ಹೊಸ ಸಿಮ್‌ಕಾರ್ಡ್‌ ಆಕ್ಟಿವ್‌ ಆದ ಗಂಟೆಯಲ್ಲೇ 2.5 ಲಕ್ಷ ವಂಚನೆ: ಎಫ್‌ಐಆರ್‌ ದಾಖಲು

ಹೊಸ ಸಿಮ್‌ ಕಾರ್ಡ್‌ ಆಕ್ಟಿವೇಶನ್‌ ಆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ 2.05 ಲಕ್ಷ ಬೇರೊಂದು ಖಾತೆಗೆ ವರ್ಗಾವಣೆ ಆಗಿರುವ ಸಂಬಂಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

2 5 lakh fraud within an hour of the new SIM card becoming active at bengaluru gvd

ಬೆಂಗಳೂರು (ಜು.10): ಹೊಸ ಸಿಮ್‌ ಕಾರ್ಡ್‌ ಆಕ್ಟಿವೇಶನ್‌ ಆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ 2.05 ಲಕ್ಷ ಬೇರೊಂದು ಖಾತೆಗೆ ವರ್ಗಾವಣೆ ಆಗಿರುವ ಸಂಬಂಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಲೇಔಟ್‌ ನಿವಾಸಿ ಶಿವಕುಮಾರ್‌ ಎಂಬುವವರು ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿವಕುಮಾರ್‌ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜು ಬಳಿ ಜೆರಾಕ್ಸ್‌ ಅಂಗಡಿ ಇರಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಜು.6ರಂದು ಬೆಳಗ್ಗೆ 11ಕ್ಕೆ ಅವರ ಮೊಬೈಲ್‌ನ ಸಿಮ್‌ ಕಾರ್ಡ್‌ ನಿಷ್ಕಿ್ರಯವಾದ ಹಿನ್ನೆಲೆಯಲ್ಲಿ ಸಮೀಪದ ಅಂಗಡಿಯೊಂದರಲ್ಲಿ ಆಧಾರ್‌ ಸಂಖ್ಯೆ ಹಾಗೂ ಫಿಂಗರ್‌ ಪ್ರಿಂಟ್‌ ನೀಡಿ ಹಳೆ ಸಂಖ್ಯೆಯ ಹೊಸ ಸಿಮ್‌ ಕಾರ್ಡ್‌ ಖರೀದಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸಿಮ್‌ ಕಾರ್ಡ್‌ ಆಕ್ಟಿವೇಶನ್‌ ಆಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ಶಿವಕುಮಾರ್‌ ಅವರ ಬ್ಯಾಂಕ್‌ ಖಾತೆಯಿಂದ 5 ಸಾವಿರ ಕಡಿತವಾಗಿದೆ. ಮಾರನೇ ದಿನ ಮಧ್ಯಾಹ್ನ 12ಕ್ಕೆ ಬ್ಯಾಂಕ್‌ ಖಾತೆಯಿಂದ 1 ಲಕ್ಷ ಕಡಿತವಾಗಿರುವ ಸಂದೇಶ ಬಂದಿದೆ.

ವೀರಶೈವ-ಲಿಂಗಾಯತ ಮೀಸಲಾತಿ: ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ಮಠಾಧೀಶರ ಸಭೆ

ಬಳಿಕ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಬ್ಯಾಂಕ್‌ ಖಾತೆಯಿಂದ ಐದು ಬಾರಿ ಒಟ್ಟು 2.05 ಲಕ್ಷ ಕಡಿತ ಆಗಿರುವುದಾಗಿ ಬ್ಯಾಂಕ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿವಕುಮಾರ್‌ ಅನಧಿಕೃತವಾಗಿ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾಣೆ ಆಗಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಂಡ್‌ಮಿಲ್‌ ಕಂಪೆನಿಗಳಿಂದ ರೈತರಿಗೆ ವಂಚನೆ?: ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಂಡ್‌ಮಿಲ್‌ (ವಿದ್ಯುತ್‌ ಉತ್ಪಾದನೆ) ನಿರ್ಮಾಣ ಆಗುತ್ತಿದ್ದು, ವಿದ್ಯುತ್‌ ಉತ್ಪಾದನೆ ವಿಂಡ್‌ಮೀಲ್‌ಗಳ ಸುತ್ತಲೂ ವಂಚನೆ ಆರೋಪ ಕೇಳಿ ಬರುತ್ತಿದೆ! ತಾಲೂಕಿನ ಸಮಾನ ಮನಸ್ಕ ರೈತ ಬಳಗ ಹಾಗು ರೈತ ವರ್ಗ ಹಾಗು ಶಾಸಕ ಬಸವರಾಜ ರಾಯರಡ್ಡಿ ರಾಜ್ಯ ಇಂಧನ ಸಚಿವ ಕೆ.ಜೆ ಜಾಜ್‌ರ್‍ ಅವರಿಗೆ ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ

ಎಲ್ಲೆಲ್ಲಿವೆ ವಿಂಡ್‌ಮಿಲ್‌: ಕುಕನೂರು ತಾಲೂಕಿನ ಬಿನ್ನಾಳ, ಚಿಕೇನಕೊಪ್ಪ, ಯರೇಹಂಚಿನಾಳ, ರಾಜೂರು, ದ್ಯಾಂಪೂರು, ಕುಕನೂರು, ಆಡೂರು, ಯಲಬುಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಸಂಗನಹಾಳ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ವಿಂಡ್‌ಮಿಲ್‌ಗಳು ಸದ್ಯ ಸ್ಥಾಪನೆಯಾಗಿವೆ. ಸುಮಾರು ನೂರಕ್ಕೂ ಹೆಚ್ಚು ವಿಂಡ್‌ಮಿಲ್‌ಗಳ ಸ್ಥಾಪನೆ ಆಗಿದೆ ಹಾಗೂ ಇನ್ನೂ ವಿಂಡ್‌ಮಿಲ್‌ಗಳ ನಿರ್ಮಾಣ ಆಗುತ್ತಿವೆ. ರೈತರ ಜಮೀನುಗಳಿಗೆ ಹಣದ ಆಸೆ ತೋರಿಸಿ ರೈತರಿಂದ ದಲ್ಲಾಳಿಗಳು ಜಮೀನು ಖರೀದಿ ಮಾಡಿ ವಿಂಡ್‌ಮಿಲ್‌ಗಳ ಸ್ಥಾಪನೆ ಮಾಡಿರುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ.

Latest Videos
Follow Us:
Download App:
  • android
  • ios