Asianet Suvarna News Asianet Suvarna News

ಕ್ಯಾನ್ಸರ್ ಎದುರು ಹೋರಾಡಿ ಉಸಿರು ಕೈಚೆಲ್ಲಿದ ಕ್ರಿಕೆಟಿಗ ಹೀಥ್ ಸ್ಟ್ರೀಕ್‌, ವೈರಲ್‌ ಆದ ಫೇಕ್‌ ನ್ಯೂಸ್

ಹೀಥ್ ಸ್ಟ್ರೀಕ್‌ ಜಿಂಬಾಬ್ವೆ ತಂಡದ ದಿಗ್ಗಜ ಕ್ರಿಕೆಟಿಗ
ಮಾರಣಾಂತಿಕ ಕ್ಯಾನ್ಸರ್ ಎದುರು ಜೀವನ್ಮರಣ ಹೋರಾಟ ನಡೆಸಿದ್ದ ಹೀಥ್ ಸ್ಟ್ರೀಕ್

 

Zimbabwe cricket legend Heath Streak dies at 49 due to cancer kvn
Author
First Published Aug 23, 2023, 10:29 AM IST

ಹರಾರೆ(ಆ.23): ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀಥ್ ಸ್ಟ್ರೀಕ್‌ ಇಂದು ತಮ್ಮ ಕೇವಲ 49ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮಾರಣಾಂತಿಕ ಕ್ಯಾನ್ಸರ್ ಎದುರು ಜೀವನ್ಮರಣ ಹೋರಾಟ ನಡೆಸಿದ್ದ ಹೀಥ್ ಸ್ಟ್ರೀಕ್ ಇಂದು ಇಹಲೋಕ ತ್ಯಜಿಸಿರುವುದನ್ನು ಅವರ ಸಹ ಆಟಗಾರರು ವದಂತಿ ಹಬ್ಬಿಸಿದ್ದರು.

ಹೀಥ್ ಸ್ಟ್ರೀಕ್‌, ಜಿಂಬಾಬ್ವೆ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇನ್ನು 2000ದಿಂದ 2004ರ ವರೆಗೆ ನಾಯಕನಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಜಿಂಬಾಬ್ವೆ ಪರ 12 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 65 ಟೆಸ್ಟ್ ಹಾಗೂ 189 ಏಕದಿನ ಪಂದ್ಯಗಳನ್ನಾಡಿದ್ದರು. ಹಲವಾರು ಬಾರಿ ಏಕಾಂಗಿಯಾಗಿ ಜಿಂಬಾಬ್ವೆ ತಂಡವನ್ನು ಗೆಲುವಿನ ದಡ ಸೇರಿಸಿದ ಹೆಗ್ಗಳಿಕೆ ಹೀಥ್ ಸ್ಟ್ರೀಕ್‌ ಅವರಿಗಿದೆ. ಇಂದಿಗೂ 100+ ಟೆಸ್ಟ್ ವಿಕೆಟ್ ಕಬಳಿಸಿದ ಜಿಂಬಾಬ್ವೆ ತಂಡದ ಮೊದಲ ಹಾಗೂ ಏಕೈಕ ಬೌಲರ್ ಎನ್ನುವ ಕೀರ್ತಿ ಹೀಥ್ ಸ್ಟ್ರೀಕ್ ಅವರಿಗಿದೆ.

ಹೀಥ್ ಸ್ಟ್ರೀಕ್ ಜತೆ ಹೊಸ ಚೆಂಡಿನೊಂದಿಗೆ ದಾಳಿ ನಡೆಸುತ್ತಿದ್ದ ಹೆನ್ರಿ ಒಲಂಗಾ, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಈ ಕುರಿತಂತೆ ಟ್ವೀಟ್ ಮಾಡಿದ್ದ ಒಲಂಗಾ, "ದುಃಖದ ವಿಚಾರವೇನೆಂದರೆ ನಮ್ಮ ಹೀಥ್ ಸ್ಟ್ರೀಕ್‌, ಮತ್ತೊಂದು ತುದಿಯನ್ನು ಕ್ರಾಸ್‌ ಮಾಡಿದ್ದಾರೆ" ಎಂದು ಸೂಚ್ಯವಾಗಿ ಟ್ವೀಟ್ ಮಾಡಿದ್ದರು.

'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್‌, ಜಾಂಟಿ ರೋಡ್ಸ್‌..!

ಇನ್ನು ಜಿಂಬಾಬ್ವೆ ತಂಡದ ಕ್ರಿಕೆಟಿಗ ಸೀನ್ ವಿಲಿಯಮ್ಸ್, "ಸ್ಟ್ರೀಕಿ, ನನ್ನ ಹಾಗೂ ನನ್ನಂತಹ ಹಲವು ಕ್ರಿಕೆಟಿಗರಿಗೆ ನೀವು ಹಾಗೂ ನಿಮ್ಮ ಕುಟುಂಬ ಹೇಗೆಲ್ಲಾ ನೆರವಾಗಿದ್ದೀರ ಎಂದು ವರ್ಣಿಸಲು ಸಾಧ್ಯವಿಲ್ಲ.ಇಂತಹ ಸುಂದರ ಕುಟುಂಬ ಹಾಗೂ ಇಂತಹ ಪರಂಪರೆಯನ್ನು ಬಿಟ್ಟು ಹೋಗಿರುವ ನಿಮ್ಮನ್ನು ನೆನಪಿಸಿಕೊಂಡರೆ, ಹೃದಯ ಒಡೆದು ಹೋದಂತೆ ಆಗುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದರು

ಹೀಥ್ ಸ್ಟ್ರೀಕ್‌ ಅವರ ಬೌಲಿಂಗ್ ಕೌಶಲ ಜಿಂಬಾಬ್ವೆ ತಂಡದ ಪಾಲಿಗೆ ಒಂದು ರೀತಿ ಆಸ್ತಿಯಾಗಿತ್ತು. ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುತ್ತಿದ್ದ ಹೀಥ್ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 1990 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 2943 ರನ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ದ ಹರಾರೆಯಲ್ಲಿ ಅಜೇಯ 127 ರನ್ ಬಾರಿಸಿದ್ದು, ಹೀಥ್ ಸ್ಟ್ರೀಕ್ ಬಾರಿಸಿದ ಏಕೈಕ ಟೆಸ್ಟ್ ಶತಕ ಎನಿಸಿತ್ತು.

ಏಷ್ಯಾಕಪ್‌ಗೆ ರಾಹುಲ್ ಆಯ್ಕೆಯಾಗಿದ್ದರೂ ಕೆಲ ಪಂದ್ಯ ಆಡೋದು ಡೌಟ್‌..! ಅಗರ್ಕರ್‌ ಕೊಟ್ರು ಮಹತ್ವದ ಸುಳಿವು

ಹೀಥ್ ಸ್ಟ್ರೀಕ್‌ 1993ರಲ್ಲಿ ಪಾಕಿಸ್ತಾನ ವಿರುದ್ದ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಾವಲ್ಪಿಂಡಿಯಲ್ಲಿ ತಾವಾಡಿದ ಎರಡನೇ ಟೆಸ್ಟ್ ಪಂದ್ಯದಲ್ಲೇ 8 ವಿಕೆಟ್ ಕಬಳಿಸುವ ಮೂಲಕ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ಇನ್ನು ಹೀಥ್ ಸ್ಟ್ರೀಕ್‌ 2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಎರಡು ವರ್ಷಗಳ ಅವಧಿಗೆ ವಾರ್ವಿಕ್‌ಶೈರ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಫಾರ್ಮ್‌ ಸಮಸ್ಯೆಯಿಂದಾಗಿ ಒಂದು ವರ್ಷ ಮುಂಚಿತವಾಗಿಯೇ ಅಂದರೆ 2006ರಲ್ಲೇ ಒಪ್ಪಂದದಿಂದ ಹಿಂದೆ ಸರಿದಿದ್ದರು. 2007ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios