Asianet Suvarna News Asianet Suvarna News

ಹುಬ್ಬಳ್ಳಿ: ದೀಪಾವಳಿ ಜೂಜಾಟ, 152 ಜನ ಬಂಧನ

ಹುಬ್ಬಳ್ಳಿ ನಗರದ ವಿವಿಧೆಡೆ ದಾಖಲಾದ 7 ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 9 ಜನರನ್ನು ಬಂಧಿಸಿ ಒಟ್ಟು ₹29,610 ನಗದು ಹಾಗೂ ಎರಡು ಮೊಬೈಲ್‌ ಜಪ್ತಿ ಮಾಡಿದ್ದಾರೆ. ಅದರಂತೆ ಹು- ಧಾ ಮಹಾನಗರ ವ್ಯಾಪ್ತಿಯಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 152 ಜನ ಜೂಜುಕೋರರನ್ನು ಬಂಧಿಸಿರುವ ಪೊಲೀಸರು, ಒಟ್ಟು 28 ಪ್ರಕರಣ ದಾಖಲಿಸಿ ₹2.89 ಲಕ್ಷ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

152 People Arrested For Gambling During Diwali Festival in Hubballi grg
Author
First Published Nov 14, 2023, 9:55 PM IST

ಹುಬ್ಬಳ್ಳಿ(ನ.14):  ದೀಪಾವಳಿ ಧಮಾಕಾ ಎಂಬಂತೆ ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಬಿಗ್‌ ರೇಡ್‌ ಹಾಕಿರುವ ಪೊಲೀಸರ ತಂಡ, ಇಸ್ಪೀಟ್‌ ಜೂಜಾಟ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ದಲ್ಲಿ ತೊಡಗಿದ್ದ 161 ಜನರನ್ನು ಬಂಧಿಸಿ ಬಿಸಿ ಮುಟ್ಟಿಸಿದೆ.

ನಗರದ ವಿವಿಧೆಡೆ ದಾಖಲಾದ 7 ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 9 ಜನರನ್ನು ಬಂಧಿಸಿ ಒಟ್ಟು ₹29,610 ನಗದು ಹಾಗೂ ಎರಡು ಮೊಬೈಲ್‌ ಜಪ್ತಿ ಮಾಡಿದ್ದಾರೆ. ಅದರಂತೆ ಹು- ಧಾ ಮಹಾನಗರ ವ್ಯಾಪ್ತಿಯಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 152 ಜನ ಜೂಜುಕೋರರನ್ನು ಬಂಧಿಸಿರುವ ಪೊಲೀಸರು, ಒಟ್ಟು 28 ಪ್ರಕರಣ ದಾಖಲಿಸಿ ₹2.89 ಲಕ್ಷ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಧಾರವಾಡದಲ್ಲಿ ಇಸ್ಪೀಟ್ ಅಡ್ಡೆಗಳ ಹಾವಳಿ: ದಂಧೆಕೋರರಿಗೆ ಪೋಲಿಸರ ಭಯವಿಲ್ಲ?

152 ಜನರ ಮೇಲೆ ಪ್ರಕರಣ

ಹು-ಧಾ ಕಮಿಷನರೇಟ್‌ನ ಉತ್ತರ ವಿಭಾಗದ ಗೋಕುಲ್‌ ರೋಡ್‌ ಪೊಲೀಸ್‌ ಠಾಣೆಯಲ್ಲಿ 7, ಉಪನಗರ ಠಾಣೆ 2, ವಿದ್ಯಾನಗರ ಠಾಣೆ 2, ಅಶೋಕನಗರ ಠಾಣೆಯಲ್ಲಿ 2, ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ 1, ಕೇಶ್ವಾಪೂರ ಪೊಲೀಸ್‌ ಠಾಣೆಯಲ್ಲಿ 1, ಎಪಿಎಂಸಿ ನವನಗರ ಪೊಲೀಸ್‌ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 16 ಪ್ರತ್ಯೇಕ ಜೂಜಾಟ ಪ್ರಕರಣ ದಾಖಲಿಸಿ 97 ಜನರನ್ನು ಬಂಧಿಸಿ ₹1.98 ಲಕ್ಷ ರೂ. ನಗದು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದಕ್ಷಿಣ ಉಪವಿಭಾಗದ ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ 03, ಹಳೇಹುಬ್ಬಳ್ಳಿ ಠಾಣೆಯಲ್ಲಿ 01 ಸೇರಿದಂತೆ ಒಟ್ಟು 4 ಪ್ರತ್ಯೇಕ ಜೂಜಾಟ ಪ್ರಕರಣ ದಾಖಲಾಗಿವೆ. ಈ ಪ್ರಕರಣಗಳಲ್ಲಿ 20 ಜನ ಜೂಜುಕೋರರನ್ನು ಬಂಧಿಸಿ ಒಟ್ಟು ₹25,840 ನಗದು ಜಪ್ತಿ ಮಾಡಿದ್ದಾರೆ. ಇನ್ನು ಧಾರವಾಡ ಉಪವಿಭಾಗದ ಉಪನಗರ ಠಾಣೆಯಲ್ಲಿ 4, ಶಹರ ಪೊಲೀಸ್‌ ಠಾಣೆಯಲ್ಲಿ 3, ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 8 ಪ್ರತ್ಯೇಕ ಜೂಜಾಟ ಪ್ರಕರಣ ದಾಖಲಾಗಿವೆ. ಇದರಲ್ಲಿ 35 ಜನ ಜೂಜುಕೋರರನ್ನು ಬಂಧಿಸಿ ₹65,070 ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ದೀಪ ಕಾಯುವ ನೆಪ:

ದೀಪಾವಳಿ ಹಬ್ಬದಲ್ಲಿ ಅಂಗಡಿ, ಫ್ಯಾಕ್ಟರಿ, ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ಮಾಡುವುದು ಮಾಮೂಲಿ. ಪೂಜೆ ಮಾಡಿದ ದಿನ ದೇವಿ ಮುಂದೆ ಹಚ್ಚಿರುವ ದೀಪವನ್ನು ಕಾಯುವುದು ಸಂಪ್ರದಾಯ. ದೀಪ ಕಾಯುವ ನೆಪದಲ್ಲಿ ಜೂಜಾಟ ನಡೆಸಿ ಟೈಂ ಪಾಸ್‌ ಮಾಡುವುದು ಮಾಮೂಲಿ. ದೀಪಾವಳಿಯ ಮೂರು ದಿನಗಳ ಕಾಲ ಎಲ್ಲೆಡೆ ಬರೀ ಜೂಜಾಟ ನಡೆಯುತ್ತಿರುತ್ತದೆ. ಕೋಟಿಗಟ್ಟಲೇ ವ್ಯವಹಾರವೂ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ರೇಡ್‌ ಮಾಡಿ 152 ಜನರನ್ನು ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಡ್ರೀಮ್ 11ನಲ್ಲಿ 1.5 ಕೋಟಿ ರೂ ಗೆದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಶಾಕ್, ಮರುದಿನವೇ ಅಮಾನತು!

ಕ್ರಿಕೆಟ್‌ ಬೆಟ್ಟಿಂಗ್‌ 9 ಜನರ ಬಂಧನ

ಧಾರವಾಡ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯ ಸಿ.ಎಂ. ಗಾರ್ಡ್‌ನ ಬಳಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದವರ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ, ಒಬ್ಬ ಆರೋಪಿಯನ್ನು ಬಂಧಿಸಿ ₹15 ಸಾವಿರ ನಗದು ಹಾಗೂ ಮೊಬೈಲ್‌ ಜಪ್ತಿ ಮಾಡಿದೆ. ಇನ್ನು ವಿದ್ಯಾನಗರದ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾಯಿನಗರದಲ್ಲಿ ಒಬ್ಬನನ್ನು ಬಂಧಿಸಿ ₹2250 ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರೆ, ಧಾರವಾಡ ಉಪನಗರ ಠಾಣೆ ವ್ಯಾಪ್ತಿಯ ಮಾಳಮರದ ಬಳಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ₹2250 ನಗದು ಹಾಗೂ ಮೊಬೈಲ್‌ ಜಪ್ತಿ ಮಾಡಿದ್ದಾರೆ. ಕೇಶ್ವಾಪುರ ಠಾಣೆ ವ್ಯಾಪ್ತಿಯ ರಮೇಶ ಭವನ ಹಾಗೂ ಗೋಪನಕೊಪ್ಪದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ ₹3100 ನಗದು ಜಪ್ತಿ ಮಾಡಿದ್ದಾರೆ. ಗೋಕುಲ್‌ರೋಡ್‌ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಹೊಟೇಲ್‌ ಹಾಗೂ ನೆಹರು ನಗರದಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ ₹7 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

ವಿಶೇಷ ಕಾರ್ಯಾಚರಣೆ ಮೂಲಕ ಜೂಜಾಟ ಹಾಗೂ ಬೆಟ್ಟಿಂಗ್‌ ಪ್ರಕರಣ ದಾಖಲಿಸುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ಶ್ಲಾಘಿಸಿದ್ದಾರೆ.

Follow Us:
Download App:
  • android
  • ios