Asianet Suvarna News Asianet Suvarna News

Jewellery Theft: Five Star Hotelಯಿಂದ 2 ಕೋಟಿ ರು. ಆಭರಣ ಕಳವು!

*ಪಂಚತಾರ ಹೋಟೆಲ್‌ನಿಂದ್ ಚಿನ್ನಾಭರಣ, ನಗದು ಕಳುವು
*ಹೋಟೆಲ್‌ನಲ್ಲಿ ಉದ್ಯಮಿ ರಾಹುಲ್‌ ಭಾಟಿಯಾ ತಂಗಿ ಮದುವೆ 
*ಹೋಟೆಲ್ ಸಿಬ್ಬಂದಿಯ ಸಹಕಾರದಿಂದ ಕಳ್ಳತನ ಆರೋಪ

2 Crore Jewellery Cash Stolen During Wedding At Jaipur 5 Star Hotel Clarks Amer mnj
Author
Bengaluru, First Published Nov 28, 2021, 10:35 AM IST

ಜೈಪುರ(ನ.28): ಜೈಪುರದ ಪ್ರಸಿದ್ಧ ಪಂಚತಾರಾ ಹೊಟೇಲಿನಿಂದ (Five Star Hotel) 2 ಕೋಟಿ ರು. ಗೂ ಅಧಿಕ ಮೌಲ್ಯದ ವಜ್ರಾಭರಣ (Jwellery) ಮತ್ತು ನಗದು (Cash) ಕಳ್ಳತನವಾಗಿದೆ. ಮುಂಬೈ ಮೂಲದ ಉದ್ಯಮಿ ರಾಹುಲ್‌ ಭಾಟಿಯಾ (Rahul Bhatia) ಎಂಬುವವರು ತಮ್ಮ ಮಗಳ ಮದುವೆಯನ್ನು ‘ಹೋಟೆಲ್‌ ಕ್ಲಾರ್ಕ್ಸ್’(Hotel Clarks Amer) ನಲ್ಲಿ ಆಯೋಜಿಸಿದ್ದರು. ಭಾಟಿಯಾ ಕುಟುಂಬದವರು ಮದುವೆ ಸಮಾರಂಭದಲ್ಲಿ ಭಾಗವಹಿಸಿದಾಗ 7ನೇ ಮಹಡಿಯಲ್ಲಿರುವ ಅವರ ರೂಮಿನಿಂದ 2 ಕೋಟಿ ಮೌಲ್ಯದ ವಜ್ರಾಭರಣಗಳು ಹಾಗೂ 95 ಸಾವಿರ ರು. ಕಳ್ಳತನವಾಗಿದೆ. ಈ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

"ಭಾಟಿಯಾ ಮತ್ತು ಅವರ ಕುಟುಂಬ ಸದಸ್ಯರು ಏಳನೇ ಮಹಡಿಯಲ್ಲಿ ತಂಗಿದ್ದರು. ಹೋಟೆಲ್ ಲಾನ್‌ನಲ್ಲಿ  ಮದುವೆಗೆ ಕಾರ್ಯಕ್ರಮದಲ್ಲಿದ್ದಾಗ (Marriage function) ಅವರ ಕೊಠಡಿಯೊಂದರಿಂದ ₹ 2 ಕೋಟಿ ಮೌಲ್ಯದ ವಜ್ರ ಆಭರಣಗಳು ಮತ್ತು ₹ 95,000 ನಗದು ಕಳವು ಮಾಡಲಾಗಿದೆ ಎಂದು ಜವಾಹರ್ ಸರ್ಕಲ್  ಎಸ್‌ಎಚ್‌ಒ (SHO) ರಾಧಾರಾಮನ್ ಗುಪ್ತಾ ತಿಳಿಸಿದ್ದಾರೆ. "ಹೋಟೆಲ್ ಸಿಬ್ಬಂದಿಯ ಸಹಕಾರದಿಂದ (Hotel Staff) ಕಳ್ಳತನ ನಡೆದಿದೆ ಎಂದು ರಾಹುಲ್ ಭಾಟಿಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ" ಎಂದು ಪಳಿಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಹೋಟೆಲ್ ಆಡಳಿತ ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಪ್ರಯಾಣಿಕರ ಸೋಗಲ್ಲಿ ಚಿನ್ನಾಭರಣ ಕದೀತಿದ್ದ ಖದೀಮರ ಬಂಧನ

ಯಾಣಿಕರ ಸೋಗಿನಲ್ಲಿ ಬಿಎಂಟಿಸಿ(BMTC) ಬಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ(Gold) ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂಬೇಡ್ಕರ್‌ ಕಾಲೋನಿಯ ರಾಜ್‌ಕುಮಾರ್‌(28) ಮತ್ತು ಸೂರ್ಯ(26) ಬಂಧಿತರು(Arrest). ಆರೋಪಿಗಳು(Accused) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 23.50 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ಹಾಗೂ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Fraud: ಕಡಿಮೆ ಬಡ್ಡಿ ಸಾಲದ ಆಮಿಷ 2 ಕೋಟಿ ರೂ. ವಂಚನೆ

ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರು ಮೆಜೆಸ್ಟಿಕ್‌ನಿಂದ ರಾಜರಾಜೇಶ್ವರಿ ನಗರಕ್ಕೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ಬ್ಯಾಟರಾಯನಪುರ, ಜ್ಞಾನಭಾರತಿ, ಕೆಂಗೇರಿ, ಅನ್ನಪೂರ್ಣೇಶ್ವರಿ ನಗರ, ಉಪ್ಪಾರಪೇಟೆ ಹಾಗೂ ರಾಮನಗರ ಜಿಲ್ಲೆ ಎಂ.ಕೆ.ದೊಡ್ಡಿ ಮತ್ತು ಐಜೂರು ಪೊಲೀಸ್‌(Police) ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ ಕಳವು, ಮನೆಗಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ 10 ಕಳವು ಪ್ರಕರಣಗಳು(Theft Case) ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Murder Case: ಜೀವನ ಪರ್ಯಂತ ಶ್ರಮಿಸಿ ಕೂಡಿಟ್ಟ 1 ಕೋಟಿ ಹಣ, ಚಿನ್ನ, ಬೆಳ್ಳಿ ಎಲ್ಲವೂ ನಿಮಿಷದಲ್ಲಿ ಖಾಲಿ!

ಇಬ್ಬರು ವೃತ್ತಿಪರ ಕಳ್ಳರಾಗಿದ್ದು, ಈ ಹಿಂದೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರಬಂದು ದುಷ್ಕೃತ್ಯ ಮುಂದುವರಿಸಿದ್ದರು. ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಹಾಡಹಗಲೇ ಬೀಗ ಒಡೆದು ಸಿಕ್ಕಿದ್ದನ್ನು ದೋಚುತ್ತಿದ್ದರು. ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪೆಟ್ರೋಲ್‌ ಖಾಲಿಯಾಗುವವರೆಗೂ ಸುತ್ತಾಡುತಿದ್ದರು. ಬಳಿಕ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದರು. ಮನೆಗಳವು ಕೃತ್ಯಗಳಿಗೆ ಈ ಕದ್ದ ದ್ವಿಚಕ್ರ ವಾಹನ ಬಳಸಿಕೊಳ್ಳುತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

Follow Us:
Download App:
  • android
  • ios