ನವದೆಹಲಿ(ಜೂ. 08)  ನವದೆಹಲಿಯ ತಿಲಕ್ ನಗರದಲ್ಲಿ ಘೋರ ಘಟನೆಯೊಂದು ನಡೆದುಹೋಗಿದೆ. ಮರ್ಸೀಡೀಸ್ ಬೆಂಜ್ ಸ್ಪೋರ್ಟ್ ವಾಹನ ಹತ್ತು ವರ್ಷದ ಬಾಲಕಿಯ ಮೇಲೆ ಹರಿದಿದೆ. ವಾಹನ ಚಾಲಕನ ಬಂಧನವಾಗಿದೆ.

ಬಾಲಕಿ ರಾಧಿಕಾ ಪಾರ್ಕಿಂಗ್ ಏರಿಯಾದಲ್ಲಿ ಆಟ ಆಡುತ್ತಿದ್ದರು.  ಈ ವೇಳೆ 31 ವರ್ಷದ ಅಖಿಲೇಶ್ ಕಾರನ್ನು ಹಿಂದಕ್ಕೆ ತೆಗೆದಿದ್ದಾರೆ.  ಈ ವೇಳೆ ಮಗು ಹಿಂದೆ ಇದ್ದಿದ್ದು ಅವರಿಗೆ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತದಲ್ಲಿ ಬಲಿಯಾದ ಪ್ಯಾಟೆ ಹುಡುಗಿ ಮೇಬಿನಾ

ಕಾರು ಹರಿದ ನಂತರ ಬಾಲಕಿಯನ್ನು ದೀನ ದಯಾಳ ಆಸ್ಪತ್ರೆಗೆ ದಾಖಲಿಸುವ ಯತ್ನ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸೇರಿಸುವ ವೇಳೆಗೆ ಆಕೆ ಮೃತಪಟ್ಟಿದ್ದರು. 

ಬಾಲಕಿಯ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಝ್ ಕಾರು ಉದ್ಯಮಿ ಜಸ್ಬೀರ್ ಸಿಂಗ್ ಅವರಿಗೆ ಸೇರಿದ್ದು.

ಪೋರೆನ್ಸಿಕ್ ಲ್ಯಾಬ್  ಸಹ ಸ್ಪಾಟ್ ನಲ್ಲಿ ಪರಿಶೀಲನೆ ಮಾಡಲು ಮುಂದಾಗಿದೆ.  ಬಾಲಕಿಯ ಮೃತದೇಹವನ್ನು ಪೋಸ್ಟ್ ಮಾರ್ಟ್ಂ ನಂತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.