ಬಾಯಿಗೆ ಟೇಪ್ ಸುತ್ತಿ ಚಾಕುವಿನಿಂದ ಬೆದರಿಸಿ 14ರ ಬಾಲಕಿ ಮೇಲೆ ಅತ್ಯಾಚಾರ!
ಪ್ರತಿ ದಿನ ಒಂದಲ್ಲ ಒಂದು ಭೀಕರ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬೆಚ್ಚಿ ಬೀಳಿಸುವಂತಿದೆ. ಇದೀಗ 14 ವರ್ಷದ ಬಾಲಕಿ ಮೇಲೆ ಭೀಕರ ಅತ್ಯಾಚಾರ ಎಸಗಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಮೊಹಾಲಿ(ಫೆ.07): ಭಾರತದಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ರೇಪ್, ದೌರ್ಜನ್ಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಒಂದಲ್ಲೂ ಒಂದು ಕಡೆ ಈ ಘಟನೆಗಳು ಮರುಕಳಿಸುತ್ತಲೇ ಇದೆ. ಇದೀಗ ಪಂಜಾಬ್‌ನ ಮೊಹಾಲಿಯ ಸ್ಲಂ ವಲಯದಲ್ಲಿ ಭೀಕರ ಅತ್ಯಾಚಾರ ಪ್ರಕರಣ ದಾಖಲಾಗಿದೆ. 14 ವರ್ಷದ ಬಾಲಕಿಯನ್ನು ರಾತ್ರಿ ವೇಳೆ ಧರಧರನೇ ಏಳೆದೊಯ್ದು ಬಾಯಿಗೆ ಟೇಪ್ ಸುತ್ತಿ, ಚಾಕು ತೋರಿಸಿ ಬೆದರಿಸಲಾಗಿದೆ. ಬಳಿಕ ಕೈಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಕಾಣದಾಗ ಪೋಷಕರು ರಾತ್ರಿ ಇಡೀ ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ. ಬಾಲಕಿ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗುಜುರಿ ಕೆಲಸದಲ್ಲಿರುವ ಬಾಲಕಿ ಪೋಷಕರು ಸ್ಲಂ ವಲಯದಲ್ಲಿ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದೇ ವಲಯದಲ್ಲಿ ಗುಜುರಿ ಕೆಲಸ ಮಾಡುತ್ತಿದ್ದ ಆರೋಪಿ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಶನಿವಾರ(ಫೆ.04) ರಾತ್ರಿ 9.30ರ ಸುಮಾರಿಗೆ ಮನೆಯ ಹಿಂಬದಿಯಲ್ಲಿ ಪಾತ್ರೆ ತೊಳೆಯಲು ಮುಂದಾಗಿದ್ದಾಳೆ. ಈ ವೇಳೆ ಹಿಂಬದಿಯಿಂದ ಬಂದ ಕಾಮುಕ, ಬಾಯಿಯನ್ನು ಮುಚ್ಚಿ ಆಕೆಯನ್ನು ಧರಧರನೆ ಎಳೆದೊಯ್ದಿದ್ದಾನೆ.
ಮೂರು ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್, ದೆಹಲಿಯಲ್ಲಿ ಮತ್ತೊಂದು ಭೀಕರ ಕೃತ್ಯ!
ಮನೆಯ ಹಿಂಭಾಗದಲ್ಲಿರುವ ಸಣ್ಣ ಅಂಗಡಿ ಬಳಿ ಎಳೆದೊಯ್ದ ಕಾಮುಕ, ಬಾಲಕಿಯ ಬಾಯಿಯನ್ನು ಟೇಪ್‌ನಿಂದ ಸುತ್ತಿದ್ದಾನೆ. ಬಳಿಕ ಚಾಕು ತೆಗೆದು ಚುಚ್ಚಿ ಸಾಯಿಸುವುದಾಗಿ ಬೆದರಿಸಿದ್ದಾನೆ. ಬಳಿಕ ಕೈ ಹಾಗೂ ಕಾಲು ಕಟ್ಟಿ ಹಾಕಿ ಆಕೆಯ ಮೇಲೆರಗಿದ್ದಾನೆ. ಕಿರುಚಾಡಲು ಆಗದೇ, ವಿರೋಧಿಸಲು ಆಗದೇ ಅಳುತ್ತಲೇ 14ರ ಬಾಲಕಿ ಸಹಿಸಿಕೊಳ್ಳಬೇಕಾಯಿತು. ಅತ್ಯಾಚಾರ ಎಸಗಿದ ಕಾಮುಕ ಪರಾರಿಯಾಗಿದ್ದಾನೆ.
ಇತ್ತ ಪಾತ್ರೆ ತೊಳೆಯುತ್ತಿದ್ದ ಬಾಲಕಿ ನಾಪತ್ತೆಯಾಗಿರುವುದು ಗಮನಿಸಿದ ಪೋಷಕರು ಆತಂಕಗೊಂಡಿದ್ದಾರೆ. ನೆರಮನೆಯವರು ಹಾಗೂ ಸ್ಲಂ ಕಾಲೋನಿಯವರ ಸಹಾಯದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ ಹುಡುಕಾಟ ಆರಂಭಿಸಿದ ಪೋಷಕರಿಗೆ ಬೆಳಗಿನ ಜಾವ 3 ಗಂಟೆಗೆ ಬಾಲಕಿ ಅಂಗಡಿ ಪಕ್ಕದಲ್ಲಿ ಅಸ್ವಸ್ಥಗೊಂಡು ಬಿದ್ದಿರುವುದನ್ನು ಗಮನಿಸಿದ್ದಾರೆ. ಬಾಲಕಿಯ ಬಾಯಿಗೆ ಹಾಕಿದ್ದ ಟೇಪ್ ತೆಗೆದು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮನೆಯಲ್ಲಿ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಇಷ್ಟೇ ಅರೋಪಿ ನೆರೆ ಮನೆಯವನು. ಆತನ ಹೆಸರನ್ನು ಹೇಳಿದ್ದಾರೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಬಾಲಕಿ ನೀಡಿದ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಲಲ್ಲೂ ಬಳಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ವಿಚಾರಣೆ ನಡೆಯುತ್ತಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಆಗಿರುವುದು ಖಚಿತವಾಗಿದೆ.
ಒಂದೇ ಟೈಮಲ್ಲಿ 12 ಯುವತಿಯರೊಂದಿಗೆ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಕಾಮಕ್ರೀಡೆಗೆ ಬಳಕೆ
58ರ ವೃದ್ಧೆ ಮೇಲೆ ಅತ್ಯಾಚಾರ ಬಳಿಕ ಭೀಕರವಾಗಿ ಹತ್ಯೆಗೈದ 16ರ ಬಾಲಕ
16 ವರ್ಷದ ಬಾಲಕನೊಬ್ಬ 58 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ತನ್ನ ಮೇಲೆ ಮೊಬೈಲ್ ಕದ್ದ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಬಾಲಕ ಈ ಕೃತ್ಯ ಎಸಗಿದ್ದ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಬಾಲಕನನ್ನು ವಶಕ್ಕೆ ಪಡೆದಿರುವ ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.