Asianet Suvarna News

ಡ್ಯಾನ್ಸ್ ವಿಡಿಯೋ ರೆಕಾರ್ಡ್ ವೇಳೆ ದುಪ್ಪಟ್ಟ ಕೊರಳಿಗೆ ಸುತ್ತಿ 11 ವರ್ಷದ ಬಾಲಕಿ ಸಾವು!

  • 11 ವರ್ಷದ ಬಾಲಕಿ ಬದುಕಿಗೆ ಅಂತ್ಯಹಾಡಿದ ದುಪ್ಪಟ್ಟ
  • ಕೊರಳಿಗೆ ಉಡುಪಿನ ದುಪ್ಪಟ್ಟ ಸುತ್ತಿ ಸಾವು
  • ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
11 year old girl died strangulated with dupatta while she was reportedly making dance video gujarat ckm
Author
Bengaluru, First Published Jun 22, 2021, 3:34 PM IST
  • Facebook
  • Twitter
  • Whatsapp

ಸೂರತ್(ಜೂ.22): ಡ್ಯಾನ್ಸ್ ಮೇಲಿನ ಅತೀಯಾದ ಪ್ರೀತಿಯೋ ಅಥವಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಬೇಕು ಅನ್ನೋ ಹಪಹಪಿತನವೋ ತಿಳಿದಿಲ್ಲ. ಆದರೆ ಚಿಗುರೊಡೆಯುವ ಮುನ್ನವೇ ಬಾಲಕಿ ಬಂದು ಅಂತ್ಯವಾಗಿದ್ದು ದುರಂತ.  ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕೊರಳಿಗೆ ದುಪ್ಪಟ್ಟ ಸುತ್ತಿಕೊಂಡು 11 ವರ್ಷದ ಬಾಲಕಿ ಮೃತಪಟ್ಟ ಘಟನೆ ಗುದರಾತ್‌ನ ಸೂರತ್‌ನಲ್ಲಿ ನಡೆದಿದೆ. 

ತನ್ನ ಮದುವೆಗೆ ಕುಡಿದು ಬಂದವ ಡ್ಯಾನ್ಸ್ ಮಾಡು ಎಂದ.. ವಿವಾಹ ಕ್ಯಾನ್ಸಲ್!...

ಮಹಿದಾಪುರದ ಜದಖಡಿಯಲ್ಲಿ ಈ ಸಾವು ಸಂಭವಿಸಿದೆ. ಬಾಲಕಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮಧ್ಯಾಹ್ನ ಕೆಲಸಕ್ಕೆಂದು ತೆರಳಿದ್ದಾರೆ. 11 ವರ್ಷದ ಬಾಲಕಿ ಹಾಗೂ ಪುಟ್ಟ ಸಹೋದರ ಮಾತ್ರ ಮನೆಯಲ್ಲಿದ್ದರು. ಮನೆಬಿಟ್ಟು ಎಲ್ಲೂ ಹೋಗದಂತೆ ಹಾಗೂ ಪುಟ್ಟ ಸಹೋದರರನ್ನು ನೋಡಿಕೊಳ್ಳುವಂತೆ ಹೇಳಿ ತಾಯಿ ಕೆಲಸಕ್ಕೆ ತೆರಳಿದ್ದಾರೆ.

ಬಾಲಕಿಗೆ ಡ್ಯಾನ್ಸ್ ಮೇಲೆ ತುಸು ಹೆಚ್ಚೇ ಪ್ರೀತಿ ಇತ್ತು. ವಾರಕ್ಕೆ ಹಲವು ಬಾರಿ ಡ್ಯಾನ್ಸ್ ವಿಡಿಯೋ ರೆಕಾರ್ಡ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಳು. ತನ್ನ ದೈನಂದಿನ ಚಟುವಟಿಕೆಯಿಂದ ಚೂಡಿದಾರ, ದುಪ್ಪಟ್ಟ ಹಾಕಿ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಮನೆಯ ಕಿಟಕಿಯ ಗ್ರಿಲ್‌ ಹಾಗೂ ಕೊರಳಿಗೆ ವಿಡಿಯೋ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿದ್ದಾಳೆ.

ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!

ತಂದೆ ಮನೆಗೆ ಬಂದು ನೋಡಿದಾಗ ಪುಟ್ಟ ಬಾಲಕ ಮನೆಯೊಳಗೆ ಆಟವಾಡುತ್ತಿದ್ದರೆ, ಪುತ್ರಿ ಕಿಟಕಿಯ ಕಂಬಿ ಹಾಗೂ ಕೊರಳಿಗೆ ಸುತ್ತಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ನೇತಾಡುತ್ತಿರುವುದು ಗಮನಿಸಿದ್ದಾರೆ. ತಕ್ಷಣವೇ SMIMER ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದ್ದಾರೆ. ಅಷ್ಟರೊಳಗೆ ಬಾಲಕಿ ಪ್ರಾಣ ಪಕ್ಷಿ ಹಾರಿಹೋಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಇದು ದುಪ್ಪಟ್ಟ ಕೊರಳಿಗೆ ಸುತ್ತಿಕೊಂಡು ಸಾವನ್ನಪ್ಪಿದ ಘಟನೆ ರೀತಿ ಕಾಣಿಸುತ್ತಿದೆ. ಆದರೆ ಪ್ರತಿ ದಿನ ಡ್ಯಾನ್ಸ್ ವಿಡಿಯೋ ಮಾಡುತ್ತಿರುವ ಈ ಬಾಲಕಿಗೆ ಈ ರೀತಿ ಆಗಲು ಹೇಗೆ ಸಾಧ್ಯ ಅನ್ನೋ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ. 

ಮರಣೋತ್ತರ ಪರೀಕ್ಷೆ ವರದಿದಾಗಿ ಪೊಲೀಸರು ಕಾಯುತ್ತಿದ್ದಾರೆ. ಆದರೆ ಬಾಲಕಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುಟುಂಬದ ಮೂಲ ನೇಪಾಳವಾಗಿದ್ದು, ಭಾರತಕ್ಕೆ ಬಂದು ನೆಲೆಸಿ ದಶಕಳು ಉರುಳಿದೆ.

Follow Us:
Download App:
  • android
  • ios