ಬಿಹಾರದ ಎರಡು ಜಿಲ್ಲೆಗಳಿಂದ 17 ಜನ ಸಾವು ಬಿಹಾರದಲ್ಲಿ ಹೆಚ್ಚಾಗುತ್ತಿದೆ ಕಳ್ಳಭಟ್ಟಿ ದಂಧೆ ಸಾರ್ವಜನಿಕರು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಭಾಗಲ್ಪುರ(ಮಾ.21): ಪಾನ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ಹೋಳಿ ವೇಳೆ ಕಳ್ಳಬಟ್ಟಿಸಾರಾಯಿ ಸೇವಿಸಿ 17 ಜನ ಮೃತಪಟ್ಟಿದ್ದಾರೆ. ಬಿಹಾರದ ಎರಡು ಜಿಲ್ಲೆಗಳಿಂದ 17 ಜನ ಸಾವನಪ್ಪಿರುವ ಘಟನೆ ನಡೆದಿದ್ದು, ಈ ಸಾವಿಗೆ ಕಳ್ಳಬಟ್ಟಿಸೇವನೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾಗಲ್ಪುರ ಜಿಲ್ಲೆಯೊಂದರಲ್ಲೇ 8 ಜನ ಮೃತಪಟ್ಟಿದ್ದಾರೆ. 

ಪಾನ ನಿಷೇಧ ಇರುವ ಕಾರಣ ರಾಜ್ಯದಲ್ಲಿ ಕಳ್ಳಬಟ್ಟಿದಂಧೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಇಂಥ ದುರಂತ ನಡೆಯುತ್ತಿದ್ದು, ಸೂಕ್ತ ಕೈಗೊಳ್ಳಬೇಕೆಂದು ಸಾರ್ವಜನಿಕರು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ತಿಳಿಯುವ ಮುನ್ನವೇ ಶವಗಳನ್ನು ಸುಟ್ಟು ಹಾಕಿದ್ದರಿಂದ ಸಾವಿಗೆ ಸೂಕ್ತ ಕಾರಣಗಳನ್ನು ಕಂಡುಹಿಡಿಯಲಾಗಿಲ್ಲ ಎಂದು ಎಸ್‌ಹೆಚ್‌ಒ ರಾಜ್‌ ಕಿಶೋರ್‌ ಮಂಡಲ್‌ ತಿಳಿಸಿದ್ದಾರೆ.

Tumakuru: 3 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ

35 ಜನರ ಬಲಿ ಪಡೆದ ಕಳ್ಳಬಟ್ಟಿಕೇಸ್‌: ಮುಖ್ಯ ಆರೋಪಿ ಸೆರೆ
ಇತ್ತೀಚೆಗಷ್ಟೇ 35 ಜನರ ಬಲಿಪಡೆದ ಉತ್ತರ ಪ್ರದೇಶದ ಅಲಿಗಢ ಕಳ್ಳಭಟ್ಟಿಸಾರಾಯಿ ಪ್ರಕರಣದ ಮುಖ್ಯ ಆರೋಪಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಲಿಗಢದ ಬಳಿ ಕಳ್ಳಭಟ್ಟಿಸಾರಾಯಿ ಸೇವನೆಯಿಂದ 35 ಮಂದಿ ಬಲಿಯಾಗಿ ಹಲವರು ಅಸ್ವಸ್ಥರಾಗಿದ್ದರು. ಈ ಪೈಕಿ ಮತ್ತಷ್ಟುಮಂದಿ ಸಾವಿಗೀಡಾಗಿದ್ದು, ಅವರೆಲ್ಲರ ಮರಣೋತ್ತರ ಪರೀಕ್ಷೆ ಇನ್ನಷ್ಟೇ ಬರಬೇಕಿದೆ. ತನ್ಮೂಲಕ ಈ ಘಟನೆಯಲ್ಲಿ ಮೃತರ ಸಂಖ್ಯೆ 100ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಸಂಬಂಧ ಈ ಪ್ರಕರಣದ ಮುಖ್ಯ ಆರೋಪಿಯಾದ ರಿಷಿ ಶರ್ಮಾ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಅವನ ಸುಳಿವು ನೀಡಿದವರಿಗೆ 1 ಲಕ್ಷ ರು. ಇನಾಮಿ ಘೋಷಣೆ ಮಾಡಲಾಗಿತ್ತು. ಭಾನುವಾರ ಬೆಳ್ಳಂಬೆಳಗ್ಗೆ ಪಶ್ಚಿಮ ಉತ್ತರ ಪ್ರದೇಶದ ಬುಲಂದ್‌ಶಹರ್‌ ಗಡಿಯ ಬಳಿ ರಿಷಿ ಶರ್ಮಾನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯದಂಗಡಿಗೆ ಕಲ್ಲು ತೂರಿದ ಮಾಜಿ ಸಿಎಂ ಉಮಾಭಾರತಿ

ಕಳ್ಳಬಟ್ಟಿಸೇವಿಸಿ ಮ.ಪ್ರ.ದಲ್ಲಿ 12 ಜನ ಸಾವು
ಕಳ್ಳಬಟ್ಟಿ ರೀತಿಯ ಮದ್ಯ ಸೇವಿಸಿ 12 ಮಂದಿ ಸಾವಿಗೀಡಾದ ಮತ್ತು 7ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ದುರಂತ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಉಜ್ಜೈನಿಯಲ್ಲಿ ಸಾವಿಗೀಡಾದ 16 ಮಂದಿ ಸೇರಿದಂತೆ 3 ತಿಂಗಳ ಅವಧಿಯಲ್ಲಿ ಶಂಕಿತ ಕಳ್ಳಬಟ್ಟಿಸೇವಿಸಿ ಸಾವಿಗೀಡಾದ 2ನೇ ಘಟನೆ ಇದಾಗಿದೆ. ಸಾವಿಗೀಡಾದವರ ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ಬಳಿಕವಷ್ಟೇ ಗ್ರಾಮಸ್ಥರು ಸೇವಿಸಿದ ಮದ್ಯ ವಿಷಯುಕ್ತವಾಗಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರ ಅಸ್ವಸ್ಥರಾಗಿರುವವರಿಗೆ ಗ್ವಾಲಿಯರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಗೃಹ ಸಚಿವ ನರೋತ್ತಮ ಮಿಶ್ರಾ ಅವರು, ‘ಓರ್ವ ಪೊಲೀಸ್‌ ಅಧಿಕಾರಿ ಹಾಗೂ ಯನ್ನು ಅಮಾನತು ಮಾಡಿದ್ದಾರೆ. ಈ ಘಟನೆಯಿಂದ ಅತೀವ ದುಃಖವಾಗಿದೆ. ಪ್ರಕರಣದ ತನಿಖೆಗಾಗಿ ಪ್ರತ್ಯೇಕ ತಂಡ ರವಾನಿಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ಉ.ಪ್ರ.ದಲ್ಲಿ ಮತ್ತೊಬ್ಬ ದುಷ್ಕರ್ಮಿಯ ಎನ್‌ಕೌಂಟರ್‌
ಉತ್ತರ ಪ್ರದೇಶ ಪೊಲೀಸರು ಬುಧವಾರ ಮತ್ತೊಬ್ಬ ದುಷ್ಕರ್ಮಿಯ ಎನ್‌ಕೌಂಟರ್‌ ನಡೆಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಕಳ್ಳಬಟ್ಟಿಸಾರಾಯಿ ದಂಧೆಯ ಕಿಂಗ್‌ಪಿನ್‌ನ ಸೋದರನೊಬ್ಬ ಹತನಾಗಿದ್ದಾನೆ.ಲಿಕ್ಕರ್‌ ಡಾನ್‌ ಧೀಮರ್‌ ಎಂಬಾತನಿಗೆ ಪೊಲೀಸರು ಮಂಗಳವಾರ ಸಮನ್ಸ್‌ ನೀಡಲು ಹೋದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪೊಲೀಸ್‌ ಪೇದೆ ದೇವೇಂದ್ರ ಎಂಬುವವರು ಸಾವನ್ನಪ್ಪಿ, ಮತ್ತೊಬ್ಬ ಪೇದೆ ಗಾಯಗೊಂಡಿದ್ದರು. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಈ ಮಾಹಿತಿ ಪಡೆದ ಪೊಲೀಸರು ಬುಧವಾರ ಮುಂಜಾನೆ ಆರೋಪಿಗಳನ್ನು ಸುತ್ತುವರೆದು ಶರಣಾಗತಿಗೆ ಸೂಚಿಸಿದ್ದರು. ಆದರೆ ದಂಧೆಕೋರರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಧೀಮರ್‌ನ ಸೋದರ ಏಲ್ಕರ್‌ ಸಾವನ್ನಪ್ಪಿದ್ದಾನೆ.