ತೆಂಡುಲ್ಕರ್‌ ಭದ್ರತೆ ಇಳಿಸಿ ಆದಿತ್ಯ ಠಾಕ್ರೆ ಭದ್ರತೆ ಹೆಚ್ಚಿಸಿದ ಮಹಾ ಸರ್ಕಾರ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಮಹರಾಷ್ಟ್ರ ಸರ್ಕಾರ ನೀಡಿದ್ದ ಭದ್ರತೆಯನ್ನು ಕಡಿತಗೊಳಿಸಿದೆ. ಇದೇ ವೇಳೆ ಆದಿತ್ಯ ಠಾಕ್ರೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Z Security For Aaditya Thackeray Sachin Tendulkar Downgraded says report

ಮುಂಬೈ[ಡಿ.26]: ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಗಣ್ಯರಿಗೆ ಒದಗಿಸುವ ಭದ್ರತೆ ಪರಿಷ್ಕೃರಿಸಿದ್ದು, ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ಗೆ ಒದಗಿಸಿದ್ದ ಭದ್ರತೆ ಕಡಿತಗೊಳಿಸಿದ್ದರೆ, ನೂತನ ಸಿಎಂ ಉದ್ಧವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಭದ್ರತೆಯನ್ನು ಹೆಚ್ಚಿಸಿದೆ. 

ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

ಇದುವರೆಗೆ ಸಚಿನ್‌ಗೆ ಎಕ್ಸ್‌ ದರ್ಜೆ ಭದ್ರತೆ ಒದಗಿಸಲಾಗಿತ್ತು. ಅದನ್ನೀಗ ಹಿಂದಕ್ಕೆ ಪಡೆಯಲಾಗಿದೆ. ಅದರ ಬದಲು, ಅವರು ಮನೆಯಿಂದ ಹೊರಗೆ ತೆರಳುವ ವೇಳೆ ಅವರಿಗೆ ಪೊಲೀಸ್‌ ವಾಹನದ ಬೆಂಗಾವಲು ಸೇವೆ ಒದಗಿಸಲಾಗುತ್ತದೆ. 

ಸಚಿನ್-ಅಂಜಲಿ ಲವ್ ಸ್ಟೋರಿ: ಮೊದಲ ಭೇಟಿ, ಮೊದಲ ಸಿನೆಮಾ..?

ಇದೇ ವೇಳೆ ವೈ ದರ್ಜೆ ಭದ್ರತೆ ಹೊಂದಿದ್ದ 29 ವರ್ಷದ ಆದಿತ್ಯ ಠಾಕ್ರೆ ಭದ್ರತೆಯನ್ನು ಝಡ್‌ ದರ್ಜೆಗೆ ಹೆಚ್ಚಿಸಲಾಗಿದೆ. ಅಣ್ಣಾ ಹಜಾರೆ ಭದ್ರತೆಯನ್ನು ವೈ ಪ್ಲಸ್‌ನಿಂದ ಝಡ್‌ಗೆ ಹೆಚ್ಚಿಸಲಾಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲ ಉಜ್ವಲ್‌ ನಿಕ್ಕಂ ಮತ್ತು ಹಲವು ಬಿಜೆಪಿ ನಾಯಕರ ಭದ್ರತೆಯಲ್ಲಿ ಕಡಿತ ಮಾಡಲಾಗಿದೆ.
 

Latest Videos
Follow Us:
Download App:
  • android
  • ios