* ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ * ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ* ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು(ಫೆ.01): ಹದಿನೈದು ವರ್ಷದ ಬಾಲಕಿಯೊಬ್ಬಳು ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಸೋಮವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ(Girl) ತಾಯಿ ಜತೆ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದಳು. ಬೆಳಗ್ಗೆ 9ರ ಸುಮಾರಿಗೆ ಆನ್‌ಲೈನ್ ಕ್ಲಾಸ್ ಎಂದು ತಾಯಿಗೆ ಹೇಳಿ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ಕೆಲವು ಹೊತ್ತಿನ ಬಳಿಕ ತಾಯಿ ತಿಂಡಿಗೆ ಕರೆದರೂ ಬಾಲಕಿ ಹೊರಗೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ಬಾಲಕಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಬಾಲಕಿಗೆ ತಂದೆ ಇಲ್ಲ. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರವೂ(Death Note) ಸಿಕ್ಕಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದೆ ಎಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.
Woman Suicide : ವಸತಿ ಗೃಹದಲ್ಲೇ ಕಾನ್ಸ್ಟೇಬಲ್ ಪತ್ನಿ ಸುಸೈಡ್, ಕಾರಣ ನಿಗೂಢ!
ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ
ಸಿಂಧನೂರು(Sindhanur): ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಳಿ ಇರುವ ಕೆಎಚ್‌ಬಿ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬಳು ವರದಕ್ಷಿಣೆ(Dowry) ಕಿರುಕುಳ ತಾಳಲಾರದೆ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಸಂಜೋತಾ ಮಲ್ಲಿಕಾರ್ಜುನ ರೆಡ್ಡಿ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.
ಈಕೆಯ ಗಂಡ, ಅತ್ತೆ, ಮಾವ, ಮೈದುನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದನ್ನು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಸಂಜೋತಾಳ ತಂದೆ ಲಕ್ಷ್ಮಪ್ಪ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಆಕೆಯ ಮರಣೋತ್ತರ ಪರೀಕ್ಷೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿತು ಎಂದು ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಸೌಮ್ಯ ಹಿರೇಮಠ ತಿಳಿಸಿದ್ದಾರೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ರಾಯಚೂರು(Raichur): ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ಟೇಷನ್ ರಸ್ತೆಯಲ್ಲಿನ ಎಸ್‌ಬಿಐ ವಿಮಾ ಕಚೇರಿಯಲ್ಲಿ ಜರುಗಿದೆ. ಸ್ಥಳೀಯ ಬೋಳಮಾನದೊಡ್ಡಿ ರಸ್ತೆಲ್ಲಿರುವ ಬಡಾವಣೆ ನಿವಾಸಿ ಸುಜೀತ್ (30) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಕೆಲಸವಿದೆ ಎಂದು ಮನೆಯಿಂದ ಕಚೇರಿಗೆ ಬಂದಿರುವ ಯುವಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
Shivamogga: ಮಾನಸಿಕ ಖಿನ್ನತೆಯಿಂದ FDA ಆತ್ಮಹತ್ಯೆಗೆ ಶರಣು
ಫೈನಾನ್ಸ್ ಕಾಟಕ್ಕೆ ನಡುರಸ್ತೆಯಲ್ಲಿ ಸ್ವಂತ ಕ್ರೂಸರ್‌ಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ
ಕೊಪ್ಪಳ(Koppal0: ಲೋನ್(Loan) ಮಾಡಿ ಕ್ರೂಸರ್ ತಂದ ಬಾಗಲಕೋಟೆಯ ಗುಳೇದಗುಡ್ಡದ ಸುಭಾಷ್ ಎಂಬಾತ ಫೈನಾನ್ಸ್ ಅವರ ಕಾಟಕ್ಕೆ ಬೇಸತ್ತು ಕ್ರೂಸರ್‌ಗೆ ಬೆಂಕಿ ಇಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜ.29 ರಂದು ನಗರದ ಬಸ್ ನಿಲ್ದಾಣದ ಮುಂಭಾಗದ ನಡುರಸ್ತೆಯಲ್ಲಿ ಜರುಗಿತ್ತು.
ಬಾಗಲಕೋಟೆಯ ಆರ್‌ಟಿಒ ಕಚೇರಿಯಲ್ಲಿ ಕ್ರೂಸರ್ ನೋಂದಣಿ ಆಗಿದೆ. ಕ್ರೂಸರ್ ಸುಭಾಷ್ ಪತ್ನಿ ಮಂಜುಳಾ ದಾನಸೂರ ಹೆಸರಿನಲ್ಲಿದೆ. ವಾಹನ ಮೇಲೆ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಇದ್ದ ಕಾರಣ, ವೇಳೆಗೆ ಸರಿಯಾಗಿ ಹಣ ಕಟ್ಟಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ವಾಹನವನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿತ್ತು ಎನ್ನಲಾಗಿದೆ. ಅಲ್ಲದೆ ಸಾಲದ ಕಂತು ಕಟ್ಟಿಎಂದು ಪದೇ ಪದೇ ಫೈನಾನ್ಸ್ ಅವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಸುಭಾಷ್ ನಡುರಸ್ತೆಯಲ್ಲಿ ಕ್ರೂಸರ್‌ಗೆ ಬೆಂಕಿ ಹಚ್ಚಿದ್ದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರು. ಧಗಧಗ ಉರಿಯುವ ವಾಹನ ಕಂಡು ಸ್ಥಳೀಯರು ಬೆಚ್ಚಿಬಿದ್ದರು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.
