Asianet Suvarna News Asianet Suvarna News

Bengaluru Drug Racket: ಉಡ್ತಾ ಬೆಂಗಳೂರು ಆಗ್ತಿದ್ಯಾ ಸಿಲಿಕಾನ್ ಸಿಟಿ? ಕೇವಲ 15 ದಿನದಲ್ಲಿ 150 ಡ್ರಗ್ಸ್‌ ಕೇಸ್‌

ಅರ್ಥ ವ್ಯವಸ್ಥೆಗೆ ಹಾಗೂ ಯುವ ಜನಾಂಗದ ಮೇಲೆ ಘೋರ ಪರಿಣಾಮಗಳನ್ನು ಬೀರುವ ಮಾದಕ ವಸ್ತು ದಂಧೆಗೆ ಕಡಿವಾಣ ಹಾಕಲು ಏನೆಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದರೂ ಅದು ಸಾಲುತ್ತಿಲ್ಲ.  

130 Cases registered in just 15 Days Has Silicon city Bengaluru Turned To A Drugs Hotspot mnj
Author
Bengaluru, First Published Jun 16, 2022, 4:53 PM IST

ಬೆಂಗಳೂರು (ಜೂ. 16):  ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಪಂಚತಾರಾ ಹೋಟೆಲೊಂದರಲ್ಲಿ ವೀಕೆಂಡ್‌ ಪಾರ್ಟಿ ಹೆಸರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಸೇವನೆ ಕೂಟದ ಮೇಲೆ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿರುವುದು ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಉಡ್ತಾ ಪಂಜಾಬ್‌ನಂತೆ ಸಿಲಿಕಾನ್‌ ಸಿಟಿ ಕೂಡ ಉಡ್ತಾ ಬೆಂಗಳೂರು (Udta Bengaluru) ಆಗ್ತಾ ಇದ್ಯಾ  ಎಂಬ ಸಂಶಯ ಮೂಡುತ್ತಿದೆ.  ಡ್ರಗ್ಸ್ ಜಾಲಕ್ಕೆ ರಾಜಧಾನಿ ಬೆಂಗಳೂರು ಹಾಟ್ ಸ್ಪಾಟ್ ಆಗುತ್ತಿದೆ. ಅರ್ಥ ವ್ಯವಸ್ಥೆಗೆ ಹಾಗೂ ಯುವ ಜನಾಂಗದ ಮೇಲೆ ಘೋರ ಪರಿಣಾಮಗಳನ್ನು ಬೀರುವ ಮಾದಕ ವಸ್ತು ದಂಧೆಗೆ ಕಡಿವಾಣ ಹಾಕಲು ಏನೆಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದರೂ ಅದು ಸಾಲುತ್ತಿಲ್ಲ.  

ಬೆಂಗಳೂರು ಸೇರಿದಂತೆ ದೇಶಾದ್ಯಂತ ನಿತ್ಯ ಅಸಂಖ್ಯಾತ ಮಂದಿ ಡ್ರಗ್ಸ್‌ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಲೇ ಇದ್ದಾರೆ.  ಸದ್ಯ ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕೇಸುಗಳ ಸಂಖ್ಯೆ ಚೆಚ್ಚಿಬೀಳಿಸುವಂತಿದೆ.  ಪಬ್, ಕ್ಲಬ್, ಲೇಟ್ ನೈಟ್ ಪಾರ್ಟಿ, ಕಾಲೇಜಿನಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೀಯುತ್ತಿದ್ದು, ನಗರದಲ್ಲಿ ನಡೆಯುವ ಬಹುತೇಕ ಹೈಎಂಡ್ ಪಾರ್ಟಿಗಳು ಡ್ರಗ್ ಪಾರ್ಟಿಗಳಾಗುತ್ತಿವೆ (Drug Party). 

ದಿನವೊಂದಕ್ಕೆ 10-15 ಡ್ರಗ್ ಕೇಸ್ ದಾಖಲಾಗುತ್ತಿವೆ. ಜೂನ್ 1 ರಿಂದ 15ರ ವರೆಗೆ‌ ಬರೋಬ್ಬರಿ 130 ಕೇಸ್ ದಾಖಲಾಗಿವೆ.  ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಡ್ರಗ್ ಸೇವಿಸುವವರೂ ಕೂಡ ಪೊಲೀಸರು ಬಲೆಗೆ ಬೀಳುತಿದ್ದಾರೆ.  ಜೂನ್ 15 ನೇ ತಾರೀಖಿನೊಂದು ಒಂದೇ ದಿ‌ನ 12 ಎನ್‌ಡಿಪಿಎಸ್ (Narcotic Drugs and Psychotropic Substances Act) ಕೇಸ್ ದಾಖಲಾಗಿವೆ. ಹೀಗಾಗಿ ಸಿಲಿಕಾನ್ ಸಿಟಿ ಇದೀಗ ಡ್ರಗ್ಸ್ ದಂಧೆಯ ಹಾಟ್ ಸಿಟಿಯಾಗಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವ.  

ಇದನ್ನೂ ಓದಿ: 6 ಲಕ್ಷ ಮೌಲ್ಯದ ಸಿಂಥೆಟಿಕ್‌ ಮಾದಕ ವಸ್ತು ಸಾಗಾಟ: ನಾಲ್ವರ ಸೆರೆ

ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳೇ  ಹೆಚ್ಚಾಗಿ ಡ್ರಗ್ಸ್ ದಂಧೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದ್ದು, ಪೊಲೀಸರ ಕೈಗೆ ಸಿಗೋ ಕೇಸ್ ಇಷ್ಟಾದ್ರೆ, ನಗರಾದಾದ್ಯಂತ ಪಸರಿಸಿರುವ ದಂಧೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಡ್ರಗ್ಸ್ ದಂಧೆ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ವಿಸ್ತರಿಸಿರುವಂತೆ ತೋರುತ್ತಿದೆ.  ಇನ್ನು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ದಾಳಿ ವೇಳೆ ಬಾಲಿವುಡ್‌ನ ಪ್ರಸಿದ್ಧ ನಟ ಶಕ್ತಿ ಕಪೂರ್‌ ಅವರ ಪುತ್ರ ಹಾಗೂ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಿದ್ಧಾಂತ್‌ ಕಪೂರ್‌ ಅವರ ಬಂಧನವಾಗಿದೆ. ಕೊನೆಗೆ ಜಾಮೀನಿನ ಮೇಲೆ ಅವರ ಬಿಡುಗಡೆ ಆಗಿದೆ. 

ವಿದೇಶಿ ಮಹಿಳೆ ಬಂಧನ: ಇನ್ನು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಾಣಸವಾಡಿ‌ ಪೊಲೀಸರು ಬಂಧಿಸಿದ್ದಾರೆ. ಫಾತಿಮಾ ಓಮರೀ ಬಂಧಿತ ಮಹಿಳೆ. ಕಮನಹಳ್ಳಿ ಬಳಿ ಇರುವ ಕಾಫಿ ಡೇ ಬಳಿ‌ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡಸಿ ಮಹಿಳೆಯನ್ನು ಬಂಧಿಸಿದ್ದಾರೆ.  ಬಂಧಿತ ಮಹಿಳೆಯಿಂದ 1.5 ಲಕ್ಷ ಬೆಲೆ ಬಾಳುವ ಎಂ ಡಿ ಕ್ರಿಸ್ಟಲ್ ಮಾದಕ ವಸ್ತು ಹಾಗೂ ಒಂದು ಐ ಪೋನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Drugs Party ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ 150 ಸೆಲೆಬ್ರಿಟಿಗಳು ಭಾಗಿ?

ತಾಂಜೇನಿಯಾ ಮೂಲದ ಫಾತಿಮಾ  2018 ರಲ್ಲಿ ಟೂರಿಸ್ಟ್ ವೀಸಾದ ಬಳಸಿ ಭಾರತಕ್ಕೆ ಬಂದಿದ್ದರು.  ವೀಸಾ ಅವಧಿ ಮುಗಿದಿದ್ದರು ಕೂಡ ಅಕ್ರಮವಾಗಿ ಬೆಂಗಳೂರಿನಲ್ಲಿ ‌ವಾಸವಾಗಿದ್ದು, ಮಾದಕ ವಸ್ತುಗಳನ್ನು ಮಾರಾಟ ಮಾಡಿ‌ ಹೈಫೈಯ್ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ.  ಇದೀಗ ಬಾಣಸವಾಡಿ ಪೊಲೀಸರು ಮಹಿಳೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.  

Follow Us:
Download App:
  • android
  • ios