ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ 13 ವರ್ಷದ ಬಾಲಕಿಗೆ ಬ್ಲ್ಯಾಕ್‌ಮೇಲ್, 70 ಸಾವಿರ ಸುಲಿಗೆ!
13 ವರ್ಷದ ಬಾಲಕಿಯ ನ್ಯೂಡ್ ವಿಡಿಯೋ ರೆಕಾರ್ಡ್ ಮಾಡಿದ್ದಲ್ಲದೆ, ಅದೇ ವಿಡಿಯೋ ಇರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ 70 ಸಾವಿರ ಸುಲಿಗೆ ಮಾಡಿದ ಆರೋಪದಲ್ಲಿ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ನವದೆಹಲಿ (ಅ.17): ಆಘಾತಕಾರಿ ಘಟನೆಯೊಂದರಲ್ಲಿ, ಗುಜರಾತ್‌ನ ಮೊರ್ಬಿಯಲ್ಲಿ 13 ವರ್ಷದ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಿ, ವಿಡಿಯೋ ಕಾಲ್‌ನಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿ ಆಕೆಯ ಇನ್‌ಸ್ಟಾಗ್ರಾಮ್ ಸ್ನೇಹಿತರು 70,000 ರೂಪಾಯಿ ಸುಲಿಗೆ ಮಾಡಿದ್ದಾರೆ. ಆಕೆ ಶಾಲೆಗೆ ಹೋಗಲು ನಿರಾಕರಿಸಿದ್ದನ್ನು ಗಮನಿಸಿದ ಆಕೆಯ ತಾಯಿ, ಪರಿಸ್ಥಿತಿಯ ಬಗ್ಗೆ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ತಾಯಿ ತನ್ನ ಮಗಳೊಂದಿಗೆ ಆಪ್ತವಾಗಿ ಮಾತನಾಡಿಸಿ, ಆಗಿರುವ ಕಷ್ಟವನ್ನು ಕೇಳಿದಾಗ ಪುತ್ರಿ ಆಗಿದ್ದೆಲ್ಲವನ್ನೂ ವಿವರಿಸಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಸಂತ್ರಸ್ತೆಯ ಪೋಷಕರು ಮೂರು ತಿಂಗಳ ಹಿಂದೆ ಆಕೆಗಾಗಿ ಸ್ಮಾರ್ಟ್‌ಫೋನ್ ಖರೀದಿಸಿಕೊಟ್ಟಿದ್ದರು. ಸ್ಮಾರ್ಟ್‌ಫೋನ್ ಸಿಕ್ಕಿದ ಬೆನ್ನಲ್ಲಿಯೇ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಇನ್ಸ್‌ಟಾಗ್ರಾಮ್ ಖಾತೆಯನ್ನು ರಚಿಸಿದ್ದಳು. ಈ ವೇಳೆ ಮಿತ್ತಲ್ ಸೋಲಂಕಿ ಎನ್ನುವ ಮಹಿಳೆಯ ಫ್ರೆಂಡ್ ರಿಕ್ವೆಸ್ಟ್‌ಅನ್ನು ಆಕೆ ಸ್ವೀಕರಿಸಿದ್ದಳು. ಈ ವೇಳೆ ಮಿತ್ತಲ್ ಸೋಲಂಕಿ 19 ವರ್ಷದ ಕಿಶನ್ ಪಟೇಲ್ ಎನ್ನುವ ಹುಡಗನನ್ನು ಈ ಹುಡುಗಿಗೆ ಪರಿಚಯಿಸಿದ್ದಳು. ದಿನದಿಂದ ದಿನಕ್ಕೆ ಕಿಶನ್ ಪಟೇಲ್ ಹಾಗೂ ಈಕೆಯ ನಡುವೆ ಸ್ನೇಹ ಬೆಳೆದಿತ್ತು. ಇದನ್ನೂ ಚಾಟ್ ಮಾಡಲು ಕೂಡ ಆರಂಭಿಸಿದ್ದರು. ಅಂದಾಜು ಎರಡು ತಿಂಗಳ ಕಾಲ ಇದು ನಡೆದಿತ್ತು.
ಒಂದು ದಿನ ಕಿಶನ್ ಪಟೇಲ್, ಮೋರ್ಬಿಯ ದೇವಸ್ಥಾನವೊಂದರ ಏಕಾಂತ ಸ್ಥಳದಲ್ಲಿ ಭೇಟಿಯಾಗುವಂತೆ ಹುಡುಗಿಯನ್ನು ಕರೆದಿದ್ದ. ಅಲ್ಲಿಗೆ ಬಂದಿದ್ದ ಹುಡುಗಿಯ ಒಪ್ಪಿಗೆಯಿಲ್ಲದೆ, ಆಕೆಯ ಖಾಸಗಿ ಫೋಟೋಗಳನ್ನು ಕ್ಲಿಕ್ ಮಾಡಿದ್ದ ಆತ ಅಂದಿನಿಂದ ಕಿರುಕುಳ ನೀಡಲು ಆರಂಭಿಸಿದ್ದ. ನಂತರ ಇದೇ ಫೋಟೋ ಇರಿಸಿಕೊಂಡು ಬ್ಲಾಕ್‌ಮೇಲ್ ಮಾಡಲು ಕಿಶನ್ ಪಟೇಲ್ ಆರಂಭಿಸಿದ್ದ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿಯೂ ಬೆದಕರಿ ಹಾಕಿದ್ದ. ಬಳಿಕ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದ ಆತ, ವಿಡಿಯೋ ಕಾಲ್‌ನಲ್ಲಿಯೇ ಹುಡುಗಿಯ ಬಟ್ಟೆ ಬಿಚ್ಚಿಸಿ ಅದನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅದಾದ ಬಳಿಕ, ಆಕೆಯಿಂದ ಹಣಕ್ಕಾಗಿ ಬೇಡಿಕೆಯಿಡಲು ಆರಂಭಿಸಿದ ಆತ ಆಕೆಯ ನಗ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಕಿ ತನ್ನ ಮನೆಯ ಕಬೋರ್ಡ್‌ನಲ್ಲಿಟ್ಟಿದ್ದ 70,000 ರೂ.ನಗದು ಹಾಗೂ ಆಕೆಯ ತಾಯಿಯ ಚಿನ್ನದ ಕಿವಿಯೋಲೆಗಳನ್ನು ಈ ಸಲುವಾಗಿ ಕದ್ದಿದ್ದಾರೆ.ಇತ್ತೀಚೆಗೆ ಆತ ಮೊಬೈಲ್ ನೀಡುವಂತೆ ಆಕೆಗೆ ಬ್ಲಾಕ್ ಮೇಲ್ ಮಾಡಿದ್ದ ಎಂದು ತನಿಖಾಧಿಕಾರಿ ಸಿಎಂ ಕರ್ಕರ್ ತಿಳಿಸಿದ್ದಾರೆ. ದೂರಿನ ಬಳಿಕ ಪೊಲೀಸರು ಭಾನುವಾರ ಪಟೇಲ್ ಅವರನ್ನು ಬಂಧಿಸಿದ್ದಾರೆ. ಈ ನಡುವೆ ಮಿತ್ತಲ್ ಸೋಲಂಕಿಯನ್ನು ಇನ್ನೂ ಬಂಧಿಸಲಾಗಿಲ್ಲ. ಆತನ ವಿರುದ್ಧ 384 (ಸುಲಿಗೆ), 354A (ಲೈಂಗಿಕ ಕಿರುಕುಳ), 354D (ಲೈಂಗಿಕ ಕಿರುಕುಳ), ಮತ್ತು POCSO ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿರ್ಮಾಪಕ ಮಂಚಕ್ಕೆ ಕರೆದ, ಹೆದರಿ ಮೇಕಪ್ ಆರ್ಟಿಸ್ಟ್ ಜೊತೆ ಮಲಗಿದ್ದೆ: ಕರಾಳ ದಿನ ನೆನೆದ ಇಶಾ ಗುಪ್ತಾ