Asianet Suvarna News Asianet Suvarna News

ಮದರಸಾದೊಳಗೆ 12 ವರ್ಷ ಬಾಲಕನ ರುಂಡ ಬೇರ್ಪಟ್ಟ ಮೃತದೇಹ ಪತ್ತೆ, ಮೂವರ ಬಂಧನ!

ಮದರಸದಲ್ಲಿ ಓದುತ್ತಿದ್ದ 12 ವರ್ಷದ ಬಾಲಕ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ದೇಹ ಹಾಗೂ ರುಂಡಗಳನ್ನು ಬೇರ್ಪಡಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ತನಿಕೆ ಆರಂಭಿಸಿರುವ ಪೊಲೀಸರು ಮದರಸಾ ಸೀಲ್‌ಡೌನ್ ಮಾಡಿದ್ದಾರೆ. ಇನ್ನು ಮದರಾದ ಸದಸ್ಯರು, ವಿದ್ಯಾರ್ಥಿಗಳು ಸೇರಿ ಮೂವರನ್ನು ವಿಚಾರಣೆ ಒಳಪಡಿಸಲಾಗಿದೆ.  

12 year old boy behead body found in Madrasa Assam 3 arrested ckm
Author
First Published Aug 13, 2023, 10:38 PM IST

ಅಸ್ಸಾಂ(ಆ.13) ದಾರುಸ್ ಸಲಾಮ್ ಹಫೀಜಿಯಾ ಮದರಸಾದಲ್ಲಿ 12 ವರ್ಷದ ಬಾಲಕ ಮೃತದೇಹ ಪತ್ತೆಯಾಗಿದೆ. ಮದರಸಾದ ಹಾಸ್ಟೆಲ್‌ನ ವಿದ್ಯಾರ್ಥಿಯಾಗಿದ್ದ ಈ ಬಾಲಕನನ್ನು ಬರ್ಬವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಅಸ್ಸಾಂ ಚಾಚರ್ ಜಿಲ್ಲೆಯ ದೋಲಾಯಿಯಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಮದರಸಾ ಸೀಲ್‌ಡೌನ್ ಮಾಡಿದ್ದಾರೆ. ಇನ್ನು ಹಾಸ್ಟೆಲ್ ರೂಂಮೇಟ್ ಹಾಗೂ ಮದರಾಸ ಆಡಳಿತ ಮಂಡಳಿ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ.  ಇದರಲ್ಲಿ ಮೂವರನ್ನು ಬಂಧಿಸಲಾಗಿದೆ.

ಮದರಸಾದ ಹಾಸ್ಟೆಲ್‌ನಲ್ಲಿ ಒಟ್ಟು 7 ವಿದ್ಯಾರ್ಥಿಗಳಿದ್ದರು. ರಾತ್ರಿ ವೇಳೆ ಎಲ್ಲರೂ ಮಾತುಕತೆ ನಡೆಸಿದ್ದಾರೆ. ಆದರೆ ಮರದಿನ ಬೆಳಗ್ಗೆ ಎದ್ದಾಗ ಓರ್ವ ವಿದ್ಯಾರ್ಥಿ ಹತ್ಯೆಯಾಗಿದ್ದ. ಈ ವಿದ್ಯಾರ್ಥಿಯ ಕೊಠಡಿಯಲ್ಲಿದ್ದ ಮತ್ತೊರ್ವ ವಿದ್ಯಾರ್ಥಿ ಬೆಳಗ್ಗೆ ಬಾಲಕನ ಮೃತದೇಹ ಬಿದ್ದಿರುವುದು ಗಮನಿಸಿದ್ದಾನೆ. ತಕ್ಷಣವೇ ಮದರಸಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾನೆ.

ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರಕ್ಕೆ ಅಧಿಕಾರ: ವರದಿ

ಇತ್ತ ವಿದ್ಯಾರ್ಥಿ ಪೋಷಕರಿಗೆ ಮದರಸಾ ಸದಸ್ಯರು ಮಾಹಿತಿ ನೀಡಿದ್ದಾರೆ. ಏಕಾಏಕಿ ಬಾಲಕನ ಸಾವು ಹಲವು ಅನುಮಾನಕ್ಕೆ ಕಾರಣಾಗಿದೆ. ಇತ್ತ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮದರಾ ಸುತ್ತುವರೆದು ತನಿಖೆ ನಡೆಸಿದ್ದಾರೆ. ಇದೇ ವೇಳೆ ಆಡಳಿತ ಮಂಡಳಿ ಸದಸ್ಯರನ್ನು, ಹಾಸ್ಟೆಲ್‌ನಲ್ಲಿದ್ದ ಇತರ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ತನಿಖೆ ತೀವ್ರಗೊಳಿಸಿರುವ ಅಸ್ಸಾಂ ಪೊಲೀಸರು ಸಂಪೂರ್ಣ ಮದರಾಸವನ್ನು ಸೀಲ್‌ಡೌನ್ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ ಅನ್ನೋ ಪ್ರಶ್ನೆಯನ್ನು ಮದರಾಸ ಆಡಳಿತ ಮಂಡಳಿಗೆ ಪೊಲೀಸರು ಕೇಳಿದ್ದಾರೆ. ಈ ಪ್ರಕರಣ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗತೊಡಗಿದೆ. ಬಾಲಕನ ಮೃತದೇಹವನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಅಸ್ಸಾಂನಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅಕ್ರಮ ಹಾಗೂ ಅನಧಿಕೃತ ಮದರಸಾಗಳನ್ನು ಮುಚ್ಚವು ಅತೀ ದೊಡ್ಡ ನಿರ್ದಾರ ತೆಗೆದುಕೊಂಡಿದ್ದರು. ಈ ಮೂಲಕ 600 ಮದರಸಾಗಳನ್ನು ಮುಚ್ಚಲಾಗಿತ್ತು. ಇತ್ತೀಚೆಗೆ ಎಂಐಎಂ ನಾಯಕ ಒವೈಸಿಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದರು. ಈ ವೇಳೆ ಇನ್ನೂ 300 ಮದರಸಾಗಳನ್ನು ಮುಚ್ಚುವುದಾಗಿ ಹೇಳಿದ್ದರು. 

 

1 ಲೀ.ಗಿಂತ ಕಡಿಮೆ ನೀರಿನ ಬಾಟಲ್‌ಗೆ ನಿಷೇಧ: ಅ.2ರಿಂದ ಹೊಸ ನಿಯಮ ಜಾರಿ

 ಲವ್‌ ಜಿಹಾದ್‌ ಮತ್ತು ಮದ್ರಸಾಗಳನ್ನು ನಿಲ್ಲಿಸುವತ್ತ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ‘ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ತೆಲಂಗಾಣ ‘ರಜಾಕರ ರಾಜ್ಯ’ ದಿಂದ ‘ರಾಮರಾಜ್ಯ’ ವಾಗಲಿದೆ. ಲವ್‌ ಜಿಹಾದ್‌ ಅನ್ನು ಅರ್ಥ ಮಾಡಿಕೊಳ್ಳಲು ‘ದ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿ. ಸುಳ್ಳು ಜಾತ್ಯಾತೀತರು ಸಿನಿಮಾ ಸುಳ್ಳು ಎನ್ನುತ್ತಾರೆ. ಅಸ್ಸಾಂನಲ್ಲಿ ಲವ್‌ ಜಿಹಾದ್‌ ಪ್ರಕರಣಗಳನ್ನು ನಿಮಗೆ ತೋರಿಸುತ್ತೇನೆ. ಅದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಅಸ್ಸಾಂನಲ್ಲಿ ಮದರಸಾ ಶಿಕ್ಷಣ, ಬಹುಪತ್ನಿತ್ವವನ್ನು ಕೊನೆಗಾಣಿಸಲು ಕೆಲಸ ಮಾಡಲಾಗುತ್ತಿದೆ ಎಂದು ಉದ್ಘರಿಸಿದರು

Follow Us:
Download App:
  • android
  • ios