ವಾಹನ ಮಾಡಿಫಿಕೇಶನ್ ಅತ್ಯಂತ ಅಪಾಯಕಾರಿ. ವೈರಿಂಗ್‌ನಲ್ಲಿನ ಸಣ್ಣ ಸಮಸ್ಯೆಗೆ ವಾಹನ ಉರಿದು ಭಸ್ಮವಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ವಿದ್ಯುತ್ ಶಾಕ್ ಅವಘಡ ಎದುರಾಗಲಿದೆ. ಇದೀಗ ಕೂಚ್ ಬೆಹಾರ್‌ನಲ್ಲಿ ವೈರಿಂಗ್‌ ಅವ್ಯವಸ್ಥೆಯಿಂದ ವಿದ್ಯುತ್ ಪ್ರವಹಿಸಿ 10 ಮಂದಿ ಮೃತಪಟ್ಟ ಘಟನೆ ನಡೆದಿದೆ. 

ಕೂಚ್ ಬೆಹಾರ್(ಆ.01): ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕ್ ಅಪ್ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್‌ ಅವಘಡಕ್ಕೆ 10 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಜಲ್ಪೇಶ್‌ಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ ಪಿಕ್‌ಗೆ ಅಳವಡಿಸಿದ್ದ ಸೌಂಡ್ ಸಿಸ್ಟಮ್‌ನಿಂದ ವಿದ್ಯುತ್ ಪ್ರವಹಿಸಿದೆ. ಪ್ರಯಾಣದ ಮಧ್ಯೆದಲ್ಲಿ ವಿದ್ಯುತ್ ಶಾಕ್‌ನಿಂದ 10 ಮಂದಿ ಮೃತಪಟ್ಟರೆ, 16 ಮಂದಿ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯದಲ್ಲೇ 10 ಮಂದಿ ಮೃತಪಟ್ಟಿದ್ದರು. ಇನ್ನುಳಿದ 16 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಕ್ ಅಪ್ ವಾಹನದಲ್ಲಿದ್ದ ಜನರೇಟರ್ ಹಾಗೂ ಅಸಮರ್ಪಕ ವೈರಿಂಗ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ಹೇಳಿದೆ.

ಪಿಕ್ ಅಪ್ ವಾಹನದಲ್ಲಿ ಭಾರಿ ಸದ್ದಿನ ಡಿಜೆ ಸಿಸ್ಟಮ್ ಹಾಕಲಾಗಿದೆ. ಭಾರಿ ಶಬ್ದ ಹೊರಸೂಸುವ ಸ್ವೀಕರ್ ಹಾಗೂ ಸೌಂಡ್ ಸಿಸ್ಟಮ್ ಇಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಜನರೇಟರ್ ಅಳವಡಿಸಲಾಗಿದೆ. ಆದರೆ ಇದರ ವೈರಿಂಗ್ ಕಾರ್ಯಗಳು ಅಸಮರ್ಪಕವಾಗಿದೆ. ವೈರಿಂಗ್ ಸಮಸ್ಯೆಯಿಂದ ವಿದ್ಯುತ್ ವಾಹನಕ್ಕೆ ಪ್ರವಹಿಸಿದೆ. ಇದರಿಂದ ವಾಹನದಲ್ಲಿದ್ದವರಿಗೆ ವಿದ್ಯುತ್ ಶಾಕ್ ತಗುಲಿದೆ. ಮೇಖ್ಲಿಗಂಜ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಧ್ಯ ರಾತ್ರಿ ಅವಘಡ ಘಟಿಸಿದ ಬೆನ್ನಲ್ಲೇ ಜನರು ಸೇರಿದ್ದಾರೆ. ಅಸ್ವಸ್ಥಗೊಂಡಿದ್ದ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಜಲ್‌ಪೈಗುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶಾಕ್‌ನಿಂದ ತೀವ್ರವಾಗಿ ಅಸ್ವಸ್ಥಗೊಂಡ 10 ಮಂದಿ ಪ್ರಯಾಣಿಕರು ಆಸ್ಪತ್ರೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ. 

Mandya News: ವಿದ್ಯುತ್ ಶಾಕ್ ತಗುಲಿ ಫುಟ್ಬಾಲ್ ಆಟಗಾರನ ಸ್ಥಿತಿ ಗಂಭೀರ: ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪೋಷಕರು

ಪಿಕ್ ಅಪ್ ವಾಹನದ ಹಿಂಭಾಗದಲ್ಲಿ ವಿದ್ಯುತ್ ಪ್ರವಹಿಸಿ ಪ್ರಯಾಣಿಕರಿಗೆ ಶಾಕ್ ತಗುಲಿದೆ. ತಕ್ಷಣವೆ ವಾಹನ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ. ಇತ್ತ ಪೊಲೀಸರು ವಾಹನ ವಶಪಡಿಸಿಕೊಂಡಿದ್ದು, ಚಾಲನಕ ಪತ್ತೆಗೆ ಬಲೆ ಬೀಸಿದ್ದಾರೆ. 

ಕಂಬ ಮುಟ್ಟಿದ ಬಾಲಕ ವಿದ್ಯುತ್‌ ಪ್ರವಹಿಸಿ ಸಾವು
ಬೆಂಗಳೂರು ರಸ್ತೆ ಬದಿಯ ವಿದ್ಯುತ್‌ ಕಂಬವನ್ನು ಆಕಸ್ಮಿಕವಾಗಿ ಸ್ಪರ್ಶಿಸಿದಾಗ ವಿದ್ಯುತ್‌ ಪ್ರವಹಿಸಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿ ಶನಿವಾರ ನಡೆದಿದೆ. ಕೇರಳ ಮೂಲದ ರುಕ್ಮಾನ್‌ ಸೈಯದ್‌ (12) ಮೃತ ದುರ್ದೈವಿ. ಷರೀಷ್‌ ನಗರದಲ್ಲಿರುವ ತನ್ನ ಸಂಬಂಧಿ ಮನೆ ಬಳಿ ಆಟವಾಡುತ್ತ ರಸ್ತೆ ಬದಿ ವಿದ್ಯುತ್‌ ಕಂಬವನ್ನು ಮಧ್ಯಾಹ್ನ 4ರ ಸುಮಾರಿಗೆ ರುಕ್ಮಾನ್‌ ಮುಟ್ಟಿದ್ದಾನೆ. ಆಗ ವಿದ್ಯುತ್‌ ಪ್ರವಹಿಸಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಮೀನು ವ್ಯಾಪಾರಿ ರಜಾಕ್‌ ಅವರು, ತಮ್ಮ ಮಗನೊಟ್ಟಿಗೆ ಷರೀಫ್‌ ನಗರದಲ್ಲಿರುವ ಸಂಬಂಧಿಕರ ಮನೆಗೆ ಶನಿವಾರ ಬಂದಿದ್ದರು. ಮಧ್ಯಾಹ್ನ ಆಟವಾಡುತ್ತ ರುಕ್ಮಾನ್‌ ಮನೆಯಿಂದ ಹೊರ ಬಂದಾಗ ಈ ಅವಘಡ ಸಂಭವಿಸಿದೆ. ನಾಲ್ಕೈದು ದಿನಗಳಿಂದ ಮಳೆ ಹಿನ್ನೆಲೆಯಲ್ಲಿ ವಿದ್ಯುತ್‌ ಕಂಬದಲ್ಲಿ ತಾಂತ್ರಿಕ ದೋಷದಿಂದ ವಿದ್ಯುತ್‌ ಪ್ರವಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.