Asianet Suvarna News Asianet Suvarna News

ದೆಹಲಿಯಲ್ಲಿ ಹುಡುಗರೂ ಸುರಕ್ಷಿತರಲ್ಲ, ಅತ್ಯಾಚಾರಗೈದು 12ರ ಬಾಲಕನ ಮೇಲೆ ಮಾರಾಣಾಂತಿಕ ಹಲ್ಲೆ!

ದೇಶದಲ್ಲಿ ಒಂದಲ್ಲಾ ಒಂದು ರಾಜ್ಯಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದೀಗ ದೆಹಲಿಯಲ್ಲಿ ಹುಡುಗರು ಸೇಫ್ ಅಲ್ಲ ಅನ್ನೋ ಆತಂಕ ಎದುರಾಗಿತ್ತಿದೆ. 12 ಹರೆಯದ ಬಾಲಕನ ಮೇಲೆ ನಾಲ್ವರ ಅತ್ಯಾಚಾರ ಎಸೆಗಿ ಮಾರಾಣಾಂತಿಕ ಹಲ್ಲೆ ಮಾಡಲಾಗಿದೆ.

12 year old minor boy allegedly raped by 4 in Delhi and beaten with sticks left for dead ckm
Author
First Published Sep 25, 2022, 7:24 PM IST

ನವದೆಹಲಿ(ಸೆ.25): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕನ ಎಳೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಅತ್ಯಾಚಾರದ ಬಳಿಕ ಕೋಲಿನಿಂದ ಬಡಿದು ಮರಾಣಾಂತಿಕ ಹಲ್ಲೆ ಮಾಡಲಾಗಿದೆ. ಬಾಲಕ ಮೃತಪಟ್ಟಿದ್ದಾನೆ ಎಂದು ಕಾಮುಕರು ತೆರಳಿದ್ದಾರೆ.  ಈ ಘಟನೆ ದೆಹಲಿಯಲ್ಲಿ ಹುಡುಗರು ಎಷ್ಟು ಸೇಫ್ ಅನ್ನೋ ಆತಂಕವನ್ನು ಸೃಷ್ಟಿಸಿದೆ.  12 ಬಾಲಕನ ಟಾರ್ಗೆಟ್ ಮಾಡಿದ ನಾಲ್ವರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ. ತೀವ್ರ ವಿರೋಧ ವ್ಯಕ್ತಪಡಿಸಿದ ಬಾಲಕನ ಕೈ ಕಾಲು ಕಟ್ಟಿ ಹಾಕಲಾಗಿತ್ತು. ತನ್ನನ್ನು ಬಿಟ್ಟು ಬಿಡುವಂತೆ ಬಾಲಕ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆದರೆ ಕಾಮುಕರು ಅತ್ಯಾಚಾರ ಎಸಗಿ ಕೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಈ ಕುರಿತು ದೆಹಲಿ ಮಹಿಳಾ ಆಯೋಗ(delhi women commission) ಸ್ವಯಂಪ್ರೇರಿತ ದೂರು(FIR) ದಾಖಲಿಸಿಕೊಂಡಿದೆ. ಇಷ್ಟೇ ಅಲ್ಲ ದೆಹಲಿ ಪೊಲೀಸರಿಗೆ(Delhi Police) ನೋಟಿಸ್ ನೀಡಿದೆ. ಕುರಿತು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ(12 Year old Boy) ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಬಳಿಕ ದೊಣ್ಣೆಯಿಂದ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ನಮ್ಮ ತಂಡ ದೂರು ದಾಖಲಿಸಿಕೊಂಡಿದೆ ಎಂದು ದೆಹಲಿ ಮಹಿಳಾ ಆಯೋಗದ ಸದಸ್ಯೆ ಸ್ವಾತಿ ಪಾಲಿವಾಲ್ ಹೇಳಿದ್ದಾರೆ. 

Varanasi Rape: ಮಾರ್ಷಿಯಲ್‌ ಆರ್ಟ್ಸ್‌ ತರಬೇತುದಾರನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ..!

ದೊಣ್ಣೆಯಿಂದ ಹಲ್ಲೆ ಮಾಡಿದ ದುರುಳರು(Assault) ಬಾಲಕ ಮೃತಪಟ್ಟಿದ್ದಾನೆ ಎಂದು ತೆರಳಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡ ಬಾಲನಕ ನೋವಿನಲ್ಲೇ ನರಳಿದ್ದಾನೆ.  ಕೆಲ ಹೊತ್ತಿನ ಬಳಿಕ ಬಾಲಕನ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಸಾವು ಬದುಕಿನ ನಡುವೆ ಬಾಲಕ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ. 

5 ವರ್ಷದ ಮಗುವಿನ ಮೇಲೆ ಅತ್ಯಾಚಾರ
ಮಡಿಕೇರಿಯ ಹೊರವಲಯದ ಗ್ರಾಮದಲ್ಲಿ 5 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ನೆರೆಮನೆಯ ಬಾಲಕನಿಂದ ಕೃತ್ಯ ನಡೆದಿದ್ದು, ನೋವಿನಿಂದ ಬಳಲುತ್ತಿದ್ದ ಮಗುವನ್ನು ಆರೋಗ್ಯ ತಪಾಸಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬಾಲಕನನ್ನು ವಶಕ್ಕೆ ಪಡೆದಿದ್ದು, ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಡಿಕೇರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಖಾಸಗಿ ಅಂಗ ಕಚ್ಚಿ ವಿಕೃತಿ

ಮೂರೂವರೆ ವರ್ಷದ ಮಗು ಮೇಲೆ ಅತ್ಯಾಚಾರ
ಆಟವಾಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಮೂರೂವರೆ ವರ್ಷದ ಮಗುವಿನ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ವರಾಹಸಂದ್ರ ಗ್ರಾಮದಲ್ಲಿ ಆ.17ರಂದು ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಳಗಂಚಿ ಗ್ರಾಮದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ವರಾಹಸಂದ್ರ ಗ್ರಾಮದ ಬಾಲಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ. ಬಾಳಗಂಚಿ ಗ್ರಾಮದ ಬಾಲಕಿಯನ್ನು ವರಾಹಸಂದ್ರ ಗ್ರಾಮಕ್ಕೆ ಕರೆತಂದು ಬಾಲಕಿಯ ಸೋದರತ್ತೆ ಸಾಕಿಕೊಂಡಿದ್ದರು. ಪ್ರತಿನಿತ್ಯದಂತೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ತಿನ್ನಲು ಕಡಲೆಕಾಯಿಕೊಟ್ಟು ಆಟವಾಡಿಸುವ ನೆಪದಲ್ಲಿ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಬಾಲಕ ಅತ್ಯಾಚಾರವೆಸಗಿದ್ದಾನೆ. ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಮನೆಯ ಪೋಷಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios