ಬೆಂಗಳೂರು(ಮಾ. 15) ಬುಡಕಟ್ಟು ಜನಾಂಗಕ್ಕೆ ಸೇರಿದ 18 ವರ್ಷದ ಯುವತಿ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ ನಡೆದು ಹೋಗಿದೆ. 

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅನತಿ ದೂರದಲ್ಲಿರುವ ದೇವನಹಳ್ಳಿ ಬಳಿಯ ಗೆಸ್ಟ್ ಹೌಸ್ ಒಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಯುವತಿ ಮೇಲೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ವಾಹನ ಚಾಲಕರೊಬ್ಬರ ಸಹೋದರ ಅತ್ಯಾಚಾರ ಎಸಗಿದ್ದಾನೆ.

ತ್ರಿಪುರಾದ ಯುವತಿ ಮೇಲೆ ಅತ್ಯಾಚಾರವಾಗಿದೆ. ಮಾರ್ಚ್ 13 ಶುಕ್ರವಾರ ಸಂಜೆ 5 ಗಂಟೆ ವೇಳೆ  ಗೆಸ್ಟ್ ಹೌಸ್ ಶುಚಿಮಾಡಲೆಂದು ಯುವತಿ ಆಗಮಿಸಿದ್ದಾಳೆ.  ಈ ವೇಳೆ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಯುವತಿಯ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ. 

ಮದುವೆ ಆಗ್ತೇನೆ ಎಂದು ಅಪ್ರಾಪ್ತೆ ಮೇಲೆ  ರೇಪ್

ಅಪರಾಧ ಎಸಗಿದ ವಿಕೃತ ಕಾಮಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಯುವತಿ ಮನೆಗೆ ತೆರಳಿ ವಿಷಯ ತಿಳಿಸಿದ್ದಾಳೆ. ಇದಾದ ಮೇಲೆ ಈಶಾನ್ಯ ರಾಜ್ಯಗಳ ಸಹಾಯವಾಣಿಗೆ ಮಾಹಿತಿ ನೀಡಲಾಗಿದೆ.

ಯುವತಿಯನ್ನು ಬಲವಂತವಾಗಿ ರೂಂ ಒಂದಕ್ಕೆ ಎತ್ತಿಕೊಂಡು ಹೋದ ಆರೋಪಿ ಆಕೆಯನ್ನು ಕಟ್ಟಿ ಹಾಕಿ ಥಳಿಸಿದ್ದಾನೆ. ಆಕೆಯ ಮೈಯಿಂದ ರಕ್ತ ಸೋರುತ್ತಿದ್ದರೂ ಪಾಪಿ ತನ್ನ ತೃಷೆ ತೀರಿಸಿಕೊಂಡಿದ್ದಾನೆ.

ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕರೋನಾ ವೈರಸ್ ಭೀತಿ ಇದ್ದ ಕಾರಣ ಸ್ಕಾನಿಂಗ್ ಸಹ ಮಾಡಲು ಸಾಧ್ಯವಾಗಿಲ್ಲ ಎಂದು ಈಶಾನ್ಯ ಒಕ್ಕೂಟದ ಡಾ. ರಾಣಿ ರಾಟ್ಲೆ ಪರಿಸ್ಥಿತಿ ವಿವರಿಸಿದ್ದಾರೆ.

ಇಂಗ್ಲಿಷ್ ನಲ್ಲಿಯೂ ಓದಿ