಪಿ ಬಂಧನ

ದೆಹಲಿಯಲ್ಲಿ ಮೊಮೋಸ್‌ ವಿಚಾರಕ್ಕೆ ಹತ್ಯೆ ನಡೆದಿದ್ದು, 18 ವರ್ಷದ ಆರೋಪಿ ನಕುಲ್‌ ಕುಮಾರ್‌ ದಾಸ್‌ನನ್ನು ಆತನ ಕುಟುಂಬಸ್ಥರೇ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. 

40 year old man killed over a plate of momos in delhi ash
Author
First Published Sep 6, 2022, 12:25 PM IST

ಒಮ್ಮೊಮ್ಮೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಗಳಾಗುತ್ತಿರುತ್ತದೆ, ಕೊಲೆಗಳೂ ನಡೆಯುತ್ತಿರುತ್ತದೆ. ಅದೇ ರೀತಿ, ಶನಿವಾರ ರಾತ್ರಿ ಪಶ್ಚಿಮ ದೆಹಲಿಯ (West Delhi) ಮೋಹನ್ ಗಾರ್ಡನ್‌ನಲ್ಲಿ (Mohan Garden) 40 ವರ್ಷದ ವ್ಯಕ್ತಿಯೊಬ್ಬರನ್ನು ಹತ್ಯೆಗೈಯಲಾಗಿದೆ. 18 ವರ್ಷದ ಹುಡುಗ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಗೂಡಂಗಡಿ ಬಳಿ 40 ವರ್ಷದ ವ್ಯಕ್ತಿ, ಮೊಮೋಸ್‌ (Momos) ತಿನ್ನುತ್ತಿದ್ದ 18 ವರ್ಷದ ವ್ಯಕ್ತಿಯನ್ನು ತಳ್ಳಿದ್ದಾರೆ. ಇದರಿಂದ ಒಂದು ಪ್ಲೇಟ್‌ ಮೊಮೋಸ್‌ ಕೆಳಕ್ಕೆ ಬಿದ್ದಿದ್ದಕ್ಕೆ ಈ ಜಗಳ ಆರಂಭವಾಗಿದೆ ಎಂದು ಪೊಲೀಸರು (Police) ಭಾನುವಾರ ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಪಾನಮತ್ತನಾಗಿದ್ದ ಆರೋಪಿ ನಕುಲ್ ಕುಮಾರ್ ದಾಸ್ ಎಂಬಾತನನ್ನು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆತನ ಕುಟುಂಬದವರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಹತ್ಯೆಗೀಡಾದವರನ್ನು ಜಿತೇಂದರ್ ಮಹ್ತೋ ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಬಿಹಾರದ ಸಿತಾಮರ್ಹಿಯವರು ಎಂದು ತಿಳಿದುಬಂದಿದೆ. ಆದರೆ ತಮ್ಮ ಪತ್ನಿ, ಮೂವರು ಮಕ್ಕಳು ಮತ್ತು ಸಹೋದರನೊಂದಿಗೆ ಇವರು ಮೋಹನ್ ಗಾರ್ಡನ್ ಬಳಿಯ ಸೈನಿಕ್ ಎನ್‌ಕ್ಲೇವ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಜಿತೇಂದರ್ ಅವರ ಸ್ನೇಹಿತ ವೀರೇಂದ್ರ ಕುಮಾರ್ ಮಹ್ತೋ ಅವರ ಹೇಳಿಕೆಯ ಮೇಲೆ ಪ್ರಥಮ ಮಾಹಿತಿ ವರದಿ (First Information Report) (ಎಫ್‌ಐಆರ್) ದಾಖಲಿಸಲಾಗಿದೆ. 

BENGALURU RAINS: ವಿದ್ಯುತ್ ಸ್ಪರ್ಶಿಸಿ ಯುವತಿ ಬಲಿ; ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು..?

ತನಿಖಾಧಿಕಾರಿಗಳ ಪ್ರಕಾರ, ಮೋಹನ್ ಗಾರ್ಡನ್‌ನ ತಿರಂಗ ಚೌಕ್ ಪ್ರದೇಶದ ಜನನಿಬಿಡ ಮಾರುಕಟ್ಟೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಿತೇಂದರ್ ಕೊಲೆ ನಡೆದಿದೆ. ಶನಿವಾರ ಸಂಜೆ ಜಿತೇಂದರ್ ಅವರಿಗೆ ಕರೆ ಮಾಡಿ ಮಾರುಕಟ್ಟೆಯಲ್ಲಿ ಭೇಟಿಯಾಗುವಂತೆ ಹೇಳಿದ್ದರು ಎಂದು ವೀರೇಂದ್ರ ಹೇಳಿಕೆಯನ್ನು ಉಲ್ಲೇಖಿಸಿದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಈ ಹಿಂದೆ ಮಾರುಕಟ್ಟೆಯಲ್ಲಿ ಫುಟ್‌ಪಾತ್‌ಗಳಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ 2 ತಿಂಗಳ ಹಿಂದೆ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು. ನಂತರ, ಜಿತೇಂದರ್ ಸ್ಥಳೀಯ ಕಟ್ಟಡ ಗುತ್ತಿಗೆದಾರರಾಗಿ (Local Building Contractor) ಕೆಲಸ ಮಾಡುತ್ತಿದ್ದರು.

“ಕಳೆದ ಹಲವು ದಿನಗಳಿಂದ ನಾವು ಭೇಟಿಯಾಗದ ಕಾರಣ, ನಾನು ಜಿತೇಂದರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಾವು ಪ್ಯಾನ್-ತಂಬಾಕು ಕಿಯೋಸ್ಕ್‌ನಲ್ಲಿ ಮಾತನಾಡುತ್ತಿದ್ದೆವು. ನಮಗೆ ಪರಿಚಯವಿದ್ದ ನಕುಲ್ ಕುಮಾರ್ ಸಮೀಪದ ಪ್ರದೇಶದಲ್ಲಿ ವಾಸಿಸುತ್ತಿದ್ದನು, ಅವನು ಪಕ್ಕದ ಅಂಗಡಿಯಲ್ಲಿ ಮೊಮೋಸ್ ತಿನ್ನುತ್ತಿದ್ದ. ನಾವು ಹೊರಡಲು ಪ್ರಾರಂಭಿಸಿದಾಗ, ಜಿತೇಂದರ್ ಅವರ ಭುಜವು ನಕುಲ್ ಕೈಯನ್ನು ತಾಗಿತು, ಇದರಿಂದಾಗಿ ಅವನ ಮೊಮೊಸ್ ಪ್ಲೇಟ್ ರಸ್ತೆಯ ಮೇಲೆ ಬಿದ್ದಿತು,”ಎಂದು ತನಿಖಾಧಿಕಾರಿಯೊಬ್ಬರು ವೀರೇಂದ್ರ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

Illicit Relationship ಶಂಕೆ, ಸೊಸೆಯನ್ನೇ ಕೊಂದ ಮಾವ!

ಹಾಗೂ, “ನಕುಲ್ ಕುಡಿದಂತೆ ಇದ್ದ, ಹಾಗೂ ಕೈಯಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಜಿತೇಂದರ್ ಅವರನ್ನು ನಿಂದಿಸಲು ಪ್ರಾರಂಭಿಸಿದನು. ಅವರ ನಡುವೆ ವಾಗ್ವಾದ ನಡೆದು ಅದು ಸ್ವಲ್ಪದರಲ್ಲೇ ವಿಕೋಪಕ್ಕೆ ತಿರುಗಿತು. ಜಗಳದ ವೇಳೆ ನಕುಲ್ ತನ್ನ ಜೇಬಿನಿಂದ ಚಾಕು ತೆಗೆದು ಜಿತೇಂದರ್ ಕುತ್ತಿಗೆಗೆ ಇರಿದಿದ್ದಾನೆ. ಜಿತೇಂದರ್ ಅವರಿಗೆ ರಕ್ತಸ್ರಾವ ಪ್ರಾರಂಭವಾಗಿದ್ದು. ನಂತರ ಆ ಸ್ಥಳದಲ್ಲಿದ್ದ ಕೆಲವರು ಹಾಗೂ ನಾನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ, ನಕುಲ್ ಓಡಿಹೋದ’’ ಎಂದು ಅಧಿಕಾರಿ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಜಿತೇಂದರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕೊಲೆಯ ಬಗ್ಗೆ ಮಾಹಿತಿ ನೀಡಿದ ನಂತರ ಫೋರೆನ್ಸಿಕ್ ತಜ್ಞರೊಂದಿಗೆ ಪೊಲೀಸ್ ತಂಡವು ಅಪರಾಧ ಸ್ಥಳಕ್ಕೆ ತಲುಪಿದೆ. ಅವರು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆಗೆ ತಲುಪಿದರು, ಅಲ್ಲಿ ನಕುಲ್ ಈಗಾಗಲೇ ಶರಣಾಗಿರುವುದನ್ನು ಅವರು ಕಂಡುಕೊಂಡಿದ್ದಾರೆ. ಆತ ಶಾಲೆಯನ್ನು ತೊರೆದಿದ್ದು, ಆದರೆ ಯಾವುದೇ ಕ್ರಿಮಿನಲ್‌ ದಾಖಲೆ ಹೊಂದಿಲ್ಲ. ಹಾಗೂ ಕುಟುಂಬಸ್ಥರೇ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios