Ind vs WI: ಪ್ರಸಿದ್ಧ ಕೃಷ್ಣ ಸೂಪರ್ ಬೌಲಿಂಗ್, ಟೀಂ ಇಂಡಿಯಾಗೆ ಸರಣಿ ಗೆಲುವು!

ಪ್ರಸಿದ್ಧ ಕೃಷ್ಣ ಭರ್ಜರಿ ಬೌಲಿಂಗ್ ದಾಳಿ
2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ 44 ರನ್ ಜಯ
ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದ ಭಾರತ

Prasidh Krishna led disciplined bowling attack to help India beat West Indies by 44 runs in the second ODI san

ಅಹಮದಾಬಾದ್ (ಫೆ.9): ಕರ್ನಾಟಕದ ಅಗ್ರ ವೇಗಿ ಪ್ರಸಿದ್ಧ ಕೃಷ್ಣ (Prasidh Krishna )  ಮಾರಕ ಬೌಲಿಂಗ್ ದಾಳಿ ಹಾಗೂ ಸೂರ್ಯಕುಮಾರ್ ಯಾದವ್  (Suryakumar Yadav ) ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ ರೋಹಿತ್ ಶರ್ಮ (Rohit Sharma) ನೇತೃತ್ವದ ಭಾರತ ತಂಡ (India) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ತಂಡವನ್ನು 44 ರನ್‌ಗಳಿಂದ ಸೋಲಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಜಯಿಸಿದೆ. 

ಓಡಿಯನ್ ಸ್ಮಿತ್ (2/29), ಅಲ್ಜಾರಿ ಜೋಸೆಫ್ (2/36) ಅವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್, ಭಾರತ ತಂಡವನ್ನು 50 ಓವರ್‌ಗಳಲ್ಲಿ 237-9 ಕ್ಕೆ ಕಟ್ಟಿಹಾಕಿತ್ತು. ಕಡಿಮೆ ಮೊತ್ತವನ್ನು ಬೆನ್ನಟ್ಟಿದ ಆರಂಭಿಕರಾದ ಬ್ರಾಂಡನ್ ಕಿಂಗ್ ಮತ್ತು ಶಾಯ್ ಹೋಪ್ ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭವನ್ನು ನೀಡಲು ಯಶಸ್ವಿಯಾಗಿದ್ದರು.

ಆದರೆ, ಪ್ರಸಿದ್ಧ ಕೃಷ್ಣ ಬೌಲಿಂಗ್ ದಾಳಿ ಆರಂಭಿಸಿದ ಬಳಿಕ ಭಾರತ ಗೆಲುವಿನತ್ತ ಮುಖ ಮಾಡಿತು. ಬ್ರಾಂಡನ್ ಕಿಂಗ್ (18) ಮತ್ತು ಡ್ಯಾರೆನ್ ಬ್ರಾವೋ (1) ಅವರನ್ನು ಸತತ ಓವರ್‌ಗಳಲ್ಲಿ ಔಟ್ ಮಾಡುವ ಮೂಲಕ ಯುವ ವೇಗಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ಗೆ ಆಘಾತ ನೀಡಿದರು. ತಮ್ಮ ಅಚ್ಚುಕಟ್ಟಾದ ಬೌಲಿಂಗ್ ನಿರ್ವಹಣೆಗೆ ಫಲ ಪಡೆದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಶಾಯ್ ಹೋಪ್ (27) ವಿಕೆಟ್ ಉರುಳಿಸಿ ತಂಡಕ್ಕೆ ಮೇಲುಗೈ ನೀಡಿದರು. ನಂತರ 2ನೇ ಸ್ಪೆಲ್ ಮಾಡಲು ಬಂದ ಪ್ರಸಿದ್ಧ ಕೃಷ್ಣ, ಹಂಗಾಮಿ ನಾಯಕ ನಿಕೋಲರ್ ಪೂರನ್ ಅವರನ್ನು 9 ರನ್ ಗೆ ಔಟ್ ಮಾಡಿದ್ದರಿಂದ ವಿಂಡೀಸ್ 4 ವಿಕೆಟ್ ಕಳೆದುಕೊಂಡು ಹಿನ್ನಡೆ ಕಂಡಿತು.
 


ಇದಾದ ಎರಡು ಓವರ್ ಗಳ ಬಳಿಕ, ಶಾರ್ದೂಲ್ ಠಾಕೂರ್ ಜೇಸನ್ ಹೋಲ್ಡರ್ ಅವರನ್ನು 2 ರನ್‌ಗಳಿಗೆ ಔಟ್ ಮಾಡಿದರು. ಇದರಿಂದಾಗಿ 76 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ಸಂಕಷ್ಟಕ್ಕೆ ಸಿಲುಕಿತು. ಇನ್ನೊಂದೆಡೆ ಶಮರ್ ಬ್ರೂಕ್ಸ್ ತಂಡದ ಇನ್ನಿಂಗ್ಸ್ ಗೆ ಹೋರಾಟ ತುಂಬುವ ಮೂಲಕ 43 ರನ್ ಬಾರಿಸಿದ್ದರು. ಇವರ ವಿಕೆಟ್ ಅನ್ನು ಉರುಳಿಸಿದ ದೀಪಕ್ ಹೂಡಾ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಸಾಧನೆ ಮಾಡಿದರು.

Ind vs WI: ಸೂರ್ಯ ಅರ್ಧಶತಕ, ವಿಂಡೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ
ಆ ಬಳಿಕ ಅಕೀಲ್ ಹೊಸೇನ್ (34) ಹಾಗೂ ಫ್ಯಾಬಿಯನ್ ಅಲೆನ್ (13) 7ನೇ ವಿಕೆಟ್‌ ಗೆ 42 ರನ್ ಜೊತೆಯಾಟವಾಡಿದರು. ಆದರೆ, ಈ ಜೊತೆಯಾಟವನ್ನು ಬೇರ್ಪಡಿಸಿದ ಮೊಹಮದ್ ಸಿರಾಜ್ ಗೆಲುವಲ್ಲಿ ಖಚಿತಪಡಿಸಿದರೆ, ಹೊಸೇನ್ ವಿಕೆಟ್ ಅನ್ನು ಶಾರ್ದೂಲ್ ಠಾಕೂರ್ ಪಡೆದರು.  ಇನ್ನೇನು ವೆಸ್ಟ್ ಇಂಡೀಸ್ ತಂಡದ ಹೋರಾಟ ಮುಗಿಯುತು ಎನ್ನುವ ಹಂತದಲ್ಲಿ ಆಲ್ರೌಂಡರ್ ಒಡಿಯನ್ ಸ್ಮಿತ್ ಕೆಲವು ಆಕರ್ಷಕ ಶಾಟ್ ಗಳನ್ನು ಬಾರಿಸಿದರು. ಆದರೆ, ಇವರು 24 ರನ್ ಬಾರಿಸಿದ್ದ ವೇಳೆ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ನೀಡಿದರು. ಇದರ ಬೆನ್ನಲ್ಲಿಯೇ ಪ್ರಸಿದ್ಧ ಕೃಷ್ಣ ಕೇಮಾರ್ ರೋಚ್ ವಿಕೆಟ್ ಉರುಳಿಸಿದ್ದರಿಂದ ವಿಂಡೀಸ್ 46 ಓವರ್ ಗಳಲ್ಲಿ 193 ರನ್ ಗೆ ಆಲೌಟ್ ಆಯಿತು.

1000th ODI : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಗೆಲುವು!
ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ಗೆ 237  (ಸೂರ್ಯಕುಮಾರ್ ಯಾದವ್ 64, ಕೆಎಲ್ ರಾಹುಲ್ 49; ಒಡಿಯನ್ ಸ್ಮಿತ್ 29ಕ್ಕೆ 2, ಅಲ್ಜಾರಿ ಜೋಸೆಫ್ 36ಕ್ಕೆ 2) ವೆಸ್ಟ್ ಇಂಡೀಸ್ : 46 ಓವರ್ ಗಳಲ್ಲಿ 193ಕ್ಕೆ ಆಲೌಟ್ (ಶಮರ್ ಬ್ರೂಕ್ಸ್ 44, ಅಕೇಲ್ ಹೊಸೇನ್ 34, ಪ್ರಸಿದ್ಧ ಕೃಷ್ಣ 12ಕ್ಕೆ 4, ಶಾರ್ದೂಲ್ ಠಾಕೂರ್ 4ಕ್ಕೆ 2). ಪಂದ್ಯಶ್ರೇಷ್ಠ: ಪ್ರಸಿದ್ಧ ಕೃಷ್ಣ

Latest Videos
Follow Us:
Download App:
  • android
  • ios