ಆರೋಪಿಯನ್ನು ಕಾಸರಗೋಡು ನಿವಾಸಿ ಶಹಾಲಾ ಎಂದು ಪೊಲೀಸರು ಗುರುತಿಸಿದ್ದು, ಈಕೆ ತನ್ನ ಮೇಲಿನ ಆರೋಪವನ್ನು ಮೊದಲು ನಿರಾಕರಿಸಿದ್ದಾಳೆ. ಬಳಿಕ, ಈಕೆಯ ದೇಹವನ್ನು ಪರೀಕ್ಷೆ ಮಾಡಿದ ಬಳಿಕ ಪೊಲೀಸರು ವಶಕ್ಕ ಪಡೆದಿದ್ದಾರೆ.

ಕೇರಳದ (Kerala) ಕಾಸರಗೋಡು (Kasaragod) ಮೂಲದ 19 ವರ್ಷದ ಯುವತಿಯನ್ನು (Girl) ಅಕ್ರಮವಾಗಿ ಚಿನ್ನ ಸಾಗಾಣಿಕೆ (Gold Smuggling) ಮಾಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ (Arrest. ದುಬೈನಿಂದ ಕೇರಳದ ಕೋಯಿಕ್ಕೋಡ್‌ ಅಥವಾ ಕರಿಪುರ ಏರ್‌ಪೋರ್ಟ್‌ನಲ್ಲಿ ಈ ಯುವತಿಯನ್ನು ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ಸುಮಾರು 1 ಕೋಟಿ ರೂ. ಮೌಲ್ಯದ 1 ಕೆಜಿ 884 ಗ್ರಾಂ ಮೌಲ್ಯದ ಚಿನ್ನವನ್ನು ಯುವತಿ ಸಾಗಾಟ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಕಸ್ಟಮ್ಸ್‌ ಕ್ಲಿಯರೆನ್ಸ್‌ ಬಳಿಕ ಏರ್‌ಪೋರ್ಟ್‌ನಿಂದ ಹೊರಗೆ ಬರುತ್ತಿದ್ದಾಗೆ ಪೊಲೀಸರಿಗೆ ಸುಳಿವು ದೊರೆತ ಬಳಿಕ ಈಕೆಯನ್ನು ವಶಕ್ಕೆ ಪಡೆಯಲಾಗಿದೆ. 19 ವರ್ಷದ ಯುವತಿ ತನ್ನ ಒಳ ಉಡುಪಿನಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದಳು ಎಂದು ವರದಿಯಾಗಿದೆ.

ಆರೋಪಿಯನ್ನು ಕಾಸರಗೋಡು ನಿವಾಸಿ ಶಹಾಲಾ ಎಂದು ಪೊಲೀಸರು ಗುರುತಿಸಿದ್ದು, ಈಕೆ ತನ್ನ ಮೇಲಿನ ಆರೋಪವನ್ನು ಮೊದಲು ನಿರಾಕರಿಸಿದ್ದಾಳೆ. ಬಳಿಕ, ಈಕೆಯ ದೇಹವನ್ನು ಪರೀಕ್ಷೆ ಮಾಡಿದ ಬಳಿಕ ಪೊಲೀಸರು ವಶಕ್ಕ ಪಡೆದಿದ್ದಾರೆ. ಈಕೆ ಗ್ಯಾಂಗ್‌ವೊಂದರಲ್ಲಿ ಚಿನ್ನ ಸಾಗಾಟ ಮಾಡುವವಳು ಎಂದು ಪೊಲೀಸರು ಶಂಕಿಸಿದ್ದು, ಆಕೆಯನ್ನು ಪ್ರಶ್ನೆ ಮಾಡಲಾಗುತ್ತಿದೆ. 

ಇದನ್ನು ಓದಿ: ಸೆಕ್ಸ್‌ಗಾಗಿ ಮೂವರು ಸಚಿವರ ಒತ್ತಾಯ, ಸ್ಪಪ್ನಾ ಸುರೇಶ್ ಬಿಚ್ಚಿಟ್ಟ ರಹಸ್ಯಕ್ಕೆ ಪಿಣರಾಯಿ ಸರ್ಕಾರ ಗಡಗಡ!

ಕಾಸರಗೋಡು ಮೂಲದ ಈಕೆ ತನ್ನ ಉಡುಪಿನೊಳಗೆ ಮೂರು ಪ್ಯಾಕೆಟ್‌ಗಳಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಾಟ ಮಾಡುತ್ತಿದ್ದಳು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದುಬೈನಿಂದ ರಾತ್ರಿ ಕೇರಳದ ಕೋಯಿಕ್ಕೋಡ್‌ ಅಥವಾ ಕರಿಪುರ ಏರ್‌ಪೋರ್ಟ್‌ಗೆ ರಾತ್ರಿ 10.30ಕ್ಕೆ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಆಗಮಿಸಿದಳು ಎಂದು ತಿಳಿದುಬಂದಿದೆ. ಹಾಗೆ, ಕಸ್ಟಮ್ಸ್ ಕ್ಲಿಯರೆನ್ಸ್‌ ನಂತರ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದೂ ತಿಳಿದುಬಂದಿದೆ. 

ಆರಂಭದಲ್ಲಿ ಮಹಿಳೆ ಚಿನ್ನವನ್ನು ಸ್ಮಗ್ಲಿಂಗ್‌ ಅಥವಾ ಅಕ್ರಮ ಸಾಗಾಟ ಮಾಡಿರುವುದನ್ನು ನಿರಾಕರಿಸಿದ್ದಾಳೆ. ಅಲ್ಲದೆ, ಆಕೆಯ ಲಗೇಜ್‌ ಅನ್ನು ಪರೀಕ್ಷಿಸಿದ ಬಳಿಕವೂ ಚಿನ್ನ ದೊರೆತಿಲ್ಲ. ಆದರೆ, ಆಕೆಯ ಒಳ ಉಡುಪಿನಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ಅಡಗಿಸಲಾಗಿತ್ತು ಎಂದು ತಿಳಿದುಬಂದಿದೆ. 

ಇದನ್ನು ಓದಿ: Sports Braದಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಈ ಏರ್‌ಪೋರ್ಟ್‌ನಲ್ಲಿ ಚಿನ್ನದ ಅಕ್ರಮ ಸಾಗಾಟ ಹೆಚ್ಚಾಗಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆ ಸ್ಮಗ್ಲಿಂಗ್‌ ದಂಧೆಯ ವಿರುದ್ಧ ಜಿಲ್ಲಾ ಪೊಲೀಸರು ಕಣ್ಣಿಟ್ಟಿದ್ದರು. ಅಲ್ಲದೆ, ಈ ಸಂಬಂಧ ವಿಶೇಷ ದಳವನ್ನೂ ಸ್ಥಾಪಿಸಲಾಗಿತ್ತು. ಈ ವಿಶೇಷ ದಳದ ಪೊಲೀಸರು ಏರ್‌ಪೋರ್ಟ್‌ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಅಂತಹ 85 ಪ್ರಯತ್ನಗಳನ್ನು ಈವರೆಗೆ ವಿಫಲಗೊಳಿಸಿದ್ದಾರೆ ಎಂದೂ ತಿಳಿದುಬಂದಿದೆ. ಅಲ್ಲದೆ, ಕೆಲ ಕಸ್ಟಮ್ಸ್‌ ಅಧಿಕಾರಿಗಳು ಸಹ ಸ್ಮಗ್ಲಿಂಗ್‌ ದಂಧೆ ಅಥವಾ ಗ್ಯಾಂಗ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತಿದ್ದಾರೆ ಎಂದೂ ಕಂಡುಬಂದಿದೆ. 

ಸ್ಮಗ್ಲಿಂಗ್‌ ದಂಧೆಯ ಸದಸ್ಯರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿರುವ ಬಗ್ಗೆ ಹಾಗೂ ಶಂಕಿತ ಕೊಲೆಗಳು ನಡೆದಿರುವ ಬಗ್ಗೆಯೂ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಇಂತಹ ಅಕ್ರಮ ಚಿನ್ನ ಸಾಗಾಟದ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ವಿಶೇಷ ದಳವನ್ನೇ ರಚಿಸಿದೆ. 

ಇದನ್ನು ಓದಿ: ಯುಎಇಯಲ್ಲಿ ಮಗಳ ಬ್ಯುಸಿನೆಸ್‌ಗೆ ಸಹಾಯ ಮಾಡಿ ಎಂದು ಶಾರ್ಜಾ ರೂಲರ್‌ಗೆ ಕೇಳಿದ್ದ ಕೇರಳ ಸಿಎಂ!