ದಾವಣಗೆರೆಯಲ್ಲಿ ಕಾಡಾನೆ ದಾಳಿಗೆ 16 ವರ್ಷದ ಬಾಲಕಿ ಬಲಿ: ಗ್ರಾಮಕ್ಕೆ ನುಗ್ಗಿದ ಆನೆಗಳು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ  2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

16 year girl killed in forest Elephant attack in Davangere Elephants enter village sat

ದಾವಣಗೆರೆ (ಏ.08): ಕಾಡಿನಿಂದ ಆಹಾರವನ್ನರಸಿ ನಾಡಿನತ್ತ ಬರುವ ಕಾಡಾನೆಗಳು ಆಹಾರವನ್ನು ತಿಂದು ಹೋಗುವುದು ಸಾಮಾನ್ಯವಾಗಿತ್ತು. ಆದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ  2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, ಈ ಘಟನೆಯಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ಕಾಡಾನೆ ದಾಳಿಗೆ ಮಲೆನಾಡು ಪ್ರದೇಶ ಹಾಗೂ ಅರಣ್ಯದಂಚಿನ ಜಿಲ್ಲೆಗಳಾದ ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನ ಗ್ರಾಮಗಳಲ್ಲಿ ಕಾಡಾನೆ, ಚಿರತೆ, ಹುಲಿಗಳ ದಾಳಿಗೆ ಮನುಷ್ಯರ ಸಾವು ಸಾಮಾನಗ್ಯವಾಗಿತ್ತು. ಇನ್ನು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕರಡಿಗಳ ದಾಳಿ ಕಂಡುಬರುತ್ತಿತ್ತು. ಆದರೆ, ಈಗ ಮಧ್ಯ ಕರ್ನಾಟಕದ ಜಿಲ್ಲೆಯಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ  2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿವೆ. ಈ ಘಟನೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. 

ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ: ಡಿಕೆಶಿ

ಕಾಶೀಪುರ ತಾಂಡದಲ್ಲಿ 3 ಜನರಿಗೆ ಗಂಭೀರ ಗಾಯ: 
ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ 2 ಕಾಡಾನೆ ನುಗ್ಗಿವೆ. ಈ ವೇಳೆ ಒಟ್ಟು ನಾಲ್ವರ ಮೇಲೆ ದಾಳಿ ಮಾಡಿವೆ. ಆದರೆ, ಸೋಮಾಲಾಪುರ ಗ್ರಾಮದ 16 ವರ್ಷದ ಬಾಲಕಿ ಕವನಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದ ಮೂರು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಮಂಜಮ್ಮ (43), ಬಾಬ ನಾಯ್ಕ (55 ವರ್ಷ) ಹಾಗೂ ಲಕ್ಷ್ಮೀಬಾಯಿ (40) ಗಾಯಾಳುಗಳು. ಗಾಯಾಳುಗಳು ಕಾಶೀಪುರ ತಾಂಡಾ ಗ್ರಾಮದವರು. ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಕಾಫಿ ತೋಟದ ಮಾಲೀಕನನ್ನೇ ಅಟ್ಟಾಡಿಸಿದ ಕಾಡಾನೆ: 
ಹಾಸನ : ಕಾಫಿ ತೋಟದ ಮಾಲೀಕನನ್ನು ಕಾಡಾನೆಯೊಂದು ಅಟ್ಟಾಡಿಸಿದ ಘಟನೆ ಇಂದು ನಡೆದಿದೆ. ಆದರೆ, ಕೂದಲೆಳೆ ಅಂತರದಲ್ಲಿ ಕಾಫಿ ತೋಟದ ಮಾಲೀಕ ಪಾರಾಗಿದ್ದಾನೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೆನ್ಸಿಲ್ ಕೊರೆ ಎಂಬ ಹೆಸರಿನ ಒಂಟಿಸಲಗದಿಂದ ದಾಳಿ ನಡೆದಿದೆ. ಬೆಳಿಗ್ಗೆ ತಮ್ಮ‌ ಕಾಫಿ ತೋಟದಲ್ಲಿ ವಾಕ್ ಮಾಡುವಾಗ ಎದುರಿನಿಂದ ಕಾಡಾನೆ ಬಂದಿದೆ.

ಕಾಡಾನೆ ಕಂಡ ಕೂಡಲೇ ಕಾಫಿ ತೋಟದ ಮಾಲೀಕ ಓಡಲಿ ಶುರುಮಾಡಿದ್ದಾನೆ. ಆನೆ ಕೂಡ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿದ್ದು, ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರಾಗಿದ್ದಾನೆ. ಇನ್ನು ಕಾಡಾನೆ ಓಡಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಫಿತೋಟದಲ್ಲಿ ಬೀಡು ಬಿಟ್ಟಿರೊ ಆನೆಗಳಿಂದ ಜನರು ಭಯ ಬೀತರಾಗಿದ್ದಾರೆ. ಕೂಡಲೆ ಪುಂಡಾನೆಗಳನ್ನು ಓಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

ಸತತ 8 ದಿನಗಳ ಕಾಲ ಹಗಲು ರಾತ್ರಿ ಕಾರ್ಯಾಚರಣೆ: ವಿದೇಶಿ ಅರಿವ​ಳಿಕೆ ಮದ್ದಿಗೆ ಕೊನೆಗೂ ಶರ​ಣಾದ ಕಾಡಾನೆ!

8 ದಿನಗಳ ಕಾರ್ಯಾಚರಣೆ ಬಳಿಕ ಪುಂಡಾನೆ ಸೆರೆ:ತೀರ್ಥಹಳ್ಳಿಯಲ್ಲಿ ಕಳೆದ ಮೂರು ತಿಂಗಳಿನಿಂದ ತಾಲೂಕಿನ ದೇವಂಗಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣವನ್ನು ಮೂಡಿಸಿದ್ದ ಕಾಡಾನೆಯನ್ನು ಗುರುವಾರ ಸಂಜೆ ದೇವಂಗಿ ಸಮೀಪದ ಮಳೂರು ಗ್ರಾಮದ ಬಳಿ ಎಂಪಿಎಂ ಪ್ಲಾಂಟೇಶನ್‌ (MPM Plantation)ನಲ್ಲಿ ಗುರುವಾರ ಸಂಜೆ ವೇಳೆಗೆ ಸೆರೆಹಿಡಿಯಲಾಗಿದೆ. ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಬಂಧಿಸಿರುವ ಈ ಆನೆಯನ್ನು ನಾಗರಹೊಳೆ ವನ್ಯಜೀವಿ ವಿಭಾಗ (Nagarhole Wildlife Division)ಕ್ಕೆ ಕಳುಹಿಸಿಕೊಡಲಾಗಿದೆ.

Latest Videos
Follow Us:
Download App:
  • android
  • ios